ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಪಂನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಹುಳಿಯಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲೀಲಾ.ಬಿ ಎಸ್, ಮಹಿಳೆಯರ ಜವಾಬ್ದಾರಿಗಳ ಬಗ್ಗೆ ಉಪನ್ಯಾಸ ನೀಡಿದರು.ಗ್ರಾಪಂ ವತಿಯಿಂದ ಉನ್ನತ ವ್ಯಾಸಂಗ ಮಾಡುತಿರುವ ವಿದ್ಯಾರ್ಥಿನಿಯರಾದ ಕು.ಚೇತನಾ, ಕು.ಚೈತ್ರ, ಕು.ಚಂದನ & ಕು.ರಕ್ಷಿತಾ ಅವರಿಗೆ ಪ್ರೋತ್ಸಹ ಧನದ ಚೆಕ್ ವಿತರಿಸಲಾಯಿತು.ನಿವೃತ ವ್ಯವಸ್ಥಾಪಕ ಕುಮಾರಸ್ವಾಮಿ ಮಹಿಳೆಯರಿಗೆ ಇನ್ಶೂರೆನ್ಸ್ ಬಗ್ಗೆ ತಿಳಿಸಿದರು.ಜಲ್ ಜೀವನ್ ಮಿಷನ್ ಬಗ್ಗೆ ಕಲಾ ತಂಡದವರು ಕಿರು ನಾಟಕ ಪ್ರದರ್ಶಿಸಿದರು..
ಆಲದಕಟ್ಟೆ ಗ್ರಾಮದ ಲಕ್ಷೀದೇವಮ್ಮ ತಂಡದವರು ಲಂಬಾಣಿ ನೃತ್ಯ ಪ್ರದರ್ಶಿಸಿದರು.ಜೋಡಿಕಲ್ಲೇನಹಳ್ಳಿ ಗ್ರಾಮದ ಮಲ್ಲಮ್ಮನವರ ತಂಡದವರು ಕಿರು ಹಾಸ್ಯ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದೆ ಆಲದಕಟ್ಟೆ ಗ್ರಾಮದ ಶ್ರೀಮತಿ ಲಕ್ಷೀದೇವಮ್ಮ ಹಾಗೂ ನಾಟಿ ವೈದ್ಯೆ ಶ್ರೀಮತಿ ಸಿದ್ದರಾಮಕ್ಕ ಅವರನ್ನು ಸತ್ಕರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ಪ್ರೇಮಲೀಲಾ,ಉಪಾಧ್ಯಕ್ಷರಾದ ಪವನ್ ಕುಮಾರ್ ಹಾಗೂ ಪಿಡಿಓ ಸಿದ್ದರಾಮಣ್ಣ ಮತ್ತು ಸರ್ವ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ಕು.ರೂಪ ನಿರೂಪಿಸಿ,ಅಂ ಕಾ ಕರ್ತೆ ದಾಕ್ಷಾಯಿಣಮ್ಮ ಸ್ವಾಗತಿ,ಪಿಡಿಒ ಸಿದ್ದರಾಮಣ್ಣ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ