ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಮಾರುತಿ ನಗರದ ಶ್ರೀಡಿಸೈನರ್ ಅಂಗಡಿಯಲ್ಲಿ ಸೋಮವಾರ ನಡೆದಿದೆ.
ಶ್ರೀಡಿಸೈನರ್ ಎಂಬ ಅಂಗಡಿ ನಡೆಸುತ್ತಿದ್ದ 35 ವರ್ಷದ ಪುಷ್ಪ ಎಂಬಾಕೆ ಅತ್ಮಹತ್ಯೆ ಮಾಡಿಕೊಂಡಿದ್ದು,ದಿನನಿತ್ಯದಂತೆ ಅಂಗಡಿಗೆ ಹೋಗಿ ಅಂಗಡಿಯಲ್ಲಿಯೇ ವಿಷ ಸೇವಿಸಿದ್ದು,ಮಧ್ಯಾಹ್ನ ಊಟಕ್ಕೆ ಮನೆ ಬಾರದೆ ಇದ್ದಾಗ ಅವರ ತಾಯಿ ಅಂಗಡಿ ಹತ್ತಿರ ಹೋಗಿ ನೋಡಿದಾಗ ವಿಷ ತಿಳಿದಿದೆ.ಗಂಡಹೆಂಡತಿಯ ನಡುವಿನ ಸಂಬಂಧದಲ್ಲಿ ಕೆಲ ತಿಂಗಳುಗಳಿಂದ ವೈಮನಸ್ಸು ಉಂಟಾಗಿದ್ದು,ಜೀವನದಲ್ಲಿ ಜುಗುಪ್ಸೆತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.ಈಕೆಗೆ ಇಬ್ಬರು ಮಕ್ಕಳಿದ್ದಾರೆ.ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ