ಏಷ್ಯಾ ಖಂಡದಲ್ಲೇ ವಿಜ್ಞಾನ ವಿಭಾಗಕ್ಕೆ ಪ್ರಥಮವಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಸರ್ ಸಿ.ವಿ.ರಾಮನ್ ಅವರು ಸಂಶೋಧನೆ ಮಾಡಲು ವಿದೇಶಕ್ಕೆ ಹೋಗಲಿಲ್ಲ. ಪ್ರಕೃತಿಯನ್ನು ನೋಡುತ್ತ, ಪ್ರಶ್ನಿಸುತ್ತಾ ವಿಜ್ಞಾನಿಯಾದರು. ವಿದ್ಯಾರ್ಥಿಗಳು ಕೂಡ ಪ್ರಕೃತಿಯನ್ನು ನೋಡುತ್ತಲೇ ವಿಜ್ಞಾನವನ್ನು ಕಂಡುಕೂಳ್ಳಬೇಕೆಂದು ತುಮಕೂರಿನ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ತಿಳಿಸಿದರು.
ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಬೋರನಕಣಿವೆಯ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ,ಚಿತ್ರಕಲಾ ಪ್ರದರ್ಶನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಿಗೆ ವಿಜ್ಞಾನ ಜ್ಞಾನ ಹೆಚ್ಚಿಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದ್ದು ವಿದ್ಯಾರ್ಥಿಗಳು ರಾಮನ್ ಅವರನ್ನು ಮಾದರಿಯಾಗಿಟ್ಟುಕೊಂಡು ವಿಜ್ಞಾನ ಕಲಿಯಬೇಕೆಂದರು.
ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್ ಅವರು ಸಿ.ವಿ.ರಾಮನ್ ಮಾಡಿರುವ ಸಾಧನೆ ಪರಿಚಯಿಸುತ್ತ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಜ್ಞಾನಿಯಾಗುವ ಪ್ರೇರಣೆ ನೀಡಬೇಕೆಂದು ತಿಳಿಸಿದರು.
ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಬೋರನಕಣಿವೆಯ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ತಾಲ್ಲೂಕ್ ಸಿ.ವಿ.ರಾಮನ್ ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಗಳು. |
ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಚಿತ್ರಕಲಾ ಪ್ರದರ್ಶನದ ಬಗ್ಗೆ ಮಕ್ಕಳು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ೧೫ ಪ್ರೌಢಶಾಲೆ ಹಾಗೂ ೨೬ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಚ್.ಪಿ.ಎಸ್.ವಿಭಾಗದಲ್ಲಿ ಮೊರಾರ್ಜಿಶಾಲೆಯ ಶಶಾಂಕ್, ದೂಡ್ಡೆಣ್ಣೆಗೆರೆ ಗಗನ್, ಪ್ರೌಢಶಾಲೆ ವಿಭಾಗದಲ್ಲಿ ನವೋದಯ ಶಾಲೆ ಪೂಜಾ, ಬೆಳ್ಳಾರ ಶಾಲೆಯ ಕೃತಿಕಾ ಸಿ.ವಿ.ರಾಮನ್ ಪ್ರಶಸ್ತಿ ಪಡೆದುಕೊಂಡರು.
ಮಧುಗಿರಿ ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕ್ ವಿಜ್ಞಾನ ಕೇಂದ್ರದ ಎನ್. ಇಂದಿರಮ್ಮ, ತಾಲ್ಲೂಕ್ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಎನ್.ನಟರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉಮಾ, ಎಸ್ ಡಿಎಂಸಿ ಅಧ್ಯಕ್ಷ ವದ್ಧಿಗಯ್ಯ.ದಸೂಡಿ ತಾಪಂ ಸದಸ್ಯ ಪ್ರಸನ್ನಕುಮಾರ್,ಎಸ್.ಮಂಜಮ್ಮ, ಮಾಜಿ ತಾಪಂ ಸದಸ್ಯೆ ಕವಿತಾ ಪ್ರಕಾಶ್, ಗ್ರಾಪಂ ಸದಸ್ಯ ಮಧೂಸೂದನ್, ಮುಖಂಡರಾದ ರವಿಕುಮಾರ್, ಟಿ.ಎನ್.ರಮೇಶ್ ,ಸುವರ್ಣ ವಿದ್ಯಾ ಚೇತನದ ಪದಾಧಿಕಾರಿಗಳು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ