ಜಗತ್ತಿನಾದ್ಯಂತ ಇಂದು ಹೆಚ್ಚಿನ ತಾಂತ್ರಿಕತೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ ಹಾಗೂ ಅಧಿಕ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು,ಉತ್ತಮ ತರಬೇತಿ ಪಡೆದವರನ್ನು ಗುರ್ತಿಸಿ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ತಾಂತ್ರಿಕಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಉತ್ತಮ ತರಬೇತಿ ಅನಿವಾರ್ಯವಾಗಿದೆ ಎಂದು ಹುಳಿಯಾರು ರೋಟರಿ ಅಧ್ಯಕ್ಷ ಈ.ರವೀಶ್ ತಿಳಿಸಿದರು.
ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಕಾಲೇಜಿನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ರೋಟರಿ ಸಂಸ್ಥೆವತಿಯಿಂದ ಕಾಲೇಜಿಗೆ ಉಚಿತವಾಗಿ ಕಂಪ್ಯೂಟರನ್ನು ವಿತರಿಸಿ, ಅವರು ಮಾತನಾಡಿದರು.
ಹುಳಿಯಾರಿನ ಯೋಗಿನಾರಾಯಣ ಐಟಿಐ ಕಾಲೇಜಿಗೆ ರೋಟರಿ ಸಂಸ್ಥೆವತಿಯಿಂದ ರೋಟರಿ ಅಧ್ಯಕ್ಷ ಈ.ರವೀಶ್ ಉಚಿತವಾಗಿ ಕಂಪ್ಯೂಟರ್ ವಿತರಿಸಿದರು. |
ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿಯಿದ್ದು, ಉತ್ತಮ ವಿದ್ಯಾಭ್ಯಾಸವಿದ್ದರೂ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿಯನ್ನು ಎದುರಾಗಿದೆ.ಆದರೆ ತಾಂತ್ರಿಕ ಶಿಕ್ಷಣ ಪಡೆದವರು ತಾವು ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ಕೆಲಸಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು. ಯೋಗಿನಾರಾಯಣ ಐ.ಟಿ.ಐ ಕಾಲೇಜಿನಲ್ಲಿ ಉತ್ತಮ ಶಿಕ್ಷಕರಿದ್ದು ಅವರಿಂದ ಉತ್ತಮ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದು,ಮುಂದೆ ಇಂಜಿನಿಯರ್,ಡಿಪ್ಲೋಮೊ ಕೋರ್ಸ್ ಗಳಿಗೆ ಸೇರುವ ಮೂಲಕ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಡಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ತುಣುಕು ನಾಟಕ ಹಾಗೂ ನೃತ್ಯ ಪ್ರದರ್ಶಿಸಿದರು ಹಾಗೂ ರೋಟರಿ ಕಮ್ಯೂನಿಟಿ ಕಾರ್ಪ್ ನ ಅಧ್ಯಕ್ಷರಾಗಿ ಶಿಕ್ಷಕ ಅಥೀಕ್ ಅವರನ್ನು ನೇಮಿಸಲಾಯಿತು. ತೆಂಗಿನನಾರು ಉದ್ಯಮಿ ಎಲ್.ಆರ್.ಚಂದ್ರಶೇಖರ್,ಪ್ರಾಂಶುಪಾಲ ಬಸವರಾಜು ಮಾತನಾಡಿದರು. ಯೋಗಿನಾರಾಯಣ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ,ಉಪಾಧ್ಯಕ್ಷ ಸಣ್ಣವರದಯ್ಯ, ದಾನಿಗಳಾದ ಟಿ.ಆರ್.ಲಕ್ಷ್ಮಿಕಾಂತ್,ಬಡಗಿ ರಾಮಣ್ಣ,ಯುವ ಕಾಂಗ್ರೆಸ್ ನ ವೆಂಕಟೇಶ್, ರೋಟರಿ ಕಮ್ಯೂನಿಟಿ ಕಾರ್ಪ್ ನ ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್,ಬೆಸ್ಕಾಂನ ಉಮೇಶ್ ನಾಯಕ್, ಶಿಕ್ಷಕರಾದ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ