ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಹಾಗೂ ಜಿಲ್ಲಾಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಹುಳಿಯಾರಿನಲ್ಲಿ ಶೇಕಡ ೬೩ ಮತದಾನ ನಡೆದಿದ್ದು ಸದಸ್ಯರು ಹುರುಪಿನಿಂದ ಪಾಲ್ಗೊಂಡಿದ್ದು ಕಂಡುಬಂತು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು ೫೬೨ ಮತದಾರರಿದ್ದು ಹುಳಿಯಾರು ಹೋಬಳಿಯ ೨೩೫ ಮತದಾರಿಗೆ ಹುಳಿಯಾರು ನಾಡಕಚೇರಿಯಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು.ತಾಲ್ಲೂಕ್ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪರಿಷತ್ ಚುನಾವಣೆ ಹೋಬಳಿ ಮತದಾರರ ಅನುಕೂಲ ದೃಷ್ಟಿಯಿಂದ ಪಟ್ಟಣದ ನಾಡ ಕಚೇರಿಯಲ್ಲಿ ಹೆಚ್ಚುವರಿ ಮತಗಟ್ಟೆಯ ವ್ಯವಸ್ಥೆ ಕಲ್ಪಿಸಿದ್ದರಿಂದ ಹೆಚ್ಚಿನ ಸದಸ್ಯರು ಮತ ಚಲಾಯಿಸಲು ಅನುಕೂಲವಾಯಿತು.ಬೆಳಿಗ್ಗೆ ೮ ಗಂಟೆಯಿಂದ ಪ್ರಾರಂಭವಾದ ಮತದಾನ ಸಂಜೆ ೪ ಗಂಟೆಯವರೆಗೂ ಮಂದಗತಿಯಲ್ಲಿ ನಡೆಯಿತು.
ಹುಳಿಯಾರಿನ ನಾಡಕಛೇರಿಯಲ್ಲಿ ಕಸಾಪ ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಮತಏಣಿಕೆ ದೃಶ್ಯ. |
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಾ.ಹ.ರಮಾಕುಮಾರಿ, ಉಮಾಮಹೇಶ್, ಡಿ.ಚಂದ್ರಪ್ಪ, ಗರುಗದೊಡ್ಡಿ ನಟರಾಜ್, ಪುರುಷೋತ್ತಮ್, ಮಹಾದೇವಪ್ಪ, ರವಿಕುಮಾರ್ ಸೇರಿದಂತೆ ಒಟ್ಟು ಏಳು ಮಂದಿ ಕಣದಲ್ಲಿದ್ದರೆ ಕೇಂದ್ರ ಸ್ಥಾನಕ್ಕೆ ಮನುಬಳಿಗಾರ್ ಸೇರಿದಂತೆ ೧೪ ಮಂದಿ ಕಣದಲ್ಲಿದ್ದರು.
ಹೆಚ್ಚಿನ ಚಟುವಟಿಕೆಯಿಂದ ಕೂಡಿ ಜಿಲ್ಲೆಯಲ್ಲಿ ಹೆಸರಾಗಿದ್ದ ಹುಳಿಯಾರು ಹೋಬಳಿ ಕಸಾಪ ಘಟಕ ಪ್ರತಿಷ್ಠೆಯ ಕಣವಾಗಿದ್ದರಿಂದ ಎಲ್ಲಾ ಅಭ್ಯರ್ಥಿಗಳು ಹುಳಿಯಾರನ್ನು ಹೆಚ್ಚು ಕೇಂದ್ರಿಕರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಅಭ್ಯರ್ಥಿಯಾಗಿ ಬಾ.ಹ.ರಮಾಕುಮಾರಿ ಕಣದಲ್ಲಿದಿದ್ದು ವಿಶೇಷವಾಗಿತ್ತು.
ಸಂಜೆ ನಾಲ್ಕರ ನಂತರ ಮತಏಣಿಕೆ ಕಾರ್ಯನಡೆದು ಸ್ಥಳದಲ್ಲೆ ಜಿಲ್ಲಾ ಹಾಗೂ ಕೇಂದ್ರ ಕಛೇರಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಪಡೆದ ಮತಗಳನ್ನು ಚುನಾವಣಾಧಿಕಾರಿ ಉಪತಹಸಿಲ್ದಾರ್ ಸತ್ಯನಾರಾಯಣ್ ಘೋಷಿಸಿದರು.
ಹುಳಿಯಾರು ಮತಗಟ್ಟೆಯಲ್ಲಿ ಜಿಲ್ಲಾ ಅಭ್ಯರ್ಥಿಗಳು ಪಡೆದ ಮತವಿವರ
------------------------------------------------------- ಬಾ.ಹ.ರಮಾಕುಮಾರಿ(೬೨),ಡಿ.ಚಂದ್ರಪ್ಪ(೫೯),ಕೆ.ಎಸ್.ಉಮಾಮಹೇಶ್(೨೧),ಎಂ.ಎಸ್.ರವಿಕುಮಾರ್
(೪),ಎಸ್.ಪುರುಷೋತ್ತಮ್(೨)ಮತಗಳನ್ನು ಪಡೆದರೆ ಮಹದೇವಪ್ಪ,ಗರುಗದೊಡ್ಡಿ ನಟರಾಜ್ ಯಾವುದೇ ಮತಪಡೆಯಲು ವಿಫಲರಾಗಿದ್ದಾರೆ.
ಹುಳಿಯಾರು ಮತಗಟ್ಟೆಯಲ್ಲಿ ಕೇಂದ್ರ ಅಭ್ಯರ್ಥಿಗಳು ಪಡೆದ ಮತ ವಿವರ:
------------------------------------------------------
ಮನುಬಳಿಗಾರ್(೯೦),ಬಿ.ಜಯಪ್ರಕಾಶ್ ಗೌಡ(೧೩),ಸಂಗಮೇಶ ಬಾದವಾಡಗಿ(೧೨),ಡಾ.ಜನಾರ್ಧನ್ ಹೆಚ್.ಎಲ್.(೭),ಶರಣ ಬಸಪ್ಪ ಕಲ್ಲಪ್ಪ ದಾನಕೈ(೫), ಮ.ಚಿ.ಕೃಷ್ಣ(೪), ಅಮೃತೇಶ್, ಆರ್.ಎಸ್.ಎನ್.ಗೌಡ ,ಬಸವರಾಜ ಹಳ್ಳೂರ,ರೇಣುಕ.ವೈ,ಶಿವರಾಜ ಗುರುಶಾಂತಪ್ಪ ಪಾಟೀಲ ತಲಾ ಮೂರು ಮತಗಳನ್ನು ಗಳಿಸಿದರೆ,ಪಟೇಲ ಪಾಂಡು(೧)ಮತಗಳನ್ನು ಪಡೆದಿದ್ದಾರೆ.ಶಿವಪ್ಪ ಮಲ್ಲಪ್ಪ ಹಾಗೂ ಸಂಜೀವ ಕುಮಾರ್ ಯಾವುದೇ ಮತಗಳನ್ನು ಗಳಿಸಲು ವಿಫಲರಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ