ಶಾಲಾ ಕಾಲೇಜುಗಳಿಗೆ ನೋಂದಣಿಯಾಗುವ ಸಂಧರ್ಭದಲ್ಲಿ ಶುಲ್ಕ ವಿನಾಯಿತಿ ಹಾಗೂ ಜಾತಿ ದೃಢೀಕರಣಕ್ಕಾಗಿ ಲಗತ್ತಿಸಬೇಕಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯು 21 ದಿನಗಳಿಗೆ ವಿತರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಪ್ರಮಾಣ ಪತ್ರವನ್ನು 21 ದಿನಗಳಿಗೆ ಬದಲಾಗಿ ಒಂದು ವಾರದೊಳಗೆ ವಿತರಿಸುವ ಕ್ರಮವನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಸ್ತುತದಲ್ಲಿ ಶಾಲಾ ಕಾಲೇಜುಗಳ ದಾಖಲಾತಿ ಶುಲ್ಕದಲ್ಲಿ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ಭರಿಸಲಾಗದೆ ತಮ್ಮ ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಿದರೆ ಶುಲ್ಕದಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ ಎಂದು ತಿಳಿದು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಾರೆ.ಆದರೆ ಸರ್ಕಾರ ಸಕಾಲ ಯೋಜನೆಯಡಿ ಸರ್ಕಾರಿ ಸೇವೆಗಳಿಗೆ ಕಾಲಾವಧಿಯನ್ನು ನಿಗದಿಗೊಳಿಸಿದ್ದು, ಅಂತೆಯೇ ವಿದ್ಯಾಭ್ಯಾಸಕ್ಕೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡುವ ಕಾಲಾವಧಿಯನ್ನು 21 ದಿನಕ್ಕೆ ನಿಗದಿಗೊಳಿಸಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಸೇರಿದಂತೆ ಇತರೆ ತರಗತಿಗಳ ಫಲಿತಾಂಶ ಬಹುಪಾಲು ಮೇ ತಿಂಗಳಲ್ಲಿ ಪ್ರಕಟವಾಗುತ್ತದೆ. ಫಲಿತಾಂಶ ಬಂದ ಒಂದು ತಿಂಗಳುಗಳ ಒಳಗಾಗಿ ಇತರೆ ತರಗತಿಗಳಿಗೆ ದಾಖಲಾತಿ ಪ್ರಾರಂಭವಾಗಿ ಮುಕ್ತಾಯವಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಶಾಲಾಪ್ರಾರಂಭದ ನಂತರವೇ ಆದಾಯ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಉತ್ತೀರ್ಣರಾದ ವಿಧ್ಯಾರ್ಥಿಗಳು ನಂತರದ ತರಗತಿ ಗಳಿಗೆ ನೋಂದಣಿಯಾಗುವಲ್ಲಿ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ 21 ದಿನ ನಿಗದಿಗೊಳಿಸಿ -ರುವುದರಿಂದ. ಪ್ರಮಾಣಪತ್ರ ಪಡೆಯುವುದರೊಳಗೆ ದಾಖಲಾತಿಯೇ ಮುಗಿಯುತ್ತದೆ.ಅಲ್ಲದೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ ಎಂಬ ಆತಂಕ ವಿದ್ಯಾರ್ಥಿಗಳು ಹಾಗೂ ಪೋಷಕರದ್ದಾಗಿದೆ .
ಹುಳಿಯಾರು ನಾಡಕಛೇರಿಯ ನೆಮ್ಮದಿಕೇಂದ್ರದ ಮುಂದೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ಪೋಷಕರು |
ನೆಮ್ಮದಿ ಕೇಂದ್ರಗಳಲ್ಲಿ ಕಂಪ್ಯೂಟರ್ ಮೂಲಕ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡುವುದಕ್ಕಿಂತ ಮುಂಚಿತವಾಗಿ ಅವರಿವರನ್ನು ಎಡೆತಾಕಿ ಎರಡು ಮೂರು ದಿನಗಳಲ್ಲಿ ಆದಾಯ ಪ್ರಮಾಣ ಪತ್ರ ಪಡೆದು ಯಾವುದೆ ತೊಂದರೆಯಿಲ್ಲದೆ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಗುತಿತ್ತು,ಆದರೆ ಈಗ ನೆಮ್ಮದಿಕೇಂದ್ರದಲ್ಲಿ ಸಮಯ ನಿಗದಿಗೊಳಿಸಿರುವುದರಿಂದ ಮಕ್ಕಳನ್ನು ಶಾಲೆಗೆ ಸೆರಿಸುವುದಕ್ಕೆ ತೊಂದರೆಯಾಗುತ್ತಿದೆ.ಸರ್ಕಾರ ಹಿಂದಿನಂತೆ ಮೂರು-ನಾಲ್ಕುದಿನಗಳಲ್ಲಿ ಪ್ರಮಾಣಪತ್ರ ನೀಡುವಂತೆ ಹುಳಿಯಾರಿನ ನಾಡಕಛೇರಿಯ ನೆಮ್ಮದಿ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಪೋಷಕರುಗಳು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ