ಹುಳಿಯಾರು ಪಟ್ಟಣದಲ್ಲಿರುವ ಶ್ರೀಲಕ್ಷ್ಮೀ ದೇವಾಲಯದಲ್ಲಿ ಮೂರು ದಿನಗಳ ಕಾಲದ ಜಾತ್ರಾಮಹೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ವಕ್ಕಲಿನ ಅಣ್ಣತಮ್ಮಂದಿರಿಂದ ನಡೆದುಕೊಂಡು ಬಂದಿರುವ ಜಾತ್ರಾಮಹೋತ್ಸವದಲ್ಲಿ ಮುಂಜಾನೆ ಅಮ್ಮನವರಿಗೆ ಕಲ್ಲತ್ತಗಿರಿಯಲ್ಲಿ ಗಂಗಾಸ್ನಾನ ನೆರವೇರಿಸಿ ನಂತರ ಪಟ್ಟಣಕೆ ಆಗಮಿಸಿದ ಅಮ್ಮನವರನ್ನು ಮಂಗಳ ವಾದ್ಯದೊಂದಿಗೆ ನಡೆಮುಡಿಯಲ್ಲಿ ದೇವಾಲಯಕ್ಕೆ ಕರೆತರಲಾಯಿತು.ನಂತರ ಪೂಜಾಕೈಂಕರ್ಯಗಳು ನಡೆದು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಶನಿವಾರದಂದು ಬೆಳಿಗ್ಗೆ ೧೧.೩೦ಕ್ಕೆ ಅಮ್ಮನವರಿಗೆ ಅಸಗೆ ಇಳಿಸುವ ಕಾರ್ಯಕ್ರಮ ನಡೆಯಲಿದೆ.
ಭಾನುವಾರದಂದು ಮಾಸ್ತಮ್ಮನವರಿಗೆ ಪೂಜೆ ಸಲ್ಲಿಸಿ ಭೋಜನದ ನಂತರ ಜಾತ್ರೆಗೆ ತೆರೆಬೀಳಲಿದೆ.
ಹುಳಿಯಾರು ಪಟ್ಟಣದಲ್ಲಿರುವ ಶ್ರೀಲಕ್ಷ್ಮೀ ದೇವಾಲಯದಲ್ಲಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ನಡೆಮುಡಿ ಕಾರ್ಯಕ್ರಮ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ