ಕೃಷಿ ಕಾಯ್ದೆಗಳ ವಾಪಸಾತಿಗಾಗಿ ಆಗ್ರಹಿಸಿ ಕಾಗೋಡಿನಿಂದ ಜುಂಜಪ್ಪನಗುಡ್ಡೆವರೆಗೆ ಬರುತ್ತಿರುವ ಜನಜಾಗೃತಿ ಜಾಥ ಇಂದು ಚಿಕ್ಕನಾಯಕನಹಳ್ಳಿ - ಹುಳಿಯಾರಿಗೆ
ಗೋಷ್ಠಿಯಲ್ಲಿ ಸಿ.ಡಿ. ಚಂದ್ರಶೇಖರ್ ಮಾಜಿ ಪುರಸಭಾ ಅಧ್ಯಕ್ಷರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ಮೂರು ಕರಾಳ ಕೃಷಿ ಕಾಯಿದೆಗಳ ಜಾರಿಯಿಂದ ರೈತರು ಕೃಷಿ ಕಾರ್ಮಿಕರು ಸ್ಥಳಿಯ ವ್ಯಾಪಾರಿಗಳು ಪಶುಪಾಲನೆ ಮಾಡುವ ಬುಡಕಟ್ಟು ಜನಾಂಗಗಳು ಹೀಗೆ ಹಲವಾರು ಸಮಾಜಗಳು ತೊಂದರೆಗೊಳಗಾಗುವುದರಿಂದ ಈ ಕಾನೂನುಗಳನ್ನು ಈಗಿರುವಂತೆ ಜಾರೀ ಮಾಡದೇ ಈ ಮೇಲೆ ಹೇಳಿದ ಎಲ್ಲರಿಗೂ ಅನಾನುಕೂಲವಾಗದಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಿ ಜಾರಿ ಮಾಡಲು ಆಗ್ರಹಿಸಲು ಈ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಷಡಕ್ಷರಿ ಶಂಕರಲಿಂಗಪ್ಪ ಇವರು ಮಾತನಾಡಿ ಈ ಜಾಥವು ರಾಜ್ಯದ ಮೂರು ದಿಕ್ಕುಗಳಲ್ಲಿ ಪ್ರಾರಂಭವಾಗಿ ಇದೇ ತಿಂಗಳ ಹದಿನೈದರಂದು ಬೆಂಗಳೂರು ತಲುಪುವುದರ ಮೂಲಕ ಈ ಜನ ಜಾಗೃತಿ ಜಾಥಾ ಒಗ್ಗೂಡುವುದೆಂದರು.
ಮಾರ್ಚ್ 9 ರಂದು ಶಿವಮೊಗ್ಗ ಜಿಲ್ಲೆಯ ಕಾಗೋಡಿನಿಂದ ಪ್ರಾರಂಭವಾದ ಈ ಮಾರ್ಗದ ಜಾಥವು ಸಾಗರ-ಸೊರಬ-ಶಿಕಾರಿಪುರ-ಹೊನ್ನಾಳಿ-ಹೊಸನಗರ...
10 ರಂದು ಕುಪ್ಪಳಿ ತೀರ್ಥಹಳ್ಳಿ ಶಿವಮೊಗ್ಗ ಭದ್ರಾವತಿ
11 ರಂದು ತರೀಕೆರೆ ಕಡೂರು ಅರಸೀಕೆರೆ ತಿಪಟೂರು ತಲುಪಿ
12 ರಂದುಬೆಳಿಗ್ಗೆ ತಿಪಟೂರು
ಮಧ್ಯಾಹ್ನ ಒಂದು ಗಂಟೆಗೆ ಕೆ.ಬಿ.ಕ್ರಾಸ್ನಲ್ಲಿ ಸಾರ್ವಜನಿಕ ಸಭೆ ಸೇರಿ
ನಂತರ ತರಬೇನಹಳ್ಳಿ ಷಡಕ್ಷರಿ ಶಂಕರಲಿಂಗಪ್ಪ ಇವರ ತೋಟದಲ್ಲಿ ತುಸು ವಿಶ್ರಾಂತಿ ಪಡೆದು
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ 2:30 ಕ್ಕೆ ಸಾರ್ವಜನಿಕ ಸಭೆ ಸೇರಿ
ಸಂಜೆ 4 ಗಂಟೆಗೆ ಹುಳಿಯಾರಿನಲ್ಲಿ ಸಭೆ ಸೇರಿ
ಶಿರಾದ ಜುಂಜಪ್ಪನ ಗುಡ್ಡೆಯಲ್ಲಿ ವಾಸ್ತವ್ಯ ಮಾಡಿ
ಮಾರ್ಚ್ 13 ರಂದು ಬೆಳಿಗ್ಗೆ ಬಸವಕಲ್ಯಾಣದಿಂದ ಬರುವ ಜಾಥಾದೊಂದಿಗೆ ಸೇರಿಕೊಂಡು,
ಮಲೆಮಹದೇಶ್ವರ ಬೆಟ್ಟದಿಂದ ಹೊರಟ
ಮತ್ತೊಂದು ಜಾಥಾದೊಂದಿಗೆ
ಬೆಂಗಳೂರಿಗೆ ಮಾರ್ಚ್ 15 ರಂದು ತಲುಪುವುದೆಂದು ತಿಳಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ ರೈತರು, ಕೂಲಿ ಕಾರ್ಮಿಕರು, ಬಡವರು, ದಮನಿತರ ಪರವಾಗಿರುವ ಕಾನೂನುಗಳನ್ನು ತರುವುದರ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಸಹಕರಿಸಬೇಕೆಂದರು. ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮಕ್ಕೆ ತಾಲೂಕಿನ ಹಲವಾರು ಸಂಘ ಸಂಸ್ಥೆಗಳು ಸಹಕರಿಸಲಿವೆ ಎಂದು ತಿಳಿಸಿದರು.
ಮೊಹಮ್ಮದ್ ಹುಸೇನ್ ಗುಂಡಣ್ಣ ಮಾತನಾಡಿ ಈ ಸಂದರ್ಭದಲ್ಲಿ ಪಟ್ಟಣದಿಂದ ಮಧ್ಯಾಹ್ನ 12 ಗಂಟೆಗೆ ನೂರಾರು ಬೈಕ್ ಸವಾರರು ಚಿಕ್ಕನಾಯಕನಹಳ್ಳಿ ಪಟ್ಟಣದ ನೆಹರೂ ಸರ್ಕಲ್ ನಿಂದ ಬೈಕ್ ಜಾಥಾ ಹೊರಟು ಕೇಬೀಕ್ರಾಸಿಗೆ ತಲುಪಿ ತಿಪಟೂರಿನ ಜಾಥಾವನ್ನು ಸ್ವಾಗತಿಸಿ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಕರೆತರುವುದರ ಮೂಲಕ ಈ ಜಾಥಾಕ್ಕೆ ಸಹಕಾರ ಕೊಡುವುದಾಗಿ ತಿಳಿಸಿದರು.
ತಾಲೂಕಿನ ರೈತಸಂಘದ ಅಧ್ಯಕ್ಷರಾದ ಹೊನ್ನೆಬಾಗಿ ಉಮೇಶ್ ಹಾಗೂ ಆಮ್ ಆದ್ಮೀ ಪಕ್ಷದ ಅಧ್ಯಕ್ಷರಾದ ಲಿಂಗರಾಜು ಮಾತನಾಡಿ ಈ ಜಾಥಾಕ್ಕೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ರೈತರು ಸಾರ್ವಜನಿಕರು ಸಹಕಾರಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾಕೀರ್ ಹುಸೇನ್ ಮತ್ತಿತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ