ಅತಿವೇಗವಾಗಿ ಚಲಿಸುತ್ತಿದ್ದ ಪ್ಯಾಸೇಂಜರ್ ಆಟೋ ಚಾಲಕನ ಅಜಾಗರೂಕತೆಯಿಂದ ಅಯತಪ್ಪಿ ಮಗುಚಿಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನಪ್ಪಿ, ಮತ್ತೋರ್ವನಿಗೆ ತೀವ್ರ ಗಾಯಗಳಾಗಿರುವ ಘಟನೆ ಹುಳಿಯಾರು ಹೋಬಳಿ ಬರಕನಹಾಲ್ ಸಮೀಪದ ಬಾಲದೇವರಟ್ಟಿ ಬಳಿ ಸೋಮವಾರ ಸಂಜೆ ಘಟಿಸಿದೆ.
ಪೋಚಗಟ್ಟೆ ಎ.ಡಿ.ಕಾಲೋನಿಯ ನಿವಾಸಿ ಮಹಲಿಂಗಯ್ಯ (36 ವರ್ಷ) ಮೃತಪಟ್ಟಿದ್ದು, ಈತ ತನ್ನ ಸ್ವಗ್ರಾಮ ಪೋಚಗಟ್ಟೆಗೆ ತೆರಳಲೆಂದು ಬರಕನಹಾಲ್ ಕಡೆಯಿಂದ ಬರುತ್ತಿದ್ದ ಆಟೋ ಹತ್ತಿದ್ದು, ಚಾಲಕನು ಆಟೋವನ್ನು ಅತಿ ವೇಗಯಾಗಿ ಓಡಿಸಿಕೊಂಡು ಬಂದ ಪರಿಣಾಮ ಆಯತಪ್ಪಿದ ಆಟೋ ಮಗುಚಿ ಬಿದ್ದಿದೆ ಎನ್ನಲಾಗಿದೆ. ಸ್ಥಳದಲ್ಲಿಯೇ ಮಹಲಿಂಗಯ್ಯನಿಗೆ ತೀವ್ರ ರಕ್ತಸ್ರಾವವಾಗಿ, ಹುಳಿಯಾರು ಆಸ್ಪತ್ರೆಗೆ ಕರೆ ತಂದು, ನಂತರ ಚಿ.ನಾ.ಹಳ್ಳಿ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಉದಯ್ ಕುಮಾರ್ ಎಂಬಾತನಿಗೆ ಗಾಯಗಳಾಗಿದ್ದು,ಆಟೋ ಚಾಲಕ ಪರಾರಿಯಾಗಿದ್ದಾನೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ