ಹುಳಿಯಾರು-ಕೆಂಕೆರೆಯ ಬಿ.ಎಮ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ಬಿ.ಎ. ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ A STUDY VISIT TO AGRARIAN FIELD ಅನ್ನು ಏರ್ಪಡಿಸಿದ ಹಿನ್ನಲೆಯಲ್ಲಿ ಲಿಂಗಪ್ಪನಪಾಳ್ಯದ ಶ್ರೀ ಚಂದ್ರಶೇಖರ್‌ರವರ ತೋಟಕ್ಕೆ ಭೇಟಿ ನೀಡಲಾಯಿತು.
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ| ಫರ್ಹಾನಾಜ್ ಹಾಗೂ ಪ್ರೊ| ಜಯಪ್ರಕಾಶ್ ಅವರ ನೇತೃತ್ವದಲ್ಲಿ ಸುಮಾರು 48-50 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಉನ್ನತಿಗಾಗಿ ಬೇಕಾಗುವ ರೀತಿಯಲ್ಲಿ ತೋಟದ ವೀಕ್ಷಣೆ ನಡೆಸಿದ್ದಲ್ಲದೆ ರೈತ ಚಂದ್ರಶೇಖರ್ ಅವರ ಸಂದರ್ಶನ ನಡೆಸಿ ವಿವರವಾದ ಮಾಹಿತಿ ಪಡೆದರು.
ಪ್ರೊ| ಫರ್ಹಾನಾಜ್ ಅಧ್ಯಯನ ಭೇಟಿಯ ಪ್ರಸ್ತುತತೆಯ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಅಧ್ಯಯನ ಭೇಟಿಗಳ ಅವಶ್ಯಕತೆ, ಪ್ರಸ್ತುತ ನಮ್ಮ ಕೃಷಿ ಕ್ಷೇತ್ರದ ಸ್ಥಿತಿಗತಿ, ಶಿಕ್ಷಣ ಸಂಸ್ಥೆಗಳೇಕೆ ರೈತರೊಂದಿಗೆ ಸಂಪರ್ಕ ಹೊಂದಬೇಕು ಮತ್ತು ಕೃಷಿಯಲ್ಲಿ ಇತ್ತೀಚಿನ ದಿನಗಳಲ್ಲಾಗುತ್ತಿರುವ ಕ್ರಾಂತಿಕಾರಿ ಬೆಳವಣಿಗೆಗೆ ರೈತರ ಕೊಡುಗೆಗಳನ್ನು ಕುರಿತು ಮಾತನಾಡಿದರು. ಪ್ರಸ್ತುತ ಹೊಸ ಶಿಕ್ಷಣ ನೀತಿಯ ಅನುಸಾರ ವಿವಿಧ ರೀತಿಯ ಅಧ್ಯಯನ ಭೇಟಿ ನೀಡುವುದೂ ಪಠ್ಯಕ್ರಮದ ಒಂದು ಭಾಗವಾಗಿರುವುದರಿಂದ ಹಾಗೂ ಇಂತಹ ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯುವುದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇನ್ನೂ ಹೆಚ್ಚಾಗಲು ಸಹಕರಿಸುತ್ತದೆ ಎಂದರು.
ಈ ಭೇಟಿ ಸಂದರ್ಭದಲ್ಲಿ ರೈತರಾದ ಶ್ರೀ ಚಂದ್ರಶೇಖರ್‌ರವರು ತಮ್ಮ ತೋಟಗಾರಿಕೆಯ ವಿಧಾನ, ಲಾಭ ನಷ್ಟ, ಕೃಷಿ ಅನುಭವದ ಜೊತೆಗೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.
ಪ್ರೊ| ಜಯಪ್ರಕಾಶ್‌ರವರು ತೆಂಗು ಗಿಡದ ಬೆಳವಣಿಗೆ ಮತ್ತು ಅದಕ್ಕೆ ಬೇಕಾದ ನೀರಿನ ಪ್ರಮಾಣ, ಪೋಷಣೆ, ತೋಟಗಾರಿಕೆ ಬೆಳೆಗಳ ಮಹತ್ವದ ಬಗ್ಗೆ ವಿವರಿಸಿದರು.
ವಿದ್ಯಾರ್ಥಿಗಳೆಲ್ಲಾ ಸುದೀರ್ಘ ಅಧ್ಯಯನ ನಡೆಸಿ ವರದಿಮಾಡಿಕೊಂಡು ಕಾಲೇಜಿಗೆ ಹಿಂದಿರುಗಿ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ