ತನಗೆ ಮೊದಲ ಬಾರಿ ಗೆಲವು ತಂದು ಕೊಟ್ಟ ಕಳ್ಳಂಬೆಳ್ಳ ಕ್ಷೇತ್ರ ಹಾಗೂ ಕ್ಷೇತ್ರದ ಹೋಬಳಿಗಳಲ್ಲಿ ಪ್ರಮುಖವಾದ ಹುಳಿಯಾರು ಹೋಬಳಿ ತನ್ನ ತವರಿದ್ದಂತೆ,ಇಲ್ಲಿಯ ಜನ ತನ್ನನ್ನು ಮೊದಲ ಬಾರಿ ಶಾಸಕ ಹಾಗೂ ಕೃಷಿಸಚಿವರನ್ನಾಗಿ ಆಯ್ಕೆ ಮಾಡಿದ್ದರು, ಅದರಂತೆ ಈ ಬಾರಿ ಕಾನೂನು ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ ತನ್ನನ್ನು ಬೆಂಬಲಿಸಿರುವ ತನ್ನ ತವರು ಕ್ಷೇತ್ರದಂತಿರುವ ಹುಳಿಯಾರನ್ನು ಎಂದಿಗೂ ಮರೆಯುವುದಿಲ್ಲ ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುವೆ ಎಂದು ರಾಜ್ಯ ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.
ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೆಡ್ ಕೇಂದ್ರದ ಉದ್ಘಾಟನೆ ನೆರವೇರಿಸಿ ಶಿರಾಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಹೋಬಳಿಯ ಸಮಸ್ಯೆಗಳನ್ನು ಆಲಿಸಿದರು.
ಹುಳಿಯಾರಿಗೆ ಬುಧವಾರ ಸಂಜೆ ಭೇಟಿ ನೀಡಿದ ಸಚಿವ ಟಿ.ಬಿ.ಜಯಚಂದ್ರ ಜನರ ಸಮಸ್ಯೆಗಳನ್ನು ಆಲಿಸಿದರು. |
ನಾನು ರೈತರ ಸಂಕಷ್ಟವನ್ನು ಅರಿತಿದ್ದು, ಕೃಷಿ ಸಚಿವರಾಗಿದ್ದಾಗ ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದೆವು. ಅಲ್ಲದೆ ಈ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಕಾರ್ಯವಾಗಿ ತೆಂಗುಬೆಳೆಗಾರರಿಗೆ ಅನುಕೂಲವಾಗುವಂತೆ ಪ್ರತಿಯೊಂದು ಮಾರುಕಟ್ಟೆಗಳಲ್ಲಿ ನಫೆಡ್ ಕೇಂದ್ರಗಳನ್ನು ತೆರೆಯುವ ಮೂಲಕ ರೈತರಿಂದ ನೇರವಾಗಿ ಕೊಬ್ಬರಿ ಖರೀದಿಗೆ ಮುಂದಾಗಿದ್ದು, ಕೊಬ್ಬರಿ ಪ್ರತಿ ಕ್ವಿಂಟಾಲ್ ಗೆ ಒಂದು ಸಾವಿರ ರೂ ಸಹಾಯ ನೀಡಿದ್ದೇನೆ.ಅಲ್ಲದೆ ಇದರ ಸದುಪಯೋಗ ರಾಜ್ಯದ ಎಲ್ಲಾ ತೆಂಗುಬೆಳೆಗಾರರಿಗೆ ದೊರೆಯಬೇಕಿದ್ದು,ಇದರ ಮಧ್ಯೆಯಾವುದೇ ಮಧ್ಯವರ್ತಿಗಳಾಗಲಿ,ಅಧಿಕಾರಿಗಳಾಗಲಿ,ವರ್ತಕರಾಗಿ ತಮ್ಮ ಬುದ್ದಿವಂತಿಕೆಯನ್ನು ತೊರಿಸಿದರೆ ಅಂತಹವರ ವಿರುದ್ದ ಉಗ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಫೆಡ್ ಕೇಂದ್ರ ಪ್ರಾರಂಭವಾಗುತ್ತಿದಂತೆ ಅನೇಕ ಕಡೆ ಕೊಬ್ಬರಿ ಬೆಲೆ ದಿಢೀರನೇ ಏರಿಕೆಯಾಗಿದೆ,ಇದು ನಫೆಡ್ ಕೇಂದ್ರಗಳಿಗೆ ರೈತರು ಕೊಬ್ಬರಿಯನ್ನು ಮಾರದಂತೆ ತಡೆಯುವ ತಂತ್ರವಾಗಿದೆ.ಇಂತಹ ಯಾವುದಕ್ಕೂ ರೈತರು ಮಣಿಯದೇ ಸರ್ಕಾರ ಸ್ಥಾಪಿಸಿರುವ ನಫೆಡ್ ಕೇಂದ್ರಗಳಿಗೆ ತಮ್ಮ ಕೊಬ್ಬರಿಯನ್ನು ಮಾರಿ ಹಾಗೂ ಮೂರರಿಂದ ನಾಲ್ಕು ದಿನಗಳಲ್ಲಿ ತಮಗೆ ನಿಮ್ಮ ಹಣ ಕೈಸೇರಲಿದೆ ಎಂದರು.
ತಾನೂ ಈ ಭಾಗದವನೆ ಆಗಿದ್ದು ಇಲ್ಲಿನ ವರ್ತರು ಮತ್ತು ಅಧಿಕಾರಿಗಳು ಯಾವ ರೀತಿ ಆಟಗಳನ್ನು ಆಡುತ್ತಾರೆಂಬುದನ್ನು ಬಲ್ಲವನಾಗಿದ್ದು, ಈ ಸಂದರ್ಭದಲ್ಲಿ ಯಾರು ತಮ್ಮ ಗೋದಾಮುಗಳಲ್ಲಿ ಹೆಚ್ಚಿನ ಕೊಬ್ಬರಿ ಶೇಖರಣೆ ಮಾಡಿರುತ್ತಾರೆಂದನ್ನು ತನಗೆ ತಿಳಿಸಿ ಅವರ ಗೋಡೋನ್ ಗಳನ್ನು ಸೀಸ್ ಮಾಡಿಸುವುದಾಗಿ ಹಾಗೂ ವರ್ತಕರ ಜೊತೆ ಮಾರುಕಟ್ಟೆ ಅಧಿಕಾರಿಗಳು ಕೈಜೋಡಿಸಿದರೆ ಅವರ ವಿರುದ್ದವೂ ಉಗ್ರಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹುಳಿಯಾರು ಅಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದೆ ರೋಗಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದಾಗ ಸಚಿವರು ಕೂಡಲೇ ಮೊಬೈಲ್ ಮೂಲಕ ಡಿಹೆಚ್ ಓ ಅವರೊಂದಿಗೆ ಮಾತನಾಡಿ ಇನ್ನು ಕೆಲ ದಿನಗಳಲ್ಲಿ ಖಾಯಂ ವೈದ್ಯರನ್ನು ನೇಮಿಸುವಂತೆ ತಿಳಿಸಿದರು. ಅಲ್ಲದೆ ಈ ಭಾಗದಲ್ಲಿ ಶುದ್ದ ಕುಡಿಯುವ ನೀರಿಲ್ಲ ಎಂಬುದು ತಮಗೆ ತಿಳಿದಿದ್ದು,ಬೋರನಕಣಿವೆಯಿಂದ ಹುಳಿಯಾರಿಗೆ ನಿತ್ಯ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ ಶುದ್ದೀಕರಣ ಘಟಕವನ್ನು ಗ್ರಾಮ ಪಂಚಾಯ್ತಿಯಿಂದ ಬೇರ್ಪಡಿಸಿ ಜಿಲ್ಲಾ ಇಂಜಿನಿಯರ್ ಅವರ ಅಧೀನಕ್ಕೆ ನೀಡಿ,ಸದಾಕಾಲ ಸ್ವಚ್ಚವಾಗಿಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಆಶೋಕ್ ಬಾಬು,ಧನುಷ್ ರಂಗನಾಥ್, ಜಬೀಉಲ್ಲಾ, ಮೀಸೆ ರಂಗಪ್ಪ, ಎಪಿಎಂಸಿ ಉಪಾಧ್ಯಕ್ಷ ಸಿದ್ರಾಮಯ್ಯ,ಯಳನಡು ಮಲ್ಲಿಕಣ್ನ, ಹೊಸಳ್ಳಿ ಅಶೋಕ್,ಕೆಂಕೆರೆ ಶಿವಕುಮಾರ್,ಬಡಗಿ ರಾಮಣ್ಣ, ವೆಂಕಟೇಶ್, ಚಿಕ್ಕಬಿದರೆ ಶಾಂತಣ್ಣ,ಚುರುಮುರಿ ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ