ಹೋಮದ ಪೂರ್ಣಾಹುತಿ ದೃಶ್ಯ. |
ಹುಳಿಯಾರು: ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳಿಂದ ಗಾಂಧೀಪೇಟೆಯಲ್ಲಿನ ಶ್ರೀ ಶನೇಶ್ವರಸ್ವಾಮಿಯ 9ನೇ ವರ್ಷದ ಕುಂಭಾಭಿಷೇಕ ಮಹೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳು, ಹೋಮ ಹವನಗಳೊಂದಿಗೆ,ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು..
ಎರಡು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಶುಕ್ರವಾರದಂದು ರಾತ್ರಿ ಗ್ರಾಮದೇವತೆಗಳಾದ ದುರ್ಗಾಪರಮೇಶ್ವರಿ ಹಾಗೂ ಹುಳಿಯಾರಮ್ಮ,ಆಂಜನೇಯ ಸ್ವಾಮಿ ದೇವರುಗಳ ಆಗಮನದೊಂದಿಗೆ ಭೇಟಿ ನಡೆದು, ಅದೇ ದಿನ ರಾತ್ರಿ ಶನೇಶ್ವರ ಸ್ವಾಮಿಗೆ ಪುಣ್ಯಾಹ,ದೇವನಾಂದಿ,ಮಂಡಲ ಸ್ಥಾಪನೆ ಹಾಗೂ ಭಕ್ತರಿಂದ ಕಳಸ ಸ್ಥಾಪನೆ,ಪ್ರಧಾನ ಕಳಸ,ನವಗ್ರಹಗಳ ಸ್ಥಾಪನಾ ಕಾರ್ಯ ನಡೆಸುವುದರ ಮೂಲಕ ಚಾಲನೆಗೊಂಡಿತ್ತು. ಇಂದು ಬೆಳಿಗ್ಗೆ ಪುರೋಹಿತರಾದ ಹೆಚ್.ಎಸ್.ಲಕ್ಷ್ಮಿನರಸಿಂಹಯ್ಯ, ಹೆಚ್.ಕೆ.ಗುಂಡಣ್ಣ, ಸತ್ಯನಾರಾಯಣ,ಗಣೇಶ,ಗುಂಡಪ್ಪ ಅವರ ಪೌರೋಹಿತ್ಯದಲ್ಲಿ ಆಗಮಿಸಿದ್ದ ದೇವರುಗಳ ಸಮ್ಮುಖದಲ್ಲಿ ನವಗ್ರಹ ಹೋಮ,ಗಣಪತಿ ಹೋಮ,ಮೃತ್ಯುಂಜಯ ಹೋಮ,ಶನೇಶ್ವರ ಹೋಮ, ನವಗ್ರಹಾರಾಧನೆ, ಪಂಚಾಮೃತಾಭಿಷೇಕಗಳು ನಡೆಯಿತು. ಪೂರ್ಣಾಹುತಿ,ಮಹಾಮಂಗಳಾರತಿ ನಂತರ ಕಳಸಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು.ಆಗಮಿಸಿದ್ದ ಭಕ್ತಾಧಿಗಳಿಗೆ ಜ್ಯೋತಿಪಣ ಗಾಣಿಗರ ಸಂಘದವರಿಂದ ಹಾಗೂ ವಿಪ್ರರಿಗೆ ವಿಪ್ರಸಮಾಜದಿಂದ ಅನ್ನಸಂತರ್ಪಣೆ ನಡೆಯಿತು. ಸಂಜೆ ಊರಿನ ರಾಜಬೀದಿಗಳಲ್ಲಿ ಸ್ವಾಮಿಯವರ ವೈಭವಯುತ ಉತ್ಸವ ಮಂಗಳವಾದ್ಯದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ಜ್ಯೋತಿಪಣ ಗಾಣಿಗರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್, ಅಧ್ಯಕ್ಷ ಚಂದ್ರಶೇಖರ್ (ಅಡುಗೆ),ಕಾರ್ಯದರ್ಶಿ ಬಸವರಾಜು,ಕಾತುರಯ್ಯ,ಪುಟ್ಟಯ್ಯ,ದುರ್ಗಮ್ಮದೇವಿ ದೇವಾಲಯ ಕಮಿಟಿ ಅಧ್ಯಕ್ಷ ಹು.ಕೃ.ವಿಶ್ವನಾಥ್,ಸುಬ್ರಮಣ್ಯ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ