ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿ.ನಾ.ಹಳ್ಳಿ : ತಾ.27ರ ಗುರುವಾರದಿಂದ ಹೆಚ್ಚುವರಿ ನಫೆಡ್ ಪ್ರಾರಂಭ

                   ಚಿಕ್ಕನಾಯಕನಹಳ್ಳಿ ಉಪಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತಾ.27ರ ಗುರುವಾರದಿಂದ ಹೆಚ್ಚುವರಿ ನಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲಬೆಲೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ. ಈಗಾಗಲೇ ಸೆಪ್ಟಂಬರ್ ತಿಂಗಳವರೆಗೆ ಕೊಬ್ಬರಿ ಬಿಡಲು ರೈತರಿಗೆ ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳು ನೀಡಿದ್ದು, ತಾಲ್ಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ಎಪಿಎಂಸಿ ಅಧ್ಯಕ್ಷ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಹಮತ್ ಉಲ್ಲಾ ಸಂತಸ: ಖರ್ಗೆಗೆ ಕ್ಯಾಬಿನೆಟ್ ದರ್ಜೆ ರೈಲ್ವೆ ಖಾತೆ

                   ಕೇಂದ್ರ ಸರ್ಕಾರದ ಮಹೋನ್ನತ ಹುದ್ದೆಗಳಲ್ಲಿ ಒಂದಾದ ಕ್ಯಾಬಿನೆಟ್ ದರ್ಜೆಯ ರೈಲ್ವೆ ಖಾತೆಯನ್ನು ಕರ್ನಾಟಕದ ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ಪಡುವಂತಹ ಸಂಗತಿಯಾಗಿದೆ ಎಂದು ಮಾಜಿ ರೈಲ್ವೆ ಬೋರ್ಡ್ ಸದಸ್ಯ ಹುಳಿಯಾರಿನ ರಹಮತ್ ಉಲ್ಲಾ ಸಾಬ್ ಸಂತಸ ವ್ಯಕ್ತಪಡಿಸಿದ್ದಾರೆ. ಮಾಜಿ ರೈಲ್ವೆ ಬೋರ್ಡ್ ಸದಸ್ಯ ಹುಳಿಯಾರಿನ ರಹಮತ್ ಉಲ್ಲಾ ಸಾಬ್.                    ಕಾರ್ಮಿಕ ಖಾತೆ ಸಚಿವರಾಗಿದ್ದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಡ್ತಿ ನೀಡುವ ಮೂಲಕ ಅವರನ್ನು ಕೇಂದ್ರ ರೈಲ್ವೆ ಸಚಿವರನ್ನಾಗಿ ಮಾಡಿರುವ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೃದಯಪೂರ್ವಕ ಅಭಿನಂಧನೆ ಸಲ್ಲಿಸಿದ್ದಾರೆ. ಈ ಹಿಂದೆ ಪಿ.ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ (1991-1995) ಕರ್ನಾಟಕದ ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದರು. ಇತ್ತೀಚಿಗೆ ಕೆಎಚ್ ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸ‌ಚಿವರಾಗಿದ್ದರು ಈಗ ಮತ್ತೊಮ್ಮೆ ಕರ್ನಾಟಕದವರು ಈ ಕ್ಯಾಬಿನೆಟ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಕನ್ನಡಿಗರಿಗಾಗಿ ಹೊಸ ಯೋಜನೆಗಳನ್ನು,ಉದ್ಯೋಗಗಳನ್ನು ಕಲ್ಪಿಸಿಕೊಡುವ ಮೂಲಕ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತೆ ಹಾರೈಸಿದ್ದಾರೆ.

ಉತ್ತಮ ತರಬೇತಿಯಿಂದ ಉತ್ತಮ ಸಾಧನೆ ಸಾಧ್ಯ; ರವೀಶ್

                      ಜಗತ್ತಿನಾದ್ಯಂತ ಇಂದು ಹೆಚ್ಚಿನ ತಾಂತ್ರಿಕತೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ ಹಾಗೂ ಅಧಿಕ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು,ಉತ್ತಮ ತರಬೇತಿ ಪಡೆದವರನ್ನು ಗುರ್ತಿಸಿ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ತಾಂತ್ರಿಕಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಉತ್ತಮ ತರಬೇತಿ ಅನಿವಾರ್ಯವಾಗಿದೆ ಎಂದು ಹುಳಿಯಾರು ರೋಟರಿ ಅಧ್ಯಕ್ಷ ಈ.ರವೀಶ್ ತಿಳಿಸಿದರು.                 ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಕಾಲೇಜಿನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ರೋಟರಿ ಸಂಸ್ಥೆವತಿಯಿಂದ ಕಾಲೇಜಿಗೆ ಉಚಿತವಾಗಿ ಕಂಪ್ಯೂಟರನ್ನು ವಿತರಿಸಿ, ಅವರು ಮಾತನಾಡಿದರು. ಹುಳಿಯಾರಿನ ಯೋಗಿನಾರಾಯಣ ಐಟಿಐ ಕಾಲೇಜಿಗೆ ರೋಟರಿ ಸಂಸ್ಥೆವತಿಯಿಂದ ರೋಟರಿ ಅಧ್ಯಕ್ಷ ಈ.ರವೀಶ್ ಉಚಿತವಾಗಿ ಕಂಪ್ಯೂಟರ್ ವಿತರಿಸಿದರು.                ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿಯಿದ್ದು, ಉತ್ತಮ ವಿದ್ಯಾಭ್ಯಾಸವಿದ್ದರೂ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿಯನ್ನು ಎದುರಾಗಿದೆ.ಆದರೆ ತಾಂತ್ರಿಕ ಶಿಕ್ಷಣ ಪಡೆದವರು ತಾವು ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ಕೆಲಸಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು. ಯೋಗಿನಾರಾಯಣ ಐ.ಟಿ.ಐ ಕಾಲೇಜಿನಲ್ಲಿ ಉತ್ತಮ ಶಿಕ್ಷಕರಿದ್ದು ಅ

ನಫೆಡ್ ಕೇಂದ್ರಕ್ಕೆ ಚಾಲನೆ

ಹುಳಿಯಾರಿನ ಎಪಿಎಂಸಿಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ನಫೆಡ್ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿದರು.  ಸಂಸದ ಜಿ.ಎಸ್.ಬಸವರಾಜು, ಎಪಿಎಂಸಿ ಅಧ್ಯಕ್ಷ ಶಿವರಾಜು, ಉಪಾಧ್ಯಕ್ಷ ಸಿದ್ರಾಮಯ್ಯ,  ನಂದಿಹಳ್ಳಿ ಶಿವಣ್ಣ ಇದ್ದಾರೆ.

ತವರು ಕ್ಷೇತ್ರವನ್ನು ಎಂದಿಗೂ ಕಡೆಗಣಿಸಲ್ಲ :ಸಚಿವ ಟಿ.ಬಿ.ಜೆ

                   ತನಗೆ ಮೊದಲ ಬಾರಿ ಗೆಲವು ತಂದು ಕೊಟ್ಟ ಕಳ್ಳಂಬೆಳ್ಳ ಕ್ಷೇತ್ರ ಹಾಗೂ ಕ್ಷೇತ್ರದ ಹೋಬಳಿಗಳಲ್ಲಿ ಪ್ರಮುಖವಾದ ಹುಳಿಯಾರು ಹೋಬಳಿ ತನ್ನ ತವರಿದ್ದಂತೆ,ಇಲ್ಲಿಯ ಜನ ತನ್ನನ್ನು ಮೊದಲ ಬಾರಿ ಶಾಸಕ ಹಾಗೂ ಕೃಷಿಸಚಿವರನ್ನಾಗಿ ಆಯ್ಕೆ ಮಾಡಿದ್ದರು, ಅದರಂತೆ ಈ ಬಾರಿ ಕಾನೂನು ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ  ತನ್ನನ್ನು ಬೆಂಬಲಿಸಿರುವ ತನ್ನ ತವರು ಕ್ಷೇತ್ರದಂತಿರುವ ಹುಳಿಯಾರನ್ನು ಎಂದಿಗೂ ಮರೆಯುವುದಿಲ್ಲ ಹಾಗೂ ಕ್ಷೇತ್ರದ  ಅಭಿವೃದ್ದಿಗಾಗಿ ಶ್ರಮಿಸುವೆ ಎಂದು ರಾಜ್ಯ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.                            ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೆಡ್ ಕೇಂದ್ರದ ಉದ್ಘಾಟನೆ ನೆರವೇರಿಸಿ ಶಿರಾಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಹೋಬಳಿಯ ಸಮಸ್ಯೆಗಳನ್ನು ಆಲಿಸಿದರು. ಹುಳಿಯಾರಿಗೆ ಬುಧವಾರ ಸಂಜೆ ಭೇಟಿ ನೀಡಿದ ಸಚಿವ ಟಿ.ಬಿ.ಜಯಚಂದ್ರ ಜನರ ಸಮಸ್ಯೆಗಳನ್ನು ಆಲಿಸಿದರು.                   ನಾನು ರೈತರ ಸಂಕಷ್ಟವನ್ನು ಅರಿತಿದ್ದು, ಕೃಷಿ ಸಚಿವರಾಗಿದ್ದಾಗ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಅಲ್ಲದೆ ಈ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಕಾರ್ಯವಾಗಿ ತೆಂಗುಬೆಳೆಗಾರರಿಗೆ ಅನುಕೂಲವಾಗುವಂತೆ ಪ್ರ

ಹುಳಿಯಾರಿನಲ್ಲಿ 20 ರಿಂದ ನಫೆಡ್ ಪ್ರಾರಂಭ

            ಇಲ್ಲಿನ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ತಾ.20ರ ಗುರುವಾರದಿಂದ ನಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲಬೆಲೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ.             ನಫೆಡ್ ಕೇಂದ್ರಕ್ಕೆ ಕೊಬ್ಬರಿ ಮಾರುವವರು ಪಹಣಿ ಮತ್ತು ತೋಟಗಾರಿಕೆ ಇಲಾಖೆಯಿಮ್ದ ಪಡೆದ ದಾಸ್ತಾನು ಇಳುವರಿ ದೃಢೀಕರಣ ಪತ್ರ ಹಾಜರು ಪಡಿಸಿ,ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳಿಂದ ಪಡೆಯುಬೇಕಿದೆ. ತಾಲ್ಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಅನುವುಗಾರರಿಗೆ ತರಬೇತಿ ಕಾರ್ಯಕ್ರಮ

ಹುಳಿಯಾರಿನಲ್ಲಿ ಕೃಷಿಇಲಾಖೆವತಿಯಿಂದ ಹಮ್ಮಿಕೊಂಡಿದ್ದದ ಭೂ ಚೇತನ ಯೋಜನೆಯಡಿ ಅನುವುಗಾರರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ನೆರವೇರಿಸಿದರು.ಕೊನೇಹಳ್ಳಿ ಕೃಷಿ ವಿಜ್ಞಾನಿ ಮಮತ,ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್.ಕೃಷ್ಣಪ್ಪ,ಕೃಷಿ ಅಧಿಕಾರಿಗಳಾದ ನೂರುಲ್ಲಾ,ಸೋಮಶೇಖರ್ ಇದ್ದಾರೆ.

ಪ್ರತಿಭಾ ಪುರಸ್ಕಾರ

               ಚಿ.ನಾ.ಹಳ್ಳಿ ತಾಲ್ಲೂಕು ವೀರಶೈವ ನೌಕರರ ಸಂಘದವತಿಯಿಂದ ಜುಲೈ 7ರಂದು ಹುಳಿಯಾರಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.             ಈ ಸಂಧರ್ಭದಲ್ಲಿ ಚಿ.ನಾ.ಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ವ್ಯಾಸಾಂಗ ಮಾಡಿ 2011-12 ಹಾಗೂ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳಿಸಿದ ವೀರಶೈವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಿದ್ದು,ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಹಾಗೂ ಸ್ವವಿಳಾಸವನ್ನು ಸಂಘದ ಕಾರ್ಯದರ್ಶಿಯವರಿಗೆ ತಲುಪಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಎಸ್.ದಿನೇಶ್(9141770710),ಕಾರ್ಯದರ್ಶಿ ಮರುಳಸಿದ್ದಯ್ಯ(9902347085) ಅವರನ್ನು ಸಂಪರ್ಕಿಸಬಹುದಾಗಿದೆ.

ಕೊಬ್ಬರಿ ಖರೀದಿಕೇಂದ್ರ ತೆರೆಯುವಲ್ಲಿ ವಿಳಂಬ: ಗೊಂದಲದಲ್ಲಿ ತೆಂಗು ಬೆಳೆಗಾಗರು

         ಸಂಕಷ್ಟದಲ್ಲಿದ್ದ ತೆಂಗುಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಸದನದಲ್ಲಿ ಚರ್ಚೆ ನಡೆದು ಜೂನ್ ಹನ್ನೆರಡರಿಂದಲೇ ಕೊಬ್ಬರಿ ಉತ್ಪಾದನಾ ಪ್ರದೇಶಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ (ನಾಫೆಡ್) ತೆರೆದು ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಸಹಾಯಧನ ಸೇರಿದಂತೆ 6500ರೂಗೆ ಖರೀದಿಸುವಂತೆ ರಾಜ್ಯ ಸರ್ಕಾರ ಆದೇಶಹೊರಡಿಸಿದ್ದರೂ ಸಹ ಎಲ್ಲಿಯೂ ಖರೀದಿ ಕೇಂದ್ರಗಳು ನಿಗಧಿತವಾಗಿ ಪ್ರಾರಂಭವಾಗದೇ ತೆಂಗುಬೆಳೆಗಾರು ಗೊಂದಲಕ್ಕಿಡಾಗಿದ್ದಾರೆ.         ಅಂತೆಯೇ ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇದುವರೆಗೂ ನಾಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭವಾಗದೆ ಈ ಭಾಗದ ತೆಂಗು ಬೆಳೆಗಾರರು ಮಾರುಕಟ್ಟೆಗೆ ನಿತ್ಯವೂ ಅಲೆಯುವಂತಾಗಿದೆ.       ತೆಂಗು ಹಾಗೂ ಕೊಬ್ಬರಿ ಬೆಲೆಯಲ್ಲಿ ಬಾರಿ ಇಳಿಕೆಯಿಂದಾಗಿ ಮಾರುಕಟ್ಟೆಯಲ್ಲಿನ ನಿಂಬೆಹಣ್ಣಿನ ಬೆಲೆಗಿಂತ ಕಡಿಮೆಯಿದೆ ಎಂದು ವಿಧಾನಸಭೆಯಲ್ಲಿ ಕೂಡ ಚರ್ಚೆನಡೆಯುವಂತಾದ ಹಿನ್ನಲೆಯಲ್ಲಿ ತೆಂಗುಬೆಳೆಗಾರ ಸಂಕಷ್ಟ ಅರಿತ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಸಾವಿರ ರೂ ಸಹಾಯಧನ ನೀಡಿ ಖರೀದಿಗೆ ಒಪ್ಪಿಗೆ ನೀಡಿತ್ತು. ತೆಂಗಿನ ಇಳುವರಿಯಲ್ಲಿ ಕುಂಟಿತ ಹಾಗೂ ಕೊಬ್ಬರಿಗೆ ಸೂಕ್ತ ಬೆಲೆ ದೊರೆಯದೆ ಕಂಗಾಲಾಗಿದ್ದ ತೆಂಗುಬೆಳೆಗಾರಿಗೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರದ ಈ ಆದೇಶ ಸಂತಸ ತಂದಿತ್ತು. ಸರ್ಕಾ

ಜೂ.14: ವಿಶ್ವ ರಕ್ತದಾನಿಗಳ ದಿನ:ದಶಮಾನೋತ್ಸವ ಸಂಭ್ರಮ

ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಿರಬೇಕಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್‌ ರಕ್ತವು, ಮೂರು ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು. ಆದುದರಿಂದ ಎಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವಾದ ರಕ್ತದಾನವನ್ನು ಇಂದೇ ಮಾಡಿರಿ.   ಕಾರ್ಲ್ ಲ್ಯಾಂಡ್‌ ಸ್ತ್ರೈನೆರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್‌ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು, 1901ರಲ್ಲಿ ರಕ್ತದ ಎ ಬಿ ಒ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937ರಲ್ಲಿ ಅಲೆಕ್ಸಾಂಡರ್‌ ವೈನರ್‌ ಎನ್ನುವ ಸಂಶೋಧಕರೊಂದಿಗೆ "ರೀಸಸ್‌ ಫ್ಯಾಕ್ಟರ್‌' ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು.ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ. ಮೂಲಕ ಗೌರವಿಸಲಾಗಿದೆ. ವಿಶ್ವ ರಕ್ತದಾನಿಗಳ ದಿನವನ್ನು ಜೂನ್‌ 14, 2004ರಂದು ಮೊತ್ತ ಮೊದಲ ಬಾರಿಗೆ ಆಚರಿಸಲಾಗಿತ್ತು. ಇಂದಿಗೆ ಹತ್ತು ವರ

ಹೂ ಬಿಡುವ ಹಂತದ ಹೆಸರು ಬೆಳೆಗೆ ಕೆಂಪು ತಲೆ ಕಂಬಳಿಹುಳು ಕಾಟ

         ಇತ್ತೀಚೆಗೆ ಸುರಿದ ಮುಂಗಾರು ಮಳೆಯಿಂದ ರೈತರ ಬಾಳಲ್ಲಿ ನೆಮ್ಮದಿ ಮನೆ ಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ಚುರುಕುಗೊಂಡ ರೈತ ಮುಂಗಾರು ಬೆಳೆಗಳಾದ ಹೆಸರು.ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತಿದ್ದರು ಆದರೆ ಸೊಗಸಾಗಿ ಚಿಗುರೊಡೆದು,ಹೂ ಬಿಡುವ ಹಂತದದಲ್ಲಿರುವ ಹೆಸರು ಗಿಡಕ್ಕೆ ಕೆಂಪುತಲೆ ಕಂಬಳಿಹುಳುವಿನ ಕಾಟ ತಗುಲಿ ಹೆಸರು ಗಿಡವೆಲ್ಲ ನಾಶವಾಗುತ್ತಿರುವುದು ಚಿ.ನಾ.ಹಳ್ಳಿ ತಾಲ್ಲುಕಿನಾದ್ಯಂತ ಕಂಡುಬಂದಿದ್ದು ಈ ಭಾಗದ ರೈತರು ಕಂಗಾಲಾಗಿದ್ದಾರೆ.   ಕೆಂಪು ತಲೆ ಕಂಬಳಿಹುಳು ಬಿದ್ದಿರುವ ಹೆಸರು ಗಿಡ.          ಮುಂಗಾರು ಮಳೆ ತನ್ನ ಪ್ರಾರಂಭದಲ್ಲಿ ಉತ್ತಮವಾಗಿ ಬಿದ್ದುದರಿಂದ ಸಂತಸಗೊಂಡ ರೈತರು ಈಗಾಗಲೆ ಮುಂಗಾರು ಬೆಳೆಗಳನ್ನು ಬಿತ್ತಿದ್ದು ಹೆಸರು.ಉದ್ದು ಸೇರಿದಂತೆ ಇತರೆ ಬೆಳೆಗಳು ಇದೀಗ ಚೆನ್ನಾಗಿ ಬೆಳೆದು ಹೂ ಬಿಡುವ ಹಂತ ತಲುಪಿರುತ್ತವೆ.ಈ ಸಮಯದಲ್ಲಿ ಹೆಸರು ಗಿಡಗಳಲ್ಲಿ ಕೆಂಪು ತಲೆ ಕಂಬಳಿಹುಳುವಿನ ಬಾಧೆ ಕಂಡುಬರುತ್ತಿದ್ದು,ಕಂಬಳಿ ಹುಳುಗಳು ಸಣ್ಣ ಮರಿಗಳಿಂದ ಪ್ರೌಢಾವಸ್ಥೆಗೆ ಬರುವ ಹಂತದಲ್ಲಿ ಹೆಸರು ಗಿಡಗಳನ್ನು ಪೂರ್ಣವಾಗಿ ತಿನ್ನುವುದಲ್ಲದೆ,ಬದುಗಳಲ್ಲಿನ ಮೆತ್ತನೆಯ ಹುಲ್ಲನ್ನು ಭಕ್ಷಿಸುತ್ತದೆ.ಈ ಹುಳುಗಳು ಕೆಲ ದಿನಗಳಲ್ಲಿ ಇಡಿ ಬೆಳೆಯನ್ನೆ ತಿಂದು ನಾಶಮಾಡುವ ಶಕ್ತಿಯನ್ನು ಹೊಂದಿದ್ದು, ಬೆಳೆ ಸಂಪೂರ್ಣ ನಾಶಹೊಂದುವ ಸಂಕಷ್ಟದ ಪರಿಸ್ಥಿತಿ ರೈತರಿಗೆ ಎದುರಾಗಿದೆ.      

ಸ್ವಪ್ರೇರಣೆಯಿಂದ ಪರಿಸರ ಸಂರಕ್ಷಣೆಗೆ ಮುಂದಾಗಿ : ಕೆ.ಎಸ್.ಕೆ

          ಆಧುನಿಕತೆಯ ಅತಿಯಾದ ಬೆಳವಣಿಗೆಯಿಂದ ಹಸಿರು ಪರಿಸರವನ್ನು ಮಾನವ ತನ್ನ ಸ್ವಹಿತಕ್ಕಾಗಿ ನಾಶಮಾಡುತ್ತಿದ್ದು,ತನ್ನ ವಿನಾಶವನ್ನು ತಾನೇ ಆಹ್ವಾನಿಸುತ್ತಿದ್ದಾನೆ.ಇಂತಹ ಸನ್ನಿವೇಶದಲ್ಲಿ ಇಂದಿನ ಯುವಪೀಳಿಯವರು ಪರಿಸರದ ಬಗೆಗೆ ಹೆಚ್ಚಿನ ಕಾಳಜಿ ಹೊಂದಿ ಸ್ವಪ್ರೇರಣಾ ಮನೋಭಾವದಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಕಿವಿಮಾತು ಹೇಳಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿದರು.           ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಸುವರ್ಣಮುಖಿ ಕ್ಯಾಂಪಸ್ ನಲ್ಲಿ ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗೂ ತಾಲ್ಲೂಕು ಅರಣ್ಯಸಮಿತಿ ಸಹಯೋಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷೆವಹಿಸಿ ಅವರು ಮಾತನಾಡಿದರು.          ಪ್ರಕೃತಿಯ ಕೂಸಾಗಿರುವ ಮಾನವ ತನಗೆ ಜೀವನ ಮಾಡಲು ಅವಕಾಶ ಮಾಡಿಕೊಟ್ಟ ಭೂಮಿಯನ್ನೆ ಇಂದು ತನ್ನ ಅತಿಯಾದ ಬಯಕೆಯಿಂದ ಲೂಟಿ ಮಾಡುತ್ತಿದ್ದಾನೆ.ಅತಿಯಾದ ನಗರೀಕರಣದಿಂದ ಕಾಡು ನಾಶವಾಗಿ ಮಳೆ ಮಾಯವಾಗಿ ಬರಡು ಭೂಮಿಯಿಂದ ಬರಗಾಲದ ಛಾಯೆ ತಲೆದೂರಿದ್ದು,ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅದರೂ ಸಹ

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಶೀಘ್ರವೇ ನೀಡುವಂತೆ ಪೋಷಕರ ಅಹವಾಲು

ಶಾಲಾ ಕಾಲೇಜುಗಳಿಗೆ ನೋಂದಣಿಯಾಗುವ ಸಂಧರ್ಭದಲ್ಲಿ ಶುಲ್ಕ ವಿನಾಯಿತಿ ಹಾಗೂ ಜಾತಿ ದೃಢೀಕರಣಕ್ಕಾಗಿ ಲಗತ್ತಿಸಬೇಕಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯು 21 ದಿನಗಳಿಗೆ ವಿತರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಪ್ರಮಾಣ ಪತ್ರವನ್ನು 21 ದಿನಗಳಿಗೆ ಬದಲಾಗಿ ಒಂದು ವಾರದೊಳಗೆ ವಿತರಿಸುವ ಕ್ರಮವನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಸ್ತುತದಲ್ಲಿ ಶಾಲಾ ಕಾಲೇಜುಗಳ ದಾಖಲಾತಿ ಶುಲ್ಕದಲ್ಲಿ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ಭರಿಸಲಾಗದೆ ತಮ್ಮ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಿದರೆ ಶುಲ್ಕದಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ ಎಂದು ತಿಳಿದು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಾರೆ.ಆದರೆ ಸರ್ಕಾರ ಸಕಾಲ ಯೋಜನೆಯಡಿ ಸರ್ಕಾರಿ ಸೇವೆಗಳಿಗೆ ಕಾಲಾವಧಿಯನ್ನು ನಿಗದಿಗೊಳಿಸಿದ್ದು, ಅಂತೆಯೇ ವಿದ್ಯಾಭ್ಯಾಸಕ್ಕೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡುವ ಕಾಲಾವಧಿಯನ್ನು 21 ದಿನಕ್ಕೆ ನಿಗದಿಗೊಳಿಸಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಸೇರಿದಂತೆ ಇತರೆ ತರಗತಿಗಳ ಫಲಿತಾಂಶ ಬಹುಪಾಲು ಮೇ ತಿಂಗಳಲ್ಲಿ ಪ್ರಕಟವಾಗುತ್ತದೆ. ಫಲಿತಾಂಶ ಬಂದ ಒಂದು ತಿಂಗಳುಗಳ ಒಳಗಾಗಿ ಇತರೆ ತರಗತಿಗಳಿಗೆ ದಾಖಲಾತಿ ಪ್ರಾರಂಭವಾಗಿ ಮುಕ್

ಆರೋಗ್ಯವಂತ ಮಕ್ಕಳ ಪ್ರದರ್ಶನ

ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆಯವರು ರಾಜ್ಯಾಧ್ಯಕ್ಷ ನಾರಾಯಣಗೌಡರ 47ನೇ ಹುಟ್ಟು ಹಬ್ಬದ ಅಂಗವಾಗಿ ಆರೋಗ್ಯವಂತ ಮಕ್ಕಳ ಪ್ರದರ್ಶನ ನಡೆಸಿದರು.ಅಧ್ಯಕ್ಷ ಕೋಳಿ ಶ್ರೀನಿವಾಸ್,ವೈದ್ಯರಾದ ನಾಗರಾಜು,ಸಿದ್ದರಾಮಯ್ಯ,ಲಕ್ಷ್ಮಿಚಂದ್ರದರ ಹಾಗೂ ಸಂಘದ ಪದಾಧಿಕಾರಿಗಳಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಮಾರುತಿ ನಗರದ ಶ್ರೀಡಿಸೈನರ್ ಅಂಗಡಿಯಲ್ಲಿ ಸೋಮವಾರ ನಡೆದಿದೆ.             ಶ್ರೀಡಿಸೈನರ್ ಎಂಬ ಅಂಗಡಿ ನಡೆಸುತ್ತಿದ್ದ 35 ವರ್ಷದ ಪುಷ್ಪ ಎಂಬಾಕೆ ಅತ್ಮಹತ್ಯೆ ಮಾಡಿಕೊಂಡಿದ್ದು,ದಿನನಿತ್ಯದಂತೆ ಅಂಗಡಿಗೆ ಹೋಗಿ ಅಂಗಡಿಯಲ್ಲಿಯೇ ವಿಷ ಸೇವಿಸಿದ್ದು,ಮಧ್ಯಾಹ್ನ ಊಟಕ್ಕೆ ಮನೆ ಬಾರದೆ ಇದ್ದಾಗ ಅವರ ತಾಯಿ ಅಂಗಡಿ ಹತ್ತಿರ ಹೋಗಿ ನೋಡಿದಾಗ ವಿಷ ತಿಳಿದಿದೆ.ಗಂಡಹೆಂಡತಿಯ ನಡುವಿನ ಸಂಬಂಧದಲ್ಲಿ ಕೆಲ ತಿಂಗಳುಗಳಿಂದ ವೈಮನಸ್ಸು ಉಂಟಾಗಿದ್ದು,ಜೀವನದಲ್ಲಿ ಜುಗುಪ್ಸೆತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಈಕೆಗೆ ಇಬ್ಬರು ಮಕ್ಕಳಿದ್ದಾರೆ.ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

ಶಾಲೆಯ ಮುಂದೆ ಮಿಠಾಯಿ ಗೊಂಬೆ

 ನಿಜವಾಗ್ಲೂ ಇದು interesting ..... ಓದ್ಬೇಕು ಅಂದರೆ ಕಳಗಿನ ಲಿಂಕ್ ಕ್ಲಿಕ್ ಮಾಡಿ....  ಶಾಲೆಯ ಮುಂದೆ ಮಿಠಾಯಿ ಗೊಂಬೆ | ಪ್ರಜಾವಾಣಿ

ಶನೇಶ್ವರ ಸ್ವಾಮಿಯ ಅದ್ದೂರಿ ಕುಂಭಾಭಿಷೇಕ ಮಹೋತ್ಸವ

ಹೋಮದ ಪೂರ್ಣಾಹುತಿ ದೃಶ್ಯ. ಹುಳಿಯಾರು: ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳಿಂದ ಗಾಂಧೀಪೇಟೆಯಲ್ಲಿನ ಶ್ರೀ ಶನೇಶ್ವರಸ್ವಾಮಿಯ 9ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳು, ಹೋಮ ಹವನಗಳೊಂದಿಗೆ,ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.. ಎರಡು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಶುಕ್ರವಾರದಂದು ರಾತ್ರಿ ಗ್ರಾಮದೇವತೆಗಳಾದ ದುರ್ಗಾಪರಮೇಶ್ವರಿ ಹಾಗೂ ಹುಳಿಯಾರಮ್ಮ,ಆಂಜನೇಯ ಸ್ವಾಮಿ ದೇವರುಗಳ ಆಗಮನದೊಂದಿಗೆ ಭೇಟಿ ನಡೆದು, ಅದೇ ದಿನ ರಾತ್ರಿ ಶನೇಶ್ವರ ಸ್ವಾಮಿಗೆ ಪುಣ್ಯಾಹ,ದೇವನಾಂದಿ,ಮಂಡಲ ಸ್ಥಾಪನೆ ಹಾಗೂ ಭಕ್ತರಿಂದ ಕಳಸ ಸ್ಥಾಪನೆ,ಪ್ರಧಾನ ಕಳಸ,ನವಗ್ರಹಗಳ ಸ್ಥಾಪನಾ ಕಾರ್ಯ ನಡೆಸುವುದರ ಮೂಲಕ ಚಾಲನೆಗೊಂಡಿತ್ತು. ಇಂದು ಬೆಳಿಗ್ಗೆ ಪುರೋಹಿತರಾದ ಹೆಚ್.ಎಸ್.ಲಕ್ಷ್ಮಿನರಸಿಂಹಯ್ಯ, ಹೆಚ್.ಕೆ.ಗುಂಡಣ್ಣ, ಸತ್ಯನಾರಾಯಣ,ಗಣೇಶ,ಗುಂಡಪ್ಪ ಅವರ ಪೌರೋಹಿತ್ಯದಲ್ಲಿ ಆಗಮಿಸಿದ್ದ ದೇವರುಗಳ ಸಮ್ಮುಖದಲ್ಲಿ ನವಗ್ರಹ ಹೋಮ,ಗಣಪತಿ ಹೋಮ,ಮೃತ್ಯುಂಜಯ ಹೋಮ,ಶನೇಶ್ವರ ಹೋಮ, ನವಗ್ರಹಾರಾಧನೆ, ಪಂಚಾಮೃತಾಭಿಷೇಕಗಳು ನಡೆಯಿತು. ಪೂರ್ಣಾಹುತಿ,ಮಹಾಮಂಗಳಾರತಿ ನಂತರ ಕಳಸಕ್ಕೆ ಕುಂಭಾಭಿಷೇಕ  ನೆರವೇರಿಸಲಾಯಿತು.ಆಗಮಿಸಿದ್ದ ಭಕ್ತಾಧಿಗಳಿಗೆ ಜ್ಯೋತಿಪಣ ಗಾಣಿಗರ ಸಂಘದವರಿಂದ ಹಾಗೂ ವಿಪ್ರರಿಗೆ ವಿಪ್ರಸಮಾಜದಿಂದ ಅನ್ನಸಂತರ್ಪಣೆ ನಡೆಯಿತು. ಸಂಜೆ ಊರಿನ ರಾಜಬೀದಿಗಳಲ್ಲಿ ಸ್ವಾಮಿಯವರ ವೈಭವಯುತ ಉತ್ಸವ ಮಂಗಳವಾದ್ಯದೊಂದಿಗ

ಮುಕ್ತರಾಗುವ ರೀತಿ | ಪ್ರಜಾವಾಣಿ

ಮುಕ್ತರಾಗುವ ರೀತಿ | ಪ್ರಜಾವಾಣಿ ಗುರುಗಳ ಉಪನ್ಯಾಸ ನಡೆದಿತ್ತು. ನೂರಾರು ಜಿಜ್ಞಾಸುಗಳು ಕುಳಿತು ತದೇಕಚಿತ್ತದಿಂದ ಅವರ ಮಾತುಗಳನ್ನು ಕೇಳುತ್ತಿದ್ದರು. `ಪ್ರಪಂಚ ಒಂದು ಮಾಯೆ ಎಂದು ಗೊತ್ತಿದ್ದರೂ ಅದಕ್ಕೇ ಬಲವಾಗಿ ಅಂಟಿ ಕುಳಿತುಕೊಂಡಿದ್ದೇವೆ. ನಾವು ಒಮ್ಮೆ ಮುಕ್ತರಾಗಬೇಕು. ಅದೇ ನಮ್ಮ ಬದುಕಿನ ಗುರಿ. ಆಗ ಮಾತ್ರ ನಾವು ಭಗವಂತನನ್ನು ಕಾಣಲು ಸಾಧ್ಯ' ಎಂದು ಗುರುಗಳು ಒತ್ತಿ ಹೇಳಿದರು. ಉಪನ್ಯಾಸ ಮುಗಿದ ಮೇಲೆ ಒಬ್ಬ ಹಿರಿಯರು ಗುರುಗಳ ಹತ್ತಿರ ಹೋಗಿ ಕೇಳಿದರು, `ಸ್ವಾಮೀ ತಮ್ಮ ಮಾತು ನಮ್ಮ ಮೇಲೆ ಬಹಳ ಪ್ರಭಾವ ಬೀರಿದೆ. ನಾವೂ ಮುಕ್ತರಾಗಬೇಕು ಎನ್ನಿಸುತ್ತದೆ. ಆದರೆ ಹೇಗೆ ಮುಕ್ತರಾಗಬೇಕು ಎನ್ನುವುದು ತಿಳಿದಿಲ್ಲ. ದಯವಿಟ್ಟು ತಿಳಿಸಿಕೊಡುತ್ತೀರಾ?'........................

ಆಟೋ ಮಗುಚಿ ಓರ್ವ ಸಾವು

ಅತಿವೇಗವಾಗಿ ಚಲಿಸುತ್ತಿದ್ದ ಪ್ಯಾಸೇಂಜರ್ ಆಟೋ ಚಾಲಕನ ಅಜಾಗರೂಕತೆಯಿಂದ ಅಯತಪ್ಪಿ ಮಗುಚಿಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನಪ್ಪಿ, ಮತ್ತೋರ್ವನಿಗೆ ತೀವ್ರ ಗಾಯಗಳಾಗಿರುವ ಘಟನೆ ಹುಳಿಯಾರು ಹೋಬಳಿ ಬರಕನಹಾಲ್ ಸಮೀಪದ ಬಾಲದೇವರಟ್ಟಿ ಬಳಿ ಸೋಮವಾರ ಸಂಜೆ ಘಟಿಸಿದೆ. ಪೋಚಗಟ್ಟೆ ಎ.ಡಿ.ಕಾಲೋನಿಯ ನಿವಾಸಿ ಮಹಲಿಂಗಯ್ಯ (36 ವರ್ಷ) ಮೃತಪಟ್ಟಿದ್ದು, ಈತ ತನ್ನ ಸ್ವಗ್ರಾಮ ಪೋಚಗಟ್ಟೆಗೆ ತೆರಳಲೆಂದು ಬರಕನಹಾಲ್ ಕಡೆಯಿಂದ ಬರುತ್ತಿದ್ದ ಆಟೋ ಹತ್ತಿದ್ದು, ಚಾಲಕನು ಆಟೋವನ್ನು ಅತಿ ವೇಗಯಾಗಿ ಓಡಿಸಿಕೊಂಡು ಬಂದ ಪರಿಣಾಮ ಆಯತಪ್ಪಿದ ಆಟೋ ಮಗುಚಿ ಬಿದ್ದಿದೆ ಎನ್ನಲಾಗಿದೆ. ಸ್ಥಳದಲ್ಲಿಯೇ ಮಹಲಿಂಗಯ್ಯನಿಗೆ ತೀವ್ರ ರಕ್ತಸ್ರಾವವಾಗಿ, ಹುಳಿಯಾರು ಆಸ್ಪತ್ರೆಗೆ ಕರೆ ತಂದು, ನಂತರ ಚಿ.ನಾ.ಹಳ್ಳಿ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಉದಯ್ ಕುಮಾರ್ ಎಂಬಾತನಿಗೆ ಗಾಯಗಳಾಗಿದ್ದು,ಆಟೋ ಚಾಲಕ ಪರಾರಿಯಾಗಿದ್ದಾನೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ವಿತರಣೆ

ತುಮಕೂರು ಜಿಲ್ಲೆಯಾದ್ಯಂತ ಜೂನ್ 1 ರಿಂದ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ವಿತರಣೆ ಅಸ್ತಿತ್ವಕ್ಕೆ ಬಂದಿರುವ ಹಿನ್ನಲೆಯಲ್ಲಿ ಹುಳಿಯಾರಿನಲ್ಲಿ ಹೆಚ್.ಪಿ ಗ್ಯಾಸ್ ಕಂಪನಿ ತನ್ನ ಗ್ರಾಹಕರಿಗೆ ಸಿಲಿಂಡರ್ ವಿತರಿಸಿತು.

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭಾಷಣಕ್ಕೆ 5 ಲಕ್ಷ ಡಾಲರ್‌ ..........

Udayavani: ಕ್ಲಿಂಟನ್‌ ಭಾಷಣಕ್ಕೆ 5 ಲಕ್ಷ ಡಾಲರ್‌ ದರ

ಮನೆಮನೆ ಭೇಟಿ : ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಪೋಷಕರಲ್ಲಿ ಟಿಪ್ಪು ಸಂಘದ ಮನವಿ

ಹೆಚ್ಚುತ್ತಿರುವ ಖಾಸಗಿ ಶಾಲೆಗಳಿಗೆ ಮಾರು ಹೋಗಿರುವ ಇಂದಿನ ಪೋಷಕರು ಆಂಗ್ಲಮಾಧ್ಯಮದೆಡೆಗೆ ತಮ್ಮ ಒಲವು ತೊರುತ್ತಾ, ಉತ್ತಮ ಶಿಕ್ಷಣ ನೀಡುವ, ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಉಚಿತವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಸರ್ಕಾರಿ ಶಾಲೆಗಳನ್ನು ಮರೆತು, ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೊಂದಾಯಿಸುತ್ತಿರುವವರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟು,ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಹುಳಿಯಾರಿನ ಟಿಪ್ಪು ಯುವಕ ಸಂಘದವರು. ಪಟ್ಟಣದಲ್ಲಿರುವ ಉರ್ದು ಸರ್ಕಾರಿ ಶಾಲೆಯಲ್ಲಿ ಉತ್ತಮ ಬೋಧನೆಯಿದ್ದು,ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಬೋಧಕರಿದ್ದರೂ ಸಹ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗುತ್ತಿಲ್ಲ. ಈ ಶಾಲೆಯಲ್ಲಿ ಪ್ರತಿ ವರ್ಷ ಸಾಕಷ್ಟು ಮುಸ್ಲಿಂ ಮಕ್ಕಳು ದಾಖಲಾಗುತ್ತಿದ್ದರು.ಆದರೆ ಈ ಬಾರಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದ್ದು ಶಾಲೆಯ ಬಾಗಿಲು ಹಾಕುವ ದುಸ್ಥಿತಿ ಎದುರಾಗಿದೆ. ಪಟ್ಟಣದಾದ್ಯಂತ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಟಿಪ್ಪು ಯುವಕ ಸಂಘದವರು ಅಲ್ಪಸಂಖ್ಯಾರಿಗಾಗಿ ಇರುವ ಶಾಲೆಗೆ ತಮ್ಮ ಸಮುದಾಯದವರೇ ದಾಖಲಾಗದೇ ಇರುವುದನ್ನು ತಿಳಿದು,ಶಾಲಾ ಸಿಬ್ಬಂದಿಯೊಂದಿಗೆ ಚರ್ಚಿಸಿ,ಸಂಘದವರು ತಮ್ಮ ಸಮುದಾಯದ ಪ್ರತಿ ಮನೆಗಳಿಗೆ ಭೇಟಿಯಿತ್ತು.ಶಾಲೆಯ ಬಗ್ಗೆ ಪೋಷಕರಿಗೆ ವಿವರವಾಗಿ ಮನವರಿಕ

100ರೂ ಪೆಟೋಲ್ ಹಾಕಿಸಿಕೊಂಡ್ರೆ ಒಂದು ವಿಜಯವಾಣಿ ಪೇಪರ್ ಉಚಿತ

ಪೆಟೋಲ್ ಹಾಕಿಸಿಕೊಂಡು ಪೇಪರ್ ಓದುವ ಸುವರ್ಣಾವಕಾಶ ಬಂದಿದೆ ನೋಡಿ ಸ್ವಾಮಿ .... 100 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡರೆ ನಿಮಗೆ ಒಂದು ವಿಜಯವಾಣಿಪೇಪರ್ ಅವತ್ತಿಂದು ಕೊಡ್ತಾಯಿದ್ದಾರೆ.ಇಂಡಿಯನ್ ಆಯಿಲ್ ಬಂಕ್ ನಲ್ಲಿ ಮಾತ್ರ ಇದು ಲಭ್ಯ. ಅದು ಕೂಡ ಹುಳಿಯಾರಿನಲ್ಲಿ ಮಾತ್ರ  .ಕೆಂಕೆರೆ ಹೈಸ್ಕೂಲ್ ಹತ್ತಿರವಿರುವ ಬಂಕ್ ಗೆ ಹೋದರೆ ಸಿಗುತ್ತೆ.ಬೇರೆಲ್ಲೂ ಇಲ್ಲ. ............ಮೊದಲು  ಬಂದವರಿಗೆ ಮೊದಲ ಆದ್ಯತೆ, ಪೇಪರ್ ಖಾಲಿ ಆದ್ಮೇಲೆ ಹೋದ್ರೆ ನಮಗೊತ್ತಿಲ್ಲ

ಸುಖಸಂಸಾರಕ್ಕೆ ಉತ್ತಮ ಸಂಸ್ಕಾರದ ಬೆಳವಣಿಗೆ ಅಗತ್ಯ ; ಸ್ವಾಮೀಜಿ

ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಚನ ಆಧುನಿಕ ಜಗತ್ತಿನಲ್ಲಿ ಅನೇಕ ಮಕ್ಕಳು ತಂದೆ ತಾಯಿ,ಪೋಷಕರ ಸಂಬಂಧವನ್ನೆ ಧಿಕ್ಕರಿಸಿ ಹೆತ್ತವರನ್ನು ತೊರೆದು ತಮ್ಮಿಷ್ಟದಂತೆ ಮದುವೆಯಾಗಿ ಸಂಸಾರ ನಡೆಸಲು ಮುಂದಾಗುತ್ತಿದ್ದು, ಸಂಸಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಿರಿಯರ ಮಾರ್ಗದರ್ಶನದಂತೆ ವಿವಾಹವಾಗಿ ಸಂಸಾರದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡರೆ ಜೀವನ ಸುಖಮಯವಾಗಿರುತ್ತದೆಂದು ಗೋಡೆಕೆರೆ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು. ಹುಳಿಯಾರಿನ ರೋಟರಿಸಂಸ್ಥೆ ಹಾಗೂ ರೋಟರಿ ಕಮ್ಯೂನಿಟಿ ಕಾರ್ಪ್ಸ್ ಅವರ ಸಹಯೋಗದಲ್ಲಿ ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿ ಭಾನುವಾರ ನಡೆದ 30ನೇಉಚಿತ ಸಾಮೂಹಿಕ ವಿವಾಹಮಹೋತ್ಸವದಲ್ಲಿ ನೂತನ ವಧುವರರನ್ನು ಕುರಿತಂತೆ ಆಶೀರ್ವಚನ ನೀಡಿದರು. ಜೀವನವೆಂಬ ದೊಡ್ಡ ಸಾಗರದಲ್ಲಿ ಸಂಸಾವೆಂಬ ದೋಣಿಯನ್ನು ಗಂಡ ಹೆಂಡತಿ ಸದಾಕಾಲ ಜೊತೆಯಾಗಿ ಸಾಗಿಸುತ್ತಾ,ಜೀವನದಲ್ಲಿ ಸುಖ ದುಖಗಳಲ್ಲಿ ಪರಸ್ಪರ ಜೊತೆಯಾಗಿ ನಡೆದಾಗ ಸಂಸಾರದಲ್ಲಿ ಶಾಂತಿ,ನೆಮ್ಮದಿ,ಸಹೃದಯತೆ,ಸಂತೋಷ ನೆಲೆಸುತ್ತದೆ ಎಂದರು. ಮದುವೆಯಾದ ನಂತರ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಿಕೊಟ್ಟು,ಅವರಲ್ಲಿ ನೈತಿಕತೆ ಬೆಳೆಸಿ, ದೇಶದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯುವಂತೆ ಮಾಡುವ ಜವಬ್ದಾರಿ ಪ್ರತಿಯೊಬ್ಬ ತಂದೆತಾಯಂದಿರ ಮೇಲಿದ