ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಿಡ್‌ಝೀ ಶಾಲೆಯಲ್ಲಿ ಸಂಭ್ರಮದ ಪೋಷಕರ ದಿನಾಚರಣೆ

ಹುಳಿಯಾರಿನ ಕಿಡ್‌ಝೀ ಶಾಲೆಯಲ್ಲಿ ಆಚರಿಸಲಾದ ಪೋಷಕರ ದಿನಾಚರಣೆಯಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹುಳಿಯಾರು ಪಟ್ಟಣದ ಝೀ ಸಂಸ್ಥೆಯವರ ಕಿಡ್‌ಝೀ ಶಾಲೆಯಲ್ಲಿ ಈಚೆಗೆ ಪೋಷಕರ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ವಿಶೇಷವಾಗಿ ಪೋಷಕರಿಗೆಂದೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿಸಲಾಗಿತ್ತು. ಪೋಷಕರುಗಳಿಗೆ ತಮ್ಮ ತಮ್ಮ ಮಕ್ಕಳೊಂದಿಗೆ ಕೂಡಿ ಆಟವಾಡಿಸಿದ್ದು ಮನರಂಜಿಸಿತು.ಆಟೋಟಗಳಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಸ್ಥ ಅಶೋಕ್‌ಚಂದ್ರ, ಸಂಯೋಜಕ ಅಶೋಕ್‌ಮೂರ್ತಿ, ಸಹ ಸಂಯೋಜಕ ಮನು.ಟಿ ಮತ್ತು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

ಇಂದು ಕಾಲೇಜು ರಂಗ ತರಬೇತಿ ಶಿಬಿರ ಸಮಾರೋಪ

          ಕರ್ನಾಟಕ ನಾಟಕ ಆಕಾಡೆಮಿ ಬೆಂಗಳೂರು ಮತ್ತು ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಪ್ಪತ್ತು ದಿನಗಳ ಕಾಲದ ಕಾಲೇಜು ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾಲೇಜಿನ ಬಯಲು ಆಲಯದಲ್ಲಿ ಇಂದು(ಫೆ.೨೯) ಬೆಳಿಗ್ಗೆ ೧೨.೩೦ಕ್ಕೆ ನಡೆಯಲಿದೆ.               ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಷೇಕ್ ಮಾಸ್ತರ್ ಎಲ್.ಬಿ ಸಮಾರೋಪ ನೆರವೇರಿಸಲಿದ್ದು ರಿಜಿಸ್ಟ್ರಾರ್ ಸಿದ್ದರಾಜು, ಅಕಾಡೆಮಿಯ ಸದಸ್ಯ ಸಂಚಾಲಕ ಎನ್.ಕೆ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪ್ರಾಂಶುಪಾಲ ಬಿಳಿಗೆರೆ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನವಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶಿಬಿರದ ಸಂಚಾಲಕ ಡಾ.ಬಾಳಪ್ಪ ಕೋರಿದ್ದಾರೆ.

ಬೋರನಕಣಿವೆ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

           ಏಷ್ಯಾ ಖಂಡದಲ್ಲೇ ವಿಜ್ಞಾನ ವಿಭಾಗಕ್ಕೆ ಪ್ರಥಮವಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಸರ್ ಸಿ.ವಿ.ರಾಮನ್ ಅವರು ಸಂಶೋಧನೆ ಮಾಡಲು ವಿದೇಶಕ್ಕೆ ಹೋಗಲಿಲ್ಲ. ಪ್ರಕೃತಿಯನ್ನು ನೋಡುತ್ತ, ಪ್ರಶ್ನಿಸುತ್ತಾ ವಿಜ್ಞಾನಿಯಾದರು. ವಿದ್ಯಾರ್ಥಿಗಳು ಕೂಡ ಪ್ರಕೃತಿಯನ್ನು ನೋಡುತ್ತಲೇ ವಿಜ್ಞಾನವನ್ನು ಕಂಡುಕೂಳ್ಳಬೇಕೆಂದು ತುಮಕೂರಿನ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ತಿಳಿಸಿದರು.                              ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಬೋರನಕಣಿವೆಯ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ,ಚಿತ್ರಕಲಾ ಪ್ರದರ್ಶನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.                      ಶಾಲಾ ಮಕ್ಕಳಿಗೆ ವಿಜ್ಞಾನ ಜ್ಞಾನ ಹೆಚ್ಚಿಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದ್ದು ವಿದ್ಯಾರ್ಥಿಗಳು ರಾಮನ್ ಅವರನ್ನು ಮಾದರಿಯಾಗಿಟ್ಟುಕೊಂಡು ವಿಜ್ಞಾನ ಕಲಿಯಬೇಕೆಂದರು.                          ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್ ಅವರು ಸಿ.ವಿ.ರಾಮನ್ ಮಾಡಿರುವ ಸಾಧನೆ ಪರಿಚಯಿಸುತ್ತ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನಿಯಾಗುವ ಪ್ರೇರಣೆ ನೀಡಬೇಕೆಂದು ತಿಳಿಸಿದರು. ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಬೋರನಕಣಿವೆಯ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ತಾಲ್ಲೂಕ್ ಸಿ.ವಿ.ರಾಮ

ಹುಳಿಯಾರು: ಕಸಾಪ ಚುನಾವಣೆಯಲ್ಲಿ ರಮಾಕುಮಾರಿಗೆ ಹೆಚ್ಚುಮತ

          ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಹಾಗೂ ಜಿಲ್ಲಾಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹುಳಿಯಾರಿನಲ್ಲಿ ಶೇಕಡ ೬೩ ಮತದಾನ ನಡೆದಿದ್ದು ಸದಸ್ಯರು ಹುರುಪಿನಿಂದ ಪಾಲ್ಗೊಂಡಿದ್ದು ಕಂಡುಬಂತು.                ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು ೫೬೨ ಮತದಾರರಿದ್ದು ಹುಳಿಯಾರು ಹೋಬಳಿಯ ೨೩೫ ಮತದಾರಿಗೆ ಹುಳಿಯಾರು ನಾಡಕಚೇರಿಯಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು.ತಾಲ್ಲೂಕ್ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪರಿಷತ್ ಚುನಾವಣೆ ಹೋಬಳಿ ಮತದಾರರ ಅನುಕೂಲ ದೃಷ್ಟಿಯಿಂದ ಪಟ್ಟಣದ ನಾಡ ಕಚೇರಿಯಲ್ಲಿ ಹೆಚ್ಚುವರಿ ಮತಗಟ್ಟೆಯ ವ್ಯವಸ್ಥೆ ಕಲ್ಪಿಸಿದ್ದರಿಂದ  ಹೆಚ್ಚಿನ ಸದಸ್ಯರು  ಮತ ಚಲಾಯಿಸಲು ಅನುಕೂಲವಾಯಿತು.ಬೆಳಿಗ್ಗೆ ೮ ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ ೪ ಗಂಟೆಯವರೆಗೂ ಮಂದಗತಿಯಲ್ಲಿ ನಡೆಯಿತು. ಹುಳಿಯಾರಿನ ನಾಡಕಛೇರಿಯಲ್ಲಿ ಕಸಾಪ ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಮತಏಣಿಕೆ ದೃಶ್ಯ.                ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಾ.ಹ.ರಮಾಕುಮಾರಿ, ಉಮಾಮಹೇಶ್‌, ಡಿ.ಚಂದ್ರಪ್ಪ, ಗರುಗದೊಡ್ಡಿ ನಟರಾಜ್‌, ಪುರುಷೋತ್ತಮ್‌, ಮಹಾದೇವಪ್ಪ, ರವಿಕುಮಾರ್‌ ಸೇರಿದಂತೆ ಒಟ್ಟು ಏಳು ಮಂದಿ ಕಣದಲ್ಲಿದ್ದರೆ  ಕೇಂದ್ರ ಸ್ಥಾನಕ್ಕೆ ಮನುಬಳಿಗಾರ್ ಸೇರಿದಂತೆ ೧೪ ಮಂದಿ ಕಣದಲ್ಲಿದ್ದರು.            ಹೆಚ್ಚಿನ ಚಟುವಟಿಕೆಯಿಂದ ಕೂಡಿ ಜಿಲ್ಲೆಯಲ್ಲಿ ಹೆಸರಾಗಿದ್ದ ಹುಳಿಯಾ

ಹುಳಿಯಾರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ಬಲುಜೋರು

             ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಹಾಗೂ ಜಿಲ್ಲಾಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಫೆಬ್ರುವರಿ 28ರಂದು) ಚುನಾವಣೆ ನಡೆಯುತ್ತಿದ್ದು, ಹುಳಿಯಾರಿನಲ್ಲೂ ಕೂಡ ಶುಕ್ರವಾರ ,ಶನಿವಾರದಂದು ಚುನಾವಣಾ ಪ್ರಚಾರ ಕಂಡುಬಂತು.               ತಾಪಂ ಜಿಪಂ ಚುನಾವಣೆಯ ಹಿನ್ನಲೆಯಲ್ಲಿ ಮಂಕಾಗಿದ್ದ ಪರಿಷತ್ ಚುನಾವಣೆ ಇದೀಗ ಗರಿಗೆದರಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ೨೩೫ ಮತದಾರರನ್ನು ಹೊಂದಿರುವ ಹುಳಿಯಾರು ಪ್ರತಿಷ್ಠೆಯ ಕಣವಾಗಿದೆ.ಹೆಚ್ಚಿನ ಚಟುವಟಿಕೆಯಿಂದ ಕೂಡಿ ಜಿಲ್ಲೆಯಲ್ಲಿ ಹೆಸರಾಗಿದ್ದ ಹುಳಿಯಾರು ಕಸಾಪ ಹೋಬಳಿ ಘಟಕ ಕೂಡ ಬಣ ರಾಜಕೀಯಕ್ಕೆ ಬಲಿಯಾಗಿರುವುದರಿಂದ ಪರಿಷತ್ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿದೆ. ಭಾನುವಾರದಂದು ನಡೆಯಲಿರುವ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಹುಳಿಯಾರಿನಲ್ಲಿ ಅಭ್ಯರ್ಥಿಪರ ಕಂಡುಬಂದ ಪ್ರಚಾರ.               ಕಳೆದ ಚುನಾವಣೆಯಲ್ಲಿ ಬಸವಮೂರ್ತಿಯವರು ಈ ಭಾಗದಲ್ಲಿ ಹೆಚ್ಚಿನ ಅಸ್ಥೆವಹಿಸಿ ಕ್ರಿಯಾಶೀಲರಾಗಿದ್ದರಿಂದ ಜಿಲ್ಲಾ ಅಧ್ಯಕ್ಷ ಸ್ಥಾನ ಸೋಮುಭಾಸ್ಕರಾಚಾರ್ ಅವರಿಗೆ ಈ ಭಾಗದಿಂದ ಹೆಚ್ಚಿನ ಮತಗಳು ಒಲಿಯುವಂತಾಯಿತು.ಹಾಗಾಗಿ ಹಾಲಿ ಅಭ್ಯರ್ಥಿಗಳು ಹುಳಿಯಾರನ್ನು ಹೆಚ್ಚು ಕೇಂದ್ರಿಕರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.                         ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪರವಾಗಿ ತಿಂಗಳಿಂದಲೂ ಪ್ರಚಾರ ನಡೆಸಿದ್ದು ಕಸಾಪ ಸಂಘಟಕರ ಮೂಲ

ಇದು ನನ್ನ ಗೆಲುವಲ್ಲ ,ಕಾರ್ಯಕರ್ತರ ಗೆಲುವು:ವೈ.ಸಿ.ಸಿದ್ದರಾಮಯ್ಯ

ಶಾಸಕರ ಮೇಲೆ ಕಿಡಿಕಾರಿದ ನೂತನ ಜಿಪಂ ಸದಸ್ಯ ------------------------------------                    ನನ್ನ ಹಿಂದೆ ಹಲವಾರು ಕಾರ್ಯಕರ್ತರು ಹಗಲಿರುಳೆನ್ನದೆ ದುಡಿದ ಪರಿಣಾಮವಾಗಿ ಹುಳಿಯಾರು ಜಿಲ್ಲಾಪಂಚಾಯ್ತಿ ಸ್ಥಾನಕ್ಕೆ ನಾನು ಆಯ್ಕೆಯಾಗಲು ಕಾರಣವಾಗಿದ್ದು ನನ್ನ ಗೆಲುವಿನ ಸಂಪೂರ್ಣ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕಿದೆ ಎಂದು ಹುಳಿಯಾರು ಜಿಪಂ ವಿಜೇತ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ನುಡಿದರು.                     ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿರುವುದು ಹುಳಿಯಾರು ಕ್ಷೇತ್ರವಾಗಿದ್ದು ಈ ಗೆಲುವಿಗೆ ಕಾರಣರಾದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಕೃತಜ್ಞ ಎಂದ ಅವರು ಜನರಿಟ್ಟ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದು ಅವರ ಹಿತಕಾಯಲು ನಾನು ಬದ್ದ ಎಂದರು. ಹುಳಿಯಾರು ಜಿಪಂ ಸ್ಥಾನಕ್ಕೆ ಆಯ್ಕೆಯಾದ ಕಾಂಗ್ರೆಸ್ಸಿನ ವೈ.ಸಿ.ಸಿದ್ರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿದರು.ಗ್ರಾಪಂ ಸದಸ್ಯ ದಯಾನಂದ್,ಧನುಷ್ ರಂಗನಾಥ್,ಮಲ್ಲೀಕಣ್ಣ,ರಮೇಶ್ ಬಾಬು,ಹೊಸಳ್ಳಿ ಅಶೋಕ್ ಇದ್ದಾರೆ. ಈ ಹಿಂದೆ ಎಪಿಎಂಸಿ ಚುನಾವಣೆಯಲ್ಲೂ ಸಹ ಜನರ ಆಶೀರ್ವಾದ ನನ್ನ ಮೇಲಿದ್ದ ಕಾರಣ ಅಲ್ಲೂ ಕೂಡ ಇದೇರೀತಿ ಫಲಿತಾಂಶದಿಂದಾಗಿ ಗೆಲುವು ಸಾಧಿಸಿದ್ದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದು ಜನತೆ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟ ಕಾರಣ ಈ

ತುಮಕೂರು ಜಿಲ್ಲಾಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಅವರು ಪಡೆದ ಮತದ ವಿವರ

ಜಿಲ್ಲಾ ಪಂಚಾಯತಿ =================== ಶೆಟ್ಟಿಕೆರೆ : ಗೆಲುವು-ಜೆಡಿಎಸ್-ಕಲ್ಲೇಶ್8669, ಅಂತರ 1467,  ಕಾಂಗ್ರೆಸ್-ಸಿ.ಬಸವರಾಜು-7202,  ಬಿಜೆಪಿ-ಎ.ಬಿ.ರಮೇಶ್‌ಕುಮಾರ್-5864,  ಪಕ್ಷೇತರ-ಎ.ಬಿ.ಶರತ್‌ಕುಮಾರ್-197. ಹಂದನಕೆರೆ : ಗೆಲುವು-ಜೆಡಿಎಸ್-ಆರ್.ರಾಮಚಂದ್ರಯ್ಯ9474, ಅಂತರ 1427,  ಬಿಜೆಪಿ-ಬರಗೂರುಬಸವರಾಜು-8047,  ಕಾಂಗ್ರೆಸ್-ಜಿ.ರಘುನಾಥ್5973,  ಪಕ್ಷೇತರ-ಬಸವರಾಜು-243. ಹೊಯ್ಸಳಕಟ್ಟೆ : ಗೆಲುವು-ಬಿಜೆಪಿ-ಎಸ್.ಟಿ.ಮಹಾಲಿಂಗಯ್ಯ-8524, ಅಂತರ 2592.  ಕಾಂಗ್ರೆಸ್-ವೀರಸಿಂಗನಾಯ್ಕ5932,  ಜೆಡಿಎಸ್-ಈರಯ್ಯ-4168, ಪಕ್ಷೇತರ-ಲಾ.ಪು.ಕರಿಯಪ್ಪ448,  ಪಕ್ಷೇತರ- ರೇವಾನಾಯ್ಕ-475. ಕಂದಿಕೆರೆ : ಗೆಲುವು-ಬಿಜೆಪಿ-ಮಂಜುಳ 9624, ಅಂತರ 2466.  ಜೆಡಿಎಸ್-ಆರ್.ಸುನಿತ-7158,  ಕಾಂಗ್ರೆಸ್-ಪದ್ಮ-5642,  ಪಕ್ಷೇತರ-ಶೈಲಜ-1543. ಹುಳಿಯಾರು : ಗೆಲುವು-ಕಾಂಗ್ರೆಸ್.-ವೈ.ಸಿ.ಸಿದ್ದರಾಮಯ್ಯ6754, ಅಂತರ 744.   ಜೆಡಿಎಸ್-ಸೈಯದ್ ಏಜಾಸ್‌ಪಾಷ-6010,  ಪಕ್ಷೇತರ-ಹೆಚ್.ಹನುಮಂತಯ್ಯ4287,  ಬಿಜೆಪಿ-ಹೆಚ್.ಜಯಣ್ಣ-4054, ಪಕ್ಷೇತರ-ಎನ್.ಜಿ.ಶಿವಣ್ಣನಂದಿಹಳ್ಳಿ-2031,  ಪಕ್ಷೇತರ- ಧನಂಜಯ-447.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತಿಯ 19 ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಭ್ಯರ್ಥಿಗಳ ವಿವರ  ಹೀಗಿದೆ ------------------------------ ಹುಳಿಯಾರು : ಗೆಲುವು : ಹೆಚ್.ಎನ್.ಕುಮಾರ್(ಜೆಡಿಎಸ್)  3798,  ಅಂತರ 566. ಹೆಚ್.ಎನ್.ಕಿರಣ್‌ಕುಮಾರ್(ಕಾಂಗ್ರೆಸ್) ಮತ-3232,  ಹೆಚ್.ಚಂದ್ರಶೇಖರ್‌ರಾವ್(ಬಿಜೆಪಿ)935. ಯಳನಡು : ಗೆಲುವು: ಜೆಡಿಎಸ್ : ಯತೀಶ್‌ಸೋಮಯ್ಯ 2656, ಅಂತರ 438. ಕದುರೇಗೌಡಯಾದವ್(ಕಾಂಗ್ರೆಸ್)2107,  ವಿಶ್ವೇಶ್ವರಯ್ಯ(ಬಿಜೆಪಿ)2218,  ಚಂದ್ರಶೇಖರಯ್ಯ(ಪಕ್ಷೇತರ)412. ತಿಮ್ಲಾಪುರ : ಗೆಲುವು : ಜೆಡಿಎಸ್-ಕಲ್ಯಾಣಿಬಾಯಿ ರಘುನಾಯ್ಕ(2576 ), ಅಂತರ 357. ಕಮಲಾಬಾಯಿ(ಬಿಜೆಪಿ)2148,  ಗೌರಿಬಾಯಿ-ಕಾಂಗ್ರೆಸ್-2219,  ರೇಣುಕಮ್ಮ-ಪಕ್ಷೇತರ-1021. ಕೆಂಕೆರೆ : ಗೆಲುವು-ಬಿಜೆಪಿ-ಭಾಗ್ಯಮ್ಮ-2544, ಅಂತರ 395. ಮಂಜುಳ-ಕಾಂಗ್ರೆಸ್631,  ಕೆ.ಆರ್.ಕವಿತ-ಪಕ್ಷೇತರ-2149. ಗಾಣದಾಳು : ಗೆಲುವು-ಕಾಂಗ್ರೆಸ್-ಕಲಾವತಿ-1425, ಅಂತರ 63. ಸಿದ್ದಗಂಗಾಬಾಯಿ-ಬಿಜೆಪಿ-1092,  ಕೆ.ವಿ.ರಾಧಮ್ಮ-ಜೆಡಿಎಸ್-742,  ಕಮಲಬಾಯಿ-ಪಕ್ಷೇತರ-51,  ನೀಲಬಾಯಿ-ಪಕ್ಷೇತರ-21,  ಲಕ್ಷ್ಮೀಬಾಯಿ-ಪಕ್ಷೇತರ-1362. ಹೊಯ್ಸಳಕಟ್ಟೆ : ಗೆಲುವು-ಬಿಜೆಪಿ-ಮಧು-1644, ಅಂತರ 22. ರಂಗರಾಜು-ಕಾಂಗ್ರೆಸ್-1622,  ಮಂಜುನಾಥ-ಜೆಡಿಎಸ್-294,  ಆರ್.ಕುಮಾರ್-ಪಕ್ಷೇತರ-96,  ದೇವರಾಜು-ಪಕ್ಷೇತರ-231.

3ನೇ ತರಗತಿ ವಿದ್ಯಾರ್ಥಿನಿ ಟೇಕ್ಷ್ಣವಿ ಮಲೇಶಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

  ಚಿಕ್ಕನಾಯಕನಹಳ್ಳಿಯ ಸಂಯುಕ್ತ ಕರ್ನಾಟಕ ವರದಿಗಾರ ಚಿದಾನಂದ್ ಮಗಳು ಗೌಡನಹಳ್ಳಿ ಗ್ರಾಮದ ಬಾಲಪ್ರತಿಭೆ ಟೇಕ್ಷ್ಣವಿ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮಲೇಶಿಯಾ ರಾಷ್ಟ್ರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಗೆ  ಆಯ್ಕೆಯಾಗಿದ್ದಾಳೆ. ಪಟ್ಟಣದ ರೋಟರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಟೇಕ್ಷ್ಣವಿ ಜನವರಿ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಟೇಕ್ಷ್ಣವಿ ಪೋಷಕರು ಸಿ.ಹೆಚ್.ಚಿದಾನಂದ, ತಾಯಿ ರಾಧಾಮಣಿ. ಈಕೆ ತಿಪಟೂರಿನ ಖುಷಿ ಐಡಿಯಲ್ ಪ್ಲೇ ಅಬಕಾಸ್‍ ನಲ್ಲಿ ತರಬೇತಿ ಪಡೆದಿದ್ದು ಹಾಸನದಲ್ಲಿ ಕಳೆದ ನವಂಬರ್‍ ನಲ್ಲಿ ನಡೆದ ರಾಜ್ಯಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು. ಜೈಪುರದಲ್ಲಿ ಪ್ರಥಮ ಸ್ಥಾನ ಪಡೆದ ಇವರಿಗೆ ರಾಜಾಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ಸುಮಾನ್ ಶರ್ಮ, ರಾಜಾಸ್ಥಾನ ಪೊಲೀಸ್ ಎ.ಡಿ.ಜಿ.ಪಿ. ಸುನಿಲ್ ಮೆಹರೋತ್ರ, ರಾಜಾಸ್ಥಾನ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುನ್ಜಿಲಾಲ್ ಮೀನಾ, ಟೇಕ್ಷ್ಣವಿಯನ್ನು ಸನ್ಮಾನಿಸಿದ್ದಾರೆ. ಮುಂದಿನ ಜುಲೈ ತಿಂಗಳಿನಲ್ಲಿ ನಡೆಯುವ ಮಲೇಷಿಯಾ ರಾಷ್ಟ್ರದಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ಅಬಕಾಸ್ ಸ್ಫರ್ಧೆಗೆ ಆಯ್ಕೆಯಾಗಿದ್ದಾಳೆ.

ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಮತಯಂತ್ರಗಳ ಗೊಂದಲ

ಹೋಬಳಿ ವ್ಯಾಪ್ತಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು ಯಳನಾಡು ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಮತಯಂತ್ರಗಳ ಗೊಂದಲ ತಲೆದೋರಿ ನಂತರ ಸಮಸ್ಯೆ ಬಗೆಹರಿದು ಮತದಾನ ಮುಂದುವರಿಯಿತು. ಸಮಸ್ಯೆ ಏನು: ಪ್ರತಿ ಮತಘಟ್ಟೆಯಲ್ಲೂ ಎರಡು ಮತಯಂತ್ರಗಳಿದ್ದು ಒಂದು ಜಿಲ್ಲಾಪಂಚಾಯ್ತಿ ಹಾಗೂ ಮತ್ತೊಂದು ತಾಲ್ಲೂಕ್ ಪಂಚಾಯ್ತಿಗೆಂದು ಇರಿಸಲಾಗಿದೆ.ಮತದಾರರು ಮೊದಲು ಜಿಲ್ಲಾಪಂಚಾಯ್ತಿಗೆ ನಂತರ ತಾಲ್ಲೂಕ್ ಪಂಚಾಯ್ತಿಗೆ ಮತಚಲಾಯಿಸಬೇಕಿದ್ದು ಆದರೆ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಇದು ಅದಲು ಬದಲಾಗಿ ಮೊದಲು ತಾಲ್ಲೂಕ್ ಪಂಚಾಯ್ತಿಗೆ ಹಾಗೂ ಆನಂತರ ಜಿಲ್ಲಾಪಂಚಾಯ್ತಿಗೆ ಮತಚಲಾಯಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಕಾರ್ಯಕರ್ತರುಗಳು ಚುನಾವಣಾಧಿಕಾರಿ,ತಹಸಿಲ್ದಾರ್ ಅವರಿಗೆ ದೂರು ನೀಡಿದ ನಂತರ ಅವರ ಆದೇಶದಂತೆ ಮತಯಂತ್ರಗಳನ್ನು ಸರಿಪಡಿಸಲಾಯಿತು.ಈ ಮಧ್ಯೆ ಕಾರ್ಯಕರ್ತರುಗಳು ಹಾಗೂ ಚುನಾವಣೆ ಸಿಬ್ಬಂದಿ ಬಗ್ಗೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿದ್ದ ಪೋಲಿಸರು ಪರಿಸ್ಥಿತಿ ನಿಯಂತ್ರಿಸಿದರು.

ಹುಳಿಯಾರು:ಶಾಂತಿಯುತ ಮತದಾನ:ಶೇ ೬೬ % ಮತಚಲಾವಣೆ

ಹುಳಿಯಾರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆಯಲ್ಲಿ ಶೇ ೬೬ ಮತದಾನ ನಡೆದಿದ್ದು ಶಾಂತಿಯುತವಾಗಿತ್ತು. ಹುಳಿಯಾರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆಯಲ್ಲಿ ಎಂಪಿಎಸ್ ಶಾಲೆಯ ಬೂತ್ ಮುಂದೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ಮತದಾರರು             ಬೆಳಗ್ಗೆ ೭ ರಿಂದ ಪ್ರಾರಂಭವಾದ ಮತದಾನ ಸಂಜೆ ೫ ರವರೆಗೂ ನಡೆಯಿತು. ಯಾವುದೇ ಅಹಿತಕರಘಟನೆ ನಡೆಯದಂತೆ ಪ್ರತಿ ಬೂತ್ ಹಾಗೂ ಮತಕೇಂದ್ರದ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಮುಂಜಾನೆ ೭ ಗಂಟೆಗೆ ಪ್ರಾರಂಭವಾಗಿದ್ದ ಮತದಾನ ೧೦ ಗಂಟೆಯವರೆಗೂ ಮಂದಗತಿಯಲ್ಲಿ ಸಾಗಿ 1 ಗಂಟೆಯ ನಂತರ ಚುರುಕಾಗಿತ್ತು.ಒಟ್ಟು ೧೨೧೧೮ ಮತದಾರರಿದ್ದು ೧೩ ವಾರ್ಡುಗಳ ೧೪ ಬೂತಿನಿಂದ ೮೦೧೧ ಮತಚಲಾವಣೆಯಾಗಿದೆ.                  ಪಟ್ಟಣದ ಎಂಪಿಎಸ್ ಶಾಲೆ,ಸರ್ಕಾರಿ ಬಾಲಕಿಯರ ಶಾಲೆ,ಉರ್ದು ಶಾಲೆ,ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸೋಮಜ್ಜನಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಕೇಂದ್ರದ ಹೊರಭಾಗದಲ್ಲಿ ಅಭ್ಯಥಿ೯ಗಳ ಪರ ಅವರ ಪಕ್ಷದ ಮುಖಂಡರುಗಳು ,ಕಾರ್ಯಕರ್ತರುಗಳು ,ಬೆಂಬಲಿಗರು,ಕುಟುಂಬ ವರ್ಗದವರು ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.                  ಮದ್ಯಾಹ್ನನದ ನಂತರ ಮತದಾನ ಮಾಡದೆ ಮನೆಯಲಿಳುದಿದ್ದ ಮತದಾರರನ್ನು ಓಲೈಸಿ

ಲಕ್ಷ್ಮೀ ದೇವಿ ಜಾತ್ರೆಗೆ ಚಾಲನೆ

          ಹುಳಿಯಾರು ಪಟ್ಟಣದಲ್ಲಿರುವ ಶ್ರೀಲಕ್ಷ್ಮೀ ದೇವಾಲಯದಲ್ಲಿ ಮೂರು ದಿನಗಳ ಕಾಲದ ಜಾತ್ರಾಮಹೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ವಕ್ಕಲಿನ ಅಣ್ಣತಮ್ಮಂದಿರಿಂದ ನಡೆದುಕೊಂಡು ಬಂದಿರುವ ಜಾತ್ರಾಮಹೋತ್ಸವದಲ್ಲಿ ಮುಂಜಾನೆ ಅಮ್ಮನವರಿಗೆ ಕಲ್ಲತ್ತಗಿರಿಯಲ್ಲಿ ಗಂಗಾಸ್ನಾನ ನೆರವೇರಿಸಿ ನಂತರ ಪಟ್ಟಣಕೆ ಆಗಮಿಸಿದ ಅಮ್ಮನವರನ್ನು ಮಂಗಳ ವಾದ್ಯದೊಂದಿಗೆ ನಡೆಮುಡಿಯಲ್ಲಿ ದೇವಾಲಯಕ್ಕೆ ಕರೆತರಲಾಯಿತು.ನಂತರ ಪೂಜಾಕೈಂಕರ್ಯಗಳು ನಡೆದು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.       ಶನಿವಾರದಂದು ಬೆಳಿಗ್ಗೆ ೧೧.೩೦ಕ್ಕೆ ಅಮ್ಮನವರಿಗೆ ಅಸಗೆ ಇಳಿಸುವ ಕಾರ್ಯಕ್ರಮ ನಡೆಯಲಿದೆ.           ಭಾನುವಾರದಂದು ಮಾಸ್ತಮ್ಮನವರಿಗೆ ಪೂಜೆ ಸಲ್ಲಿಸಿ ಭೋಜನದ ನಂತರ ಜಾತ್ರೆಗೆ ತೆರೆಬೀಳಲಿದೆ.         ಹುಳಿಯಾರು ಪಟ್ಟಣದಲ್ಲಿರುವ ಶ್ರೀಲಕ್ಷ್ಮೀ ದೇವಾಲಯದಲ್ಲಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ನಡೆಮುಡಿ ಕಾರ್ಯಕ್ರಮ      ಇಂದಿನ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀದೇವಿ ಛಾರಿಟಬಲ್ ಟ್ರಸ್ಟ್ ನ ಧನರಾಜ್,ಗಂಗಣ್ಣ,ಕೋದಂಡರಾಮ್,ನೊಣವಿನಕೆರೆ ಲಿಂಗರಾಜು,ಬನಶಂಕರಿ ಛಾರಿಟಬಲ್ ಟ್ರಸ್ಟ್ ನ ಅನಂತಕುಮಾರ್,ದಾಸಪ್ಪ,ಗ್ರಾಪಂ ಸದಸ್ಯ ಶಂಕರ್,ದೇವಾಲಯ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಸೇರಿದ್ದರು.

ವಿಷಸೇವಿಸಿದ್ದ ವ್ಯಕ್ತಿಯ ಸಾವು

           ಕಳೆದ ಎಂಟು ವರ್ಷಗಳಿಂದ ಬಿಟ್ಟುಬಿಡದೆ ಕಾಡುತ್ತಿದ್ದ ಹೊಟ್ಟೆನೋವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರದಂದು ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ಹೊಸಳ್ಳಿಯಲ್ಲಿ ಜರುಗಿದೆ.            ಮೃತ ದುರ್ದೈವಿಯನ್ನು ರಾಮಚಂದ್ರರಾವ್(೬೫) ಎಂದು ಗುರ್ತಿಸಲಾಗಿದ್ದು ಆಗಾಗ್ಗೆ ತೀವ್ರವಾಗಿ ಕಾಡುತ್ತಿದ್ದ ಹೊಟ್ಟೆನೋವು ಹಾಗೂ ಎದೆನೋವನ್ನು ತಾಳಲಾರೆದೆ ಗುರುವಾರ ೧೦ ತಂಟೆ ಸಮಯದಲ್ಲಿ ತೋಟದಮನೆಯಲ್ಲಿ ವಿಷಸೇವಿಸಿ ಅಸ್ವಸ್ಥ್ಯನಾಗಿದ್ದಾನೆ.ಕೂಡಲೇ ಈತನನ್ನು ಹುಳಿಯಾರಿಗೆ ಕರೆತಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದ್ದೆ ಇಂದು ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಆತ ಮೃತಪಟ್ಟಿರುತ್ತಾನೆ .              ಮೃತ ರಾಮಚಂದ್ರರಾವ್ ಪತ್ನಿ ಹಾಗೂ ಮೂರು ಮಕ್ಕಳನ್ನು ಆಗಲಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ಮನೆ ಮನೆ ಪ್ರಚಾರ : ಕೊನೆಗಳಿಗೆ ಕಾರ್ಯಾಚರಣೆ                                        ----------------------------------- ಹುಳಿಯಾರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ನಡೆದಿದ್ದು ಶನಿವಾರದ ಮತದಾನದಲ್ಲಿ ಹಣಾಹಣಿ ನಡೆಸಿದ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.             ೪೮ ಗಂಟೆಗಳ ಮೊದಲೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದು,ಗುರುವಾರದಿಂದ ಶುರುವಾದ ಮನೆಮನೆ ಪ್ರಚಾರ ರಾತ್ರಿ ಹಗಲ್ಲೆನ್ನದೆ ಭರದಿಂದ ನಡೆದಿದೆ.ಇಷ್ಟು ದಿನ ಮಾಡಿದ ಪ್ರಚಾರ ಒಂದು ರೀತಿಯಾದಾದ್ದರೆ ಕಡೆಕ್ಷಣದಲ್ಲಿ ನಡೆಯುವ ಕಸರತ್ತು ಮತದಾರರ ಮನಬದಲಾಯಿಸಿ ಫಲಿತಾಂಶದಲ್ಲಿ ಬದಲಾವಣೆ ತರಲಿದೆ.                         ಅಭ್ಯರ್ಥಿಗಳಿಗೆ ಕಡೆಯ ಎರಡು ದಿನಗಳು ಮುಖ್ಯವಾಗಿದ್ದು ಎಲ್ಲಾ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಹಳ್ಳಿ ಪಟ್ಟಣವೆನ್ನದೆ ರಾತ್ರಿಯೆಲ್ಲಾ ತಮ್ಮ ಹಿಂಬಾಲಕರೊಂದಿಗೆ ಕಡೆಕ್ಷಣದ ಕಾರ್ಯಾಚರಣೆಗೆ ಇಳಿದಿದ್ದು ಎಲ್ಲೆಡೆ ಬಿರುಸಿನ ಚಟುವಟಿಕೆ ಕಂಡುಬಂತು. ಆಯಾ ಜಾತಿ ಜನಾಂಗದ ಮುಖಂಡರುಗಳನ್ನು ,ಸಂಘಸಂಸ್ಥಗಳ ಪ್ರತಿನಿಧಿಗಳನ್ನು ಆಯಾ ಮುಖಂಡರುಗಳಿಗೆ ಹತ್ತಿರವಾದವರ ಮೂಲಕ ಗುಪ್ತಸ್ಥಳಗಳಲ್ಲಿ ಭೇಟಿಯಾಗಿ ಮಾತುಕಥೆಯಾಡುವುದು ನಡೆದಿತ್ತು.                  ಸಮಯದ ಪರಿವೆಯಿಲ್ಲದಂತೆ ರಾತ್ರಿಯೆಲ್ಲಾ ಗುಪ್ತ ಸಭೆಗಳು ನಡೆದು ಕೊನೆಗಳಿಗೆಯ ಕಾರ್ಯಾಚರಣೆಯಲ್ಲಿ ಹಂಚಿಕೆ ವ್ಯವಸ

ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ:ಸಿ.ಬಿ.ಸುರೇಶ್ ಬಾಬು

ಜೆಡಿಎಸ್ ನಿಂದ ರೋಡ್ ಶೋ -------------------------------------------------- ಪಂಚಾಯ್ತಿ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಗುರುವಾರ ಕಡೆಯ ದಿನವಾಗಿದ್ದು ಹುಳಿಯಾರು ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಜಿಪಂ ಅಭ್ಯರ್ಥಿ ಸೈಯದ್ ಏಜಾಸ್ ಹಾಗೂ ತಾಪಂ ಅಭ್ಯರ್ಥಿ ಹೆಚ್.ಎನ್.ಕುಮಾರ್ ಪರ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು.               ನಂತರ ಮತನಾಡಿದ ಅವರು ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಹುಳಿಯಾರು ಪ್ರತಿಷ್ಠೆಯ ಕಣವಾಗಿದ್ದು, ಮತದಾರರ ಒಲವು ಜೆಡಿಎಸ್ ಪಕ್ಷಕ್ಕಿದ್ದು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.                 ಇತರೆ ಪಕ್ಷಗಳ ಅಪಪ್ರಚಾರದ ನಡುವೆಯೂ ಜೆಡಿಎಸ್ ಪಕ್ಷಕ್ಕೆ ಇತ್ತೀಚೆಗಷ್ಟೆ ನಡೆದ ಎಂ.ಎಲ್.ಸಿ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದ್ದು ಈ ಚುನಾವಣೆಯಲ್ಲೂ ಸಹ ಇದು ಮರುಕಳಿಸಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಹುಳಿಯಾರು ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳ ಪರ ಗುರುವಾರದಂದು ಪ್ರಚಾರ ಕೈಗೊಂಡರು.ಅಭ್ಯರ್ಥಿಗಳಾದ ಸೈಯದ್ ಏಜಾಸ್ ಹಾಗೂ ಹೆಚ್.ಎನ್.ಕುಮಾರ್,ಗೌಡಿ,ಜಹೀರ್ ಸಾಬ್ ಇದ್ದಾರೆ.                         ಜೆಡಿಎಸ್ ಪಕ್ಷವೂ ಈ ಚುನಾವಣೆಯಲ್ಲಿ ಎಲ್ಲಾ ವರ್ಗದವರಿಗೂ ಅದ್ಯತೆ ನೀಡಿ ಸಮರ್ಥರಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಅಲ್ಪಸಂಖ್ಯಾತ

ಸಿಂಗಾಪುರದಲ್ಲಿ ದಂಪತಿಗಳ ಆತ್ಮಹತ್ಯೆ

ಹುಳಿಯಾರು ಸಮೀಪದ ಯಳನಾಡು ಪಂಚಾಯ್ತಿಯ ಸಿಂಗಾಪುರದಲ್ಲಿ ದಂಪತಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.ಮೃಟಪಟ್ಟಿರುವ ದುರ್ದೈವಿ ದಂಪತಿಗಳನ್ನು ಸಿಂಗಾಪುರ ಗ್ರಾಮದ ಕೃಷಿಕ ಕೃಷ್ಣಪ್ಪ(೪೬) ಹಾಗೂ ನಳಿನ(೩೮)ಎನ್ನಲಾಗಿದ್ದು ಬುಧವಾರ ರಾತ್ರಿ ಘಟನೆ ಸಂಭವಿಸಿದ್ದು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಗ್ರಾಮದಲ್ಲಿ ತಟಿಗೆ ಮನೆಯಲ್ಲಿ ವಾಸವಿದ್ದ ದಂಪತಿಯರು ಬೆಳಿಗ್ಗೆಯಾದರೂ ಹೊರಬಾರದ್ದರಿಂದ ಅಮುಮಾನಗೊಂಡೂ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಗಂಡ ನೇಣಿಗೆ ಶರಣಾಗಿದ್ದರೆ ಹೆಂಡತಿ ಮಲಗಿದಂತೆಯೇ ಸಾವನ್ನಪ್ಪಿದ್ದಾಳೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಒಬ್ಬಾತ ದಾವಣೆಗೆರೆಯಲ್ಲಿ ಕೆಲಸದಲ್ಲಿದ್ದರೆ ಮತ್ತೊಬ್ಬಾತ ಗ್ರಾಮದಲ್ಲೆ ತೋಟ ತುಡಿಕೆ ನೋಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದಾನೆ.ಹೆಂಡತಿ ನಳಿನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರಿಗೆ ಒಯ್ಯಲಾಗಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ಪ್ರವೀಣ್ ಕುಮಾರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದವರಿಂದ ರೋಡ್ ಶೋ

ಕಾಂಗ್ರೆಸ್ ಪಕ್ಷ ಹುಳಿಯಾರು ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ  ---------------------------------------------------- ಹುಳಿಯಾರು:ಹುಳಿಯಾರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ಹಾಗೂ ತಾಲ್ಲೂಕು ಪಂಚಾಯತ್ ಅಭ್ಯರ್ಥಿ ಕಿರಣ್‌ಕುಮಾರ್ ಪರ ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಬುಧವಾರ ಸಂಜೆ ರೋಡ್‌ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಕಾಂಗ್ರೆಸ್ ಸಾಧನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುದ್ದಹನುಮೇಗೌಡ ಹಾಗೂ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಅನ್ನಭಾಗ್ಯ ,ಕ್ಷೀರಭಾಗ್ಯ , ಶಾದಿಭಾಗ್ಯ, ಕೃಷಿ ಭಾಗ್ಯ, ಹೀಗೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ ಎಂದರು. ಹುಳಿಯಾರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜಿಪಂ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ಹಾಗೂ ತಾಪಂ ಅಭ್ಯರ್ಥಿ ಕಿರಣ್‌ಕುಮಾರ್ ಪರವಾಗಿ ಸಂಸದ ಸಂಸದ ಮುದ್ದಹನುಮೇಗೌಡ ಮತ್ತು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ರೋಡ್ ಶೋ ಹುಳಿಯಾರು ಜಿಲ್ಲಾ ಪಂಚಾಯತ್ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಿದ್ದು

ರಂಗನಾಥ ಸ್ವಾಮಿಗೆ ಕೇಸರಿ ಅಲಂಕಾರ

ಹುಳಿಯಾರಿನ ರಂಗನಾಥ ಸ್ವಾಮಿಗೆ ಅಮವಾಸ್ಯೆ ಪೂಜೆಯ ಅಂಗವಾಗಿ ಮಾಡಲಾಗಿದ್ದ ಕೇಸರಿ ಅಲಂಕಾರ