ಕರ್ನಾಟಕ ನಾಟಕ ಆಕಾಡೆಮಿ ಬೆಂಗಳೂರು ಮತ್ತು ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇಪ್ಪತ್ತು ದಿನಗಳ ಕಾಲದ ಕಾಲೇಜು ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾಲೇಜಿನ ಬಯಲು ಆಲಯದಲ್ಲಿ ಇಂದು(ಫೆ.೨೯) ಬೆಳಿಗ್ಗೆ ೧೨.೩೦ಕ್ಕೆ ನಡೆಯಲಿದೆ.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಷೇಕ್ ಮಾಸ್ತರ್ ಎಲ್.ಬಿ ಸಮಾರೋಪ ನೆರವೇರಿಸಲಿದ್ದು ರಿಜಿಸ್ಟ್ರಾರ್ ಸಿದ್ದರಾಜು, ಅಕಾಡೆಮಿಯ ಸದಸ್ಯ ಸಂಚಾಲಕ ಎನ್.ಕೆ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪ್ರಾಂಶುಪಾಲ ಬಿಳಿಗೆರೆ ಕೃಷ್ಣ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನವಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶಿಬಿರದ ಸಂಚಾಲಕ ಡಾ.ಬಾಳಪ್ಪ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ