ಕಳೆದ ಎಂಟು ವರ್ಷಗಳಿಂದ ಬಿಟ್ಟುಬಿಡದೆ ಕಾಡುತ್ತಿದ್ದ ಹೊಟ್ಟೆನೋವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿದ್ದ ವ್ಯಕ್ತಿಯೊಬ್ಬ ಶುಕ್ರವಾರದಂದು ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ಹೊಸಳ್ಳಿಯಲ್ಲಿ ಜರುಗಿದೆ.
ಮೃತ ದುರ್ದೈವಿಯನ್ನು ರಾಮಚಂದ್ರರಾವ್(೬೫) ಎಂದು ಗುರ್ತಿಸಲಾಗಿದ್ದು ಆಗಾಗ್ಗೆ ತೀವ್ರವಾಗಿ ಕಾಡುತ್ತಿದ್ದ ಹೊಟ್ಟೆನೋವು ಹಾಗೂ ಎದೆನೋವನ್ನು ತಾಳಲಾರೆದೆ ಗುರುವಾರ ೧೦ ತಂಟೆ ಸಮಯದಲ್ಲಿ ತೋಟದಮನೆಯಲ್ಲಿ ವಿಷಸೇವಿಸಿ ಅಸ್ವಸ್ಥ್ಯನಾಗಿದ್ದಾನೆ.ಕೂಡಲೇ ಈತನನ್ನು ಹುಳಿಯಾರಿಗೆ ಕರೆತಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದ್ದೆ ಇಂದು ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಆತ ಮೃತಪಟ್ಟಿರುತ್ತಾನೆ .
ಮೃತ ರಾಮಚಂದ್ರರಾವ್ ಪತ್ನಿ ಹಾಗೂ ಮೂರು ಮಕ್ಕಳನ್ನು ಆಗಲಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ