ಹೋಬಳಿ ವ್ಯಾಪ್ತಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು ಯಳನಾಡು ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಮತಯಂತ್ರಗಳ ಗೊಂದಲ ತಲೆದೋರಿ ನಂತರ ಸಮಸ್ಯೆ ಬಗೆಹರಿದು ಮತದಾನ ಮುಂದುವರಿಯಿತು.
ಸಮಸ್ಯೆ ಏನು: ಪ್ರತಿ ಮತಘಟ್ಟೆಯಲ್ಲೂ ಎರಡು ಮತಯಂತ್ರಗಳಿದ್ದು ಒಂದು ಜಿಲ್ಲಾಪಂಚಾಯ್ತಿ ಹಾಗೂ ಮತ್ತೊಂದು ತಾಲ್ಲೂಕ್ ಪಂಚಾಯ್ತಿಗೆಂದು ಇರಿಸಲಾಗಿದೆ.ಮತದಾರರು ಮೊದಲು ಜಿಲ್ಲಾಪಂಚಾಯ್ತಿಗೆ ನಂತರ ತಾಲ್ಲೂಕ್ ಪಂಚಾಯ್ತಿಗೆ ಮತಚಲಾಯಿಸಬೇಕಿದ್ದು ಆದರೆ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಇದು ಅದಲು ಬದಲಾಗಿ ಮೊದಲು ತಾಲ್ಲೂಕ್ ಪಂಚಾಯ್ತಿಗೆ ಹಾಗೂ ಆನಂತರ ಜಿಲ್ಲಾಪಂಚಾಯ್ತಿಗೆ ಮತಚಲಾಯಿಸುವ ವ್ಯವಸ್ಥೆ ಮಾಡಲಾಗಿತ್ತು.
ಈ ಬಗ್ಗೆ ಕಾರ್ಯಕರ್ತರುಗಳು ಚುನಾವಣಾಧಿಕಾರಿ,ತಹಸಿಲ್ದಾರ್ ಅವರಿಗೆ ದೂರು ನೀಡಿದ ನಂತರ ಅವರ ಆದೇಶದಂತೆ ಮತಯಂತ್ರಗಳನ್ನು ಸರಿಪಡಿಸಲಾಯಿತು.ಈ ಮಧ್ಯೆ ಕಾರ್ಯಕರ್ತರುಗಳು ಹಾಗೂ ಚುನಾವಣೆ ಸಿಬ್ಬಂದಿ ಬಗ್ಗೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿದ್ದ ಪೋಲಿಸರು ಪರಿಸ್ಥಿತಿ ನಿಯಂತ್ರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ