ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ "ಶುಭಕೃತು” ನಾಮಸಂವತ್ಸರದ ಚೈತ್ರ ಶುದ್ಧ ಚತುರ್ದಶಿ ಶುಕ್ರವಾರ ದಿನಾಂಕ 15-4-2022 ರಿಂದ 17-4-2022 ರವರೆಗೆ ಶ್ರೀ ಅಖಂಡ ರಾಮಕೋಟಿ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಅಖಂಡ ಶ್ರೀರಾಮಭಜನೆ, ಶ್ರೀ ರಾಮಪಟ್ಟಾಭಿಷೇಕ, ಹಾಗೂ ಶ್ರೀರಾಮತಾರಕ ಯಜ್ಞವನ್ನು ನೆರವೇರಿಸಲಾಗುವುದು.
*ಮೂರು ದಿನಗಳ ಕಾಲದ ವೇಳಾಪಟ್ಟಿ ಹೀಗಿದೆ*
ದಿನಾಂಕ : 15-04-2022 ಶುಕ್ರವಾರ ಚೈತ್ರ ಶುದ್ಧ ಚತುರ್ದಶಿ ಸಂಜೆ : 6-30 ಕ್ಕೆ ಶ್ರೀ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ,ಕಲಶಸ್ಥಾಪನೆ, ಕಲಶಾರಾಧನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ
ದಿನಾಂಕ : 16-04-2022 ಶನಿವಾರ ಚೈತ್ರ ಶುದ್ಧ ಪೂರ್ಣಿಮ ಬೆಳಗ್ಗೆ 6-00 ಘಂಟೆಗೆ ಶ್ರೀ ಮಹಾಗಣಪತಿ ಪ್ರಾರ್ಥನೆ, ಕಲಶಾರಾಧನೆ, ಶ್ರೀ ಅರುಣಪೂರ್ವಕ ಸೂರ್ಯನಮಸ್ಕಾರ, ಶ್ರೀ ಸ್ವಾಮಿಯವರಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಸಹಸ್ರಮೋದಕ ಶ್ರೀಮಹಾಗಣಪತಿಹೋಮ, ಶ್ರೀ ಅಖಂಡರಾಮಕೋಟ ಜ್ಯೋತಿ ಸ್ಥಾಪನೆ ನಂತರ ಶ್ರೀ ರಾಮಭಜನಾ ಮಂಡಲಯವರಿಂದ ಅಖಂಡರಾಮ ಭಜನೆ (ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು,ಮಾಕಾರಹಳ್ಳಿ ವೃಂದದವರಿಂದ) ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ
ಸಂಜೆ 6-30ಕ್ಕೆ ಶ್ರೀ ಸೀತಾ ರಾಮ ಕಲ್ಯಾಣೋತ್ಸವ ಹಾಗೂ ಕೋಲಾಟ,ಮಹಾಮಂಗಳಾರತಿ, ಪ್ರಸಾದ ವಿನಿಯೋಗ
ದಿನಾಂಕ : 17-04-2022 ಭಾನುವಾರ ಚೈತ್ರ ಬಹುಳ ಪ್ರತಿಪತ್ ಬೆಳಗ್ಗೆ 6-00 ಘಂಟೆಗೆ ಶ್ರೀ ಮಹಾಗಣಪತಿಪೂಜೆ, ಕಲಶಾರಾಧನೆ,ಶ್ರೀ ಸ್ವಾಮಿಯವರಿಗೆ ಫಲ ಪಂಚಾಮೃತಾಭಿಷೇಕ, ರುದ್ರಾಷೇಕ, ಶ್ರೀ ರಾಮತಾರಕ ಹೋಮ, ನವಗ್ರಹ, ಮೃತ್ಯುಂಜಯ, ಆಯುಷ್ಯ ಹೋಮ, ನಕ್ಷತ್ರ ಹೋಮಾದಿಗಳು, ಶ್ರೀರಾಮ ಪಟ್ಟಾಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀ ಅಖಂಡ ಕೋಟಿರಾಮಭಜನೆ, ಮಂಗಳಾಚರಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಹಾ ಅನ್ನಸಂತರ್ಪಣೆ ನಡೆಯಲಿದೆ.ಸಮಸ್ತ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಮೇಲ್ಕಂಡ ಈ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಈ ಮಹತ್ಕಾರ್ಯವನ್ನು ನೆರವೇರಿಸಲು ತನು-ಮನ-ಧನ-ಧಾನ್ಯ ಸಹಾಯ ಹಸ್ತನೀಡಿ ದೇವತಾ ಕೈಂಕರ್ಯವನ್ನು ಯಶಸ್ವಿಗೊಳಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ