ಹೆಚ್ಚುತ್ತಿರುವ ಖಾಸಗಿ ಶಾಲೆಗಳಿಗೆ ಮಾರು ಹೋಗಿರುವ ಇಂದಿನ ಪೋಷಕರು ಆಂಗ್ಲಮಾಧ್ಯಮದೆಡೆಗೆ ತಮ್ಮ ಒಲವು ತೊರುತ್ತಾ, ಉತ್ತಮ ಶಿಕ್ಷಣ ನೀಡುವ, ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಉಚಿತವಾಗಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಸರ್ಕಾರಿ ಶಾಲೆಗಳನ್ನು ಮರೆತು, ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೊಂದಾಯಿಸುತ್ತಿರುವವರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟು,ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಹುಳಿಯಾರಿನ ಟಿಪ್ಪು ಯುವಕ ಸಂಘದವರು.
ಪಟ್ಟಣದಲ್ಲಿರುವ ಉರ್ದು ಸರ್ಕಾರಿ ಶಾಲೆಯಲ್ಲಿ ಉತ್ತಮ ಬೋಧನೆಯಿದ್ದು,ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಬೋಧಕರಿದ್ದರೂ ಸಹ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗುತ್ತಿಲ್ಲ. ಈ ಶಾಲೆಯಲ್ಲಿ ಪ್ರತಿ ವರ್ಷ ಸಾಕಷ್ಟು ಮುಸ್ಲಿಂ ಮಕ್ಕಳು ದಾಖಲಾಗುತ್ತಿದ್ದರು.ಆದರೆ ಈ ಬಾರಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿದಿದ್ದು ಶಾಲೆಯ ಬಾಗಿಲು ಹಾಕುವ ದುಸ್ಥಿತಿ ಎದುರಾಗಿದೆ. ಪಟ್ಟಣದಾದ್ಯಂತ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಟಿಪ್ಪು ಯುವಕ ಸಂಘದವರು ಅಲ್ಪಸಂಖ್ಯಾರಿಗಾಗಿ ಇರುವ ಶಾಲೆಗೆ ತಮ್ಮ ಸಮುದಾಯದವರೇ ದಾಖಲಾಗದೇ ಇರುವುದನ್ನು ತಿಳಿದು,ಶಾಲಾ ಸಿಬ್ಬಂದಿಯೊಂದಿಗೆ ಚರ್ಚಿಸಿ,ಸಂಘದವರು ತಮ್ಮ ಸಮುದಾಯದ ಪ್ರತಿ ಮನೆಗಳಿಗೆ ಭೇಟಿಯಿತ್ತು.ಶಾಲೆಯ ಬಗ್ಗೆ ಪೋಷಕರಿಗೆ ವಿವರವಾಗಿ ಮನವರಿಕೆ ಮಾಡುತ್ತಾ,ಅವರ ಮಕ್ಕಳನ್ನು ದಾಖಲಿಸುವಂತೆ ಮನವಿ ಮಾಡಿ,ಪೋಷಕರ ಮನವೋಲಿಸಿ ಶಾಲೆಗೆ ಮಕ್ಕಳನ್ನು ದಾಖಲಿಸುವಲ್ಲಿ ಟಿಪ್ಪು ಸಂಘದವರು ಯಶಸ್ವಿಯಾಗಿದ್ದಾರೆ.
ಇಂದು ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವುದರ ಜೊತೆ, ಖಾಸಗಿ ಶಾಲೆಗಳಿಗೆ ಹೆಚ್ಚಿನದಾಗಿ ವ್ಯಯಿಸುವ ಹಣವನ್ನು ತಮ್ಮ ಇತರೆ ವ್ಯವಹಾರದಲ್ಲಿ ವಿನಿಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವ ಮಾರ್ಗದಲ್ಲಿ ಸಾಗಬೇಕಿದೆ.ಅಲ್ಲದೆ ಸರ್ಕಾರ ಸರ್ಕಾರಿ ಶಾಲೆಗಳಿಗೆ ಇನ್ನು ಹೆಚ್ಚಿನ ಸವಲತ್ತುಗಳನು ನೀಡಿ ಪೋಷಕರು ಬೇಡ ಎಂದರು, ಮಕ್ಕಳು ಸರ್ಕಾರಿ ಶಾಲೆಗೆ ಸೇರುತ್ತೇವೆ ಎಂಬ ಮನೋಭಾವ ಮೂಡುವಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸಂಘದ ಇಮ್ರಾಜ್ ಮನವಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಟಿಪ್ಪು ಸಂಘದ ಅಪ್ಸರ್,ಫಯಾಜ್,ಸದ್ದಾಂ, ಇರ್ಫಾನ್ ಹಾಗೂ ಶಾಲೆಯ ಶಿಕ್ಷಕರು ಇದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ