ಹುಳಿಯಾರಿನ ಕಿಡ್‌ಝೀ ಶಾಲೆಯಲ್ಲಿ ಆಚರಿಸಲಾದ ಪೋಷಕರ ದಿನಾಚರಣೆಯಲ್ಲಿ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. |
ಹುಳಿಯಾರು ಪಟ್ಟಣದ ಝೀ ಸಂಸ್ಥೆಯವರ ಕಿಡ್‌ಝೀ ಶಾಲೆಯಲ್ಲಿ ಈಚೆಗೆ ಪೋಷಕರ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ವಿಶೇಷವಾಗಿ ಪೋಷಕರಿಗೆಂದೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿಸಲಾಗಿತ್ತು. ಪೋಷಕರುಗಳಿಗೆ ತಮ್ಮ ತಮ್ಮ ಮಕ್ಕಳೊಂದಿಗೆ ಕೂಡಿ ಆಟವಾಡಿಸಿದ್ದು ಮನರಂಜಿಸಿತು.ಆಟೋಟಗಳಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯಸ್ಥ ಅಶೋಕ್‌ಚಂದ್ರ, ಸಂಯೋಜಕ ಅಶೋಕ್‌ಮೂರ್ತಿ, ಸಹ ಸಂಯೋಜಕ ಮನು.ಟಿ ಮತ್ತು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ