ಇಲ್ಲಿನ ಕೃಷಿಉತ್ಪನ್ನ ಮಾರುಕಟ್ಟೆಯಲ್ಲಿ ತಾ.20ರ ಗುರುವಾರದಿಂದ ನಫೆಡ್ ಕೊಬ್ಬರಿ ಖರೀದಿಕೇಂದ್ರ ಪ್ರಾರಂಭಗೊಳ್ಳಲಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ಮುಂದಾಗಿದ್ದು,ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಬೆಂಬಲಬೆಲೆ 5500ರೂ ಮತ್ತು ಸಹಾಯಧನ 1000ರೂ ನಂತೆ ಖರೀದಿ ನಡೆಯಲಿದೆ.
ನಫೆಡ್ ಕೇಂದ್ರಕ್ಕೆ ಕೊಬ್ಬರಿ ಮಾರುವವರು ಪಹಣಿ ಮತ್ತು ತೋಟಗಾರಿಕೆ ಇಲಾಖೆಯಿಮ್ದ ಪಡೆದ ದಾಸ್ತಾನು ಇಳುವರಿ ದೃಢೀಕರಣ ಪತ್ರ ಹಾಜರು ಪಡಿಸಿ,ದಾಸ್ತಾನು ತರುವ ದಿನಾಂಕಕ್ಕೆ ಟೋಕನನ್ನು ನಫೆಡ್ ಅಧಿಕಾರಿಗಳಿಂದ ಪಡೆಯುಬೇಕಿದೆ. ತಾಲ್ಲೂಕಿನ ಎಲ್ಲಾ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೊಬ್ಬರಿಯನ್ನು ಖರೀದಿಕೇಂದ್ರದಲ್ಲಿ ಮಾರಾಟ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ