ಶಾಸಕರ ಮೇಲೆ ಕಿಡಿಕಾರಿದ ನೂತನ ಜಿಪಂ ಸದಸ್ಯ
------------------------------------
ನನ್ನ ಹಿಂದೆ ಹಲವಾರು ಕಾರ್ಯಕರ್ತರು ಹಗಲಿರುಳೆನ್ನದೆ ದುಡಿದ ಪರಿಣಾಮವಾಗಿ ಹುಳಿಯಾರು ಜಿಲ್ಲಾಪಂಚಾಯ್ತಿ ಸ್ಥಾನಕ್ಕೆ ನಾನು ಆಯ್ಕೆಯಾಗಲು ಕಾರಣವಾಗಿದ್ದು ನನ್ನ ಗೆಲುವಿನ ಸಂಪೂರ್ಣ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕಿದೆ ಎಂದು ಹುಳಿಯಾರು ಜಿಪಂ ವಿಜೇತ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ನುಡಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟಿರುವುದು ಹುಳಿಯಾರು ಕ್ಷೇತ್ರವಾಗಿದ್ದು ಈ ಗೆಲುವಿಗೆ ಕಾರಣರಾದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಕೃತಜ್ಞ ಎಂದ ಅವರು ಜನರಿಟ್ಟ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದು ಅವರ ಹಿತಕಾಯಲು ನಾನು ಬದ್ದ ಎಂದರು.
ಹುಳಿಯಾರು ಜಿಪಂ ಸ್ಥಾನಕ್ಕೆ ಆಯ್ಕೆಯಾದ ಕಾಂಗ್ರೆಸ್ಸಿನ ವೈ.ಸಿ.ಸಿದ್ರಾಮಯ್ಯ ಮಾಧ್ಯಮದೊಂದಿಗೆ ಮಾತನಾಡಿದರು.ಗ್ರಾಪಂ ಸದಸ್ಯ ದಯಾನಂದ್,ಧನುಷ್ ರಂಗನಾಥ್,ಮಲ್ಲೀಕಣ್ಣ,ರಮೇಶ್ ಬಾಬು,ಹೊಸಳ್ಳಿ ಅಶೋಕ್ ಇದ್ದಾರೆ. |
ಈ ಹಿಂದೆ ಎಪಿಎಂಸಿ ಚುನಾವಣೆಯಲ್ಲೂ ಸಹ ಜನರ ಆಶೀರ್ವಾದ ನನ್ನ ಮೇಲಿದ್ದ ಕಾರಣ ಅಲ್ಲೂ ಕೂಡ ಇದೇರೀತಿ ಫಲಿತಾಂಶದಿಂದಾಗಿ ಗೆಲುವು ಸಾಧಿಸಿದ್ದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದು ಜನತೆ ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟ ಕಾರಣ ಈ ಗೆಲುವು ಸಾಧ್ಯಾವಾಯಿತು ಎಂದು ವಿಶ್ಲೇಷಿಸಿದರು.
ಶಾಸಕರ ಮೇಲೆ ಟೀಕಾಪ್ರಹಾರ : ಕ್ಷೇತ್ರದಲ್ಲಿ ಶಾಸಕರ ಸಾಧನೆ ಶೂನ್ಯವಾಗಿದ್ದು ಅವರ ಅಭ್ಯರ್ಥಿ ಸೋಲಿಗೆ ಕಾರಣವಾಯಿತು. ಜನರು ಬಯಸುವುದು ಜನಸಾಮಾನ್ಯರಿಗೆ ಸ್ಪಂದಿಸುವಂತಹ ವ್ಯಕ್ತಿಯನ್ನು ಹೊರತು ಗೆದ್ದಾಗ ಬೆಂಗಳೂರು ಸೇರಿಕೊಂಡು ನಾಮಕರಣ,ಆರಾಧನೆ ಮುಂತಾದ ಸಮಾರಂಭಗಳೆಗೆ ದುಡ್ಡುಹಂಚುವ ವ್ಯಕ್ತಿಯನ್ನಲ್ಲ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಗಳು ಚುನಾವಣ ಪ್ರಚಾರಕ್ಕೆ ಹುಳಿಯಾರಿಗೆ ಬಂದಿದ್ದಂತಹ ಸಂದರ್ಭದಲ್ಲಿ ನುಡಿದಂತೆ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಎರಡುಕೋಟಿ ರೂಪಾಯಿ ಅನುದಾನ ಬಿಡುಗಡೆಮಾಡಿದ್ದು ಇದನ್ನು ಶಾಸಕರು ಹಳ್ಳಿಜನಕ್ಕೆ ಮಬ್ಬು ಮಾಡುತ್ತಾ ನಿಮ್ಮಹಳ್ಳಿಗೆ ನಾನು ೨೦ ಲಕ್ಷ ಹಾಕಿದ್ದಿನಿ ಅಂತ ಸುಳ್ಳು ಭರವಸೆ ಕೊಡುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದ ಹಣವನ್ನು ನನ್ನ ಅನುದಾನವೆಂದು ತಪ್ಪು ಸಂದೇಶ ಕೊಡುವುದನ್ನು ಈ ಕೂಡಲೇ ನಿಲ್ಲಿಸಿ ಎಂದರು.ನನ್ನ ಸೋಲಿಗೆ ಹಗಲು ರಾತ್ರಿಯೆನ್ನದೆ ಹುಳಿಯಾರಿಗೆ ಬಂದ ಮಲಗಿದ್ದ ಶಾಸಕರನ್ನು ಮನೆ ಸೇರಿಸುವವರೆಗೂ ನಾವು ಸಹ ವಿರಮಿಸುವುದಿಲ್ಲ ಎಂದು ಕಿಡಿಕಾರಿದರು.
ನನಗಾಗಿ ಹಲವಾರು ಕಾರ್ಯಕರ್ತರು ಶ್ರಮಿಸಿದ್ದು ಅವರ ಹಿತ ಕಾಪಾಡಲು ನಾನು ಬದ್ದ.ಈ ಗೆಲುವು ನನ್ನದಲ್ಲ ಕಾರ್ಯಕರ್ತರ ಗೆಲುವು. ನಾನ್ಯಾವಾಗಲೂ ಹಳ್ಳಿಯಲ್ಲಿದ್ದು ಹಳ್ಳಿಯ ಜನರಿಗೆ ಸ್ಪಂದಿಸುವೆ.ಕುಡಿಯುವ ನೀರು,ರಸ್ತೆ,ಆರೋಗ್ಯ ಮುಂತಾದ ಸಮಸ್ಯೆಗಳಿಗೆ ಒತ್ತುಕೊಟ್ಟು ಜನರ ಹಿತಕಾಪಾಡುವೆ.ಜನರ ವಿಶ್ವಾಸಕ್ಕೆ ತಲೆಬಾಗಿ ಜನಗಳ ಜೊತೆಯಲ್ಲೇಯಿರುವೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ದಯಾನಂದ್,ಧನುಷ್ ರಂಗನಾಥ್,ಮಾಜಿ ತಾಪಂ ಸದಸ್ಯ ಮಲ್ಲೀಕಣ್ಣ.ವಕೀಲ ರಮೇಶ್ ಬಾಬು,ಹೊಸಳ್ಳಿ ಅಶೋಕ್ ,ಕಿರಣ್ ಕುಮಾರ್,ವೆಂಕಟೇಶ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ