ಚಿಕ್ಕನಾಯಕನಹಳ್ಳಿಯ ಸಂಯುಕ್ತ ಕರ್ನಾಟಕ ವರದಿಗಾರ ಚಿದಾನಂದ್ ಮಗಳು ಗೌಡನಹಳ್ಳಿ ಗ್ರಾಮದ ಬಾಲಪ್ರತಿಭೆ ಟೇಕ್ಷ್ಣವಿ ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮಲೇಶಿಯಾ ರಾಷ್ಟ್ರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಪಟ್ಟಣದ ರೋಟರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಟೇಕ್ಷ್ಣವಿ ಜನವರಿ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಟೇಕ್ಷ್ಣವಿ ಪೋಷಕರು ಸಿ.ಹೆಚ್.ಚಿದಾನಂದ, ತಾಯಿ ರಾಧಾಮಣಿ. ಈಕೆ ತಿಪಟೂರಿನ ಖುಷಿ ಐಡಿಯಲ್ ಪ್ಲೇ ಅಬಕಾಸ್ ನಲ್ಲಿ ತರಬೇತಿ ಪಡೆದಿದ್ದು ಹಾಸನದಲ್ಲಿ ಕಳೆದ ನವಂಬರ್ ನಲ್ಲಿ ನಡೆದ ರಾಜ್ಯಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು.
ಜೈಪುರದಲ್ಲಿ ಪ್ರಥಮ ಸ್ಥಾನ ಪಡೆದ ಇವರಿಗೆ ರಾಜಾಸ್ಥಾನ ಮಹಿಳಾ ಆಯೋಗದ ಅಧ್ಯಕ್ಷೆ ಸುಮಾನ್ ಶರ್ಮ, ರಾಜಾಸ್ಥಾನ ಪೊಲೀಸ್ ಎ.ಡಿ.ಜಿ.ಪಿ. ಸುನಿಲ್ ಮೆಹರೋತ್ರ, ರಾಜಾಸ್ಥಾನ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕುನ್ಜಿಲಾಲ್ ಮೀನಾ, ಟೇಕ್ಷ್ಣವಿಯನ್ನು ಸನ್ಮಾನಿಸಿದ್ದಾರೆ.
ಮುಂದಿನ ಜುಲೈ ತಿಂಗಳಿನಲ್ಲಿ ನಡೆಯುವ ಮಲೇಷಿಯಾ ರಾಷ್ಟ್ರದಲ್ಲಿ ನಡೆಯುವ ಅಂತರ್ ರಾಷ್ಟ್ರೀಯ ಅಬಕಾಸ್ ಸ್ಫರ್ಧೆಗೆ ಆಯ್ಕೆಯಾಗಿದ್ದಾಳೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ