ಆಧುನಿಕತೆಯ ಅತಿಯಾದ ಬೆಳವಣಿಗೆಯಿಂದ ಹಸಿರು ಪರಿಸರವನ್ನು ಮಾನವ ತನ್ನ ಸ್ವಹಿತಕ್ಕಾಗಿ
ನಾಶಮಾಡುತ್ತಿದ್ದು,ತನ್ನ ವಿನಾಶವನ್ನು ತಾನೇ ಆಹ್ವಾನಿಸುತ್ತಿದ್ದಾನೆ.ಇಂತಹ
ಸನ್ನಿವೇಶದಲ್ಲಿ ಇಂದಿನ ಯುವಪೀಳಿಯವರು ಪರಿಸರದ ಬಗೆಗೆ ಹೆಚ್ಚಿನ ಕಾಳಜಿ ಹೊಂದಿ
ಸ್ವಪ್ರೇರಣಾ ಮನೋಭಾವದಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ವಿದ್ಯಾವಾರಿಧಿ
ಇಂಟರ್ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಕಿವಿಮಾತು ಹೇಳಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿದರು. |
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಸುವರ್ಣಮುಖಿ ಕ್ಯಾಂಪಸ್
ನಲ್ಲಿ ಚಿ.ನಾ.ಹಳ್ಳಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ
ಹಾಗೂ ತಾಲ್ಲೂಕು ಅರಣ್ಯಸಮಿತಿ ಸಹಯೋಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದ
ಅಧ್ಯಕ್ಷೆವಹಿಸಿ ಅವರು ಮಾತನಾಡಿದರು.
ಪ್ರಕೃತಿಯ ಕೂಸಾಗಿರುವ ಮಾನವ ತನಗೆ ಜೀವನ ಮಾಡಲು ಅವಕಾಶ ಮಾಡಿಕೊಟ್ಟ
ಭೂಮಿಯನ್ನೆ ಇಂದು ತನ್ನ ಅತಿಯಾದ ಬಯಕೆಯಿಂದ ಲೂಟಿ ಮಾಡುತ್ತಿದ್ದಾನೆ.ಅತಿಯಾದ
ನಗರೀಕರಣದಿಂದ ಕಾಡು ನಾಶವಾಗಿ ಮಳೆ ಮಾಯವಾಗಿ ಬರಡು ಭೂಮಿಯಿಂದ ಬರಗಾಲದ ಛಾಯೆ
ತಲೆದೂರಿದ್ದು,ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅದರೂ ಸಹ ಮಾನವ ಎಚ್ಚೆತ್ತುಕೊಳ್ಳದೆ
ತನ್ನ ಕೃತ್ಯವನ್ನು ಮುಂದುವರಿಸುತ್ತಿರುವುದು ಸರಿಯಲ್ಲ ಎಂದರು.ನಮ್ಮ ಪೂರ್ವಜರು
ಪ್ರಕೃತಿಯನ್ನು ಸಂಪೂರ್ಣ ನಾಶ ಮಾಡಿದಿದ್ದರೆ ನಾವು ಇಂದು ಬದುಕಲು
ಸಾಧ್ಯವಿರುತ್ತಿರಲಿಲ್ಲ,ಅಂತೆಯೇ ನಾವು ಕೂಡ ನಮ್ಮ ಮುಂದಿನ ಜೀವ ಸಂಕುಲಕ್ಕೆ
ಪ್ರಕೃತಿಯನ್ನು ಸಂರಕ್ಷಿಸಿ,ಬೆಳೆಸಿ,ಉಳಿಸುವ ಕಾರ್ಯ ಮಾಡಬೇಕಿದೆ ಎಂದರು. ನಮ್ಮ
ಸುತ್ತಮುತ್ತಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಇಂದಿನ ಅನೇಕ ಸಂಘ
ಸಂಸ್ಥೆಯವರು ಪರಿಸರ ಸಂರಕ್ಷಣೆಯ ಕಾರ್ಯದ ಬದಲು ಯಾವುದರಿಂದ ಲಾಭ ಬರುತ್ತದೆ ಅಂತಹ
ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಮಾತನಾಡಿ, ಮಾನವ ಆರೋಗ್ಯ
ಉತ್ತಮವಾಗಿರಬೇಕಾದರೆ ನಮ್ಮ ಸುತ್ತಮುತ್ತಲ ಪರಿಸರ ಆರೋಗ್ಯಯುತವಾಗಿರಬೇಕು ಆದರೆ ಇಂದು
ಪರಿಸರದ ಸರಿಯಾದ ಸಂರಕ್ಷಣೆಯಿಲ್ಲದೆ ಶುದ್ದ ಗಾಳಿ,ನೀರು,ಭೂ ಭಾಗವನ್ನು ಹುಡುಕುವ
ಪರಿಸ್ಥಿತಿ ಎದುರಾಗಿದ್ದು,ಮಾನವ ವಿನಾಶದ ಅಂಚಿಗೆ ತಲುಪುತ್ತಿದ್ದಾನೆ ಎಂದರು. ಹಸಿರು
ಕಾಡಿನ ಬದಲಾಗಿ ಕಾಂಕ್ರಿಟ್ ಜಂಗಲ್ ತಲೆಯೆತ್ತುತ್ತಿದ್ದು,ಪ್ರಕೃತಿಯಲ್ಲಿ ಅಸಮತೋಲನ
ಉಂಟಾಗಿದೆ ಎಂದರು.ಇತರ ಪಾಶ್ಚಾತ್ಯ ರಾಷ್ಟಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ
ಪ್ರಕೃತಿಯನ್ನು ಆರಾಧಿಸುತ್ತೇವೆ,ಆದರೆ ಅಂತಹ ಪ್ರಕೃತಿಯನ್ನು ನಾಶ ಮಾಡುವುದು ತಮ್ಮ
ಸಂಸ್ಕೃತಿಗೆ ವಿರುದ್ದ ಎಂದರು.ಪರಿಸರ ನಾಶ ಮಾಡುವವರಿಗೆ ಕಾನೂನು ಚೌಕಟ್ಟಿನಲ್ಲಿ
ಶಿಕ್ಷೆಗಳಿವೆ,ಹಾಗಿದ್ದು ಕೂಡ ಇದರ ಅರಿವಿಲ್ಲದೆ ವರ್ತಿಸುತ್ತಿರುವುದು ವಿಷಾದನೀಯ
ಎಂದರು.
ಪರಿಸರ ದಿನದ ಅಂಗವಾಗಿ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸಿವಿಲ್ ನ್ಯಾಯಾಧೀಶರುಗಳಾದ ಎಸ್.ವೀಣಾ ,ಕೆ.ನಿರ್ಮಲ ಸಸಿ ನೆಟ್ಟರು. |
ಹಿರಿಯ ವಕೀಲ ಕೆ.ಎಸ್.ಚಂದ್ರಶೇಖರ್ ಪರಿಸರ ಮತ್ತು ಕಾನೂನು ವಿಷಯದ ಕುರಿತಂತೆ ಹಾಗೂ
ಹನುಮಂತಯ್ಯ ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಬಗ್ಗೆ ಉಪನ್ಯಾಸ ನೀಡಿದರು.ಶಾಲಾ ಮಕ್ಕಳಿಂದ
ಪರಿಸರ ಗೀತೆ ಮತ್ತು ತುಣುಕು ನಾಟಕ ಪ್ರದರ್ಶನ ನಡೆದವು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ,ವಿದ್ಯಾವಾರಿಧಿ ಇಂಟರ್
ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್,ಪ್ರಾಂಶುಪಾಲ ರವಿ,ತಾಲ್ಲೂಕು
ವಕೀಲ ಸಂಘದ ಅಧ್ಯಕ್ಷ ಕೆ.ಸಿ.ವಿಶ್ವನಾಥ್,ಉಪಾಧ್ಯಕ್ಷ ಜಿ.ಪರಮೇಶ್ವರ್, ಕಾರ್ಯದರ್ಶಿ
ಲೋಕೇಶ್ವರ, ಉಪವಿಭಾಗಾಧಿಕಾರಿ ಎಸ್.ನಾಗೇಂದ್ರ,ಬುಕ್ಕಾಪಟ್ಟಣ ವಲಯದ ಅರಣ್ಯಾಧಿಕಾರಿ
ಶಾಂತರಾಜಯ್ಯ ಉಪಸ್ಥಿತರಿದ್ದ ಸಮಾರಂಭವನ್ನು ವಿದ್ಯಾರ್ಥಿಗಳಾದ ಗಣೇಶ್ ಹಾಗೂ ಪ್ರಸನ್ನ
ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ