ಹುಳಿಯಾರು ಸಮೀಪದ ಯಳನಾಡು ಪಂಚಾಯ್ತಿಯ ಸಿಂಗಾಪುರದಲ್ಲಿ ದಂಪತಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.ಮೃಟಪಟ್ಟಿರುವ ದುರ್ದೈವಿ ದಂಪತಿಗಳನ್ನು ಸಿಂಗಾಪುರ ಗ್ರಾಮದ ಕೃಷಿಕ ಕೃಷ್ಣಪ್ಪ(೪೬) ಹಾಗೂ ನಳಿನ(೩೮)ಎನ್ನಲಾಗಿದ್ದು ಬುಧವಾರ ರಾತ್ರಿ ಘಟನೆ ಸಂಭವಿಸಿದ್ದು ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಗಂಡ ನೇಣಿಗೆ ಶರಣಾಗಿದ್ದರೆ ಹೆಂಡತಿ ಮಲಗಿದಂತೆಯೇ ಸಾವನ್ನಪ್ಪಿದ್ದಾಳೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಒಬ್ಬಾತ ದಾವಣೆಗೆರೆಯಲ್ಲಿ ಕೆಲಸದಲ್ಲಿದ್ದರೆ ಮತ್ತೊಬ್ಬಾತ ಗ್ರಾಮದಲ್ಲೆ ತೋಟ ತುಡಿಕೆ ನೋಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದಾನೆ.ಹೆಂಡತಿ ನಳಿನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರಿಗೆ ಒಯ್ಯಲಾಗಿದ್ದು ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ಪ್ರವೀಣ್ ಕುಮಾರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ