ಜೆಡಿಎಸ್ ನಿಂದ ರೋಡ್ ಶೋ
--------------------------------------------------
ಪಂಚಾಯ್ತಿ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಗುರುವಾರ ಕಡೆಯ ದಿನವಾಗಿದ್ದು ಹುಳಿಯಾರು ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಜಿಪಂ ಅಭ್ಯರ್ಥಿ ಸೈಯದ್ ಏಜಾಸ್ ಹಾಗೂ ತಾಪಂ ಅಭ್ಯರ್ಥಿ ಹೆಚ್.ಎನ್.ಕುಮಾರ್ ಪರ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡರು.
ನಂತರ ಮತನಾಡಿದ ಅವರು ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಹುಳಿಯಾರು ಪ್ರತಿಷ್ಠೆಯ ಕಣವಾಗಿದ್ದು, ಮತದಾರರ ಒಲವು ಜೆಡಿಎಸ್ ಪಕ್ಷಕ್ಕಿದ್ದು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.
ಇತರೆ ಪಕ್ಷಗಳ ಅಪಪ್ರಚಾರದ ನಡುವೆಯೂ ಜೆಡಿಎಸ್ ಪಕ್ಷಕ್ಕೆ ಇತ್ತೀಚೆಗಷ್ಟೆ ನಡೆದ ಎಂ.ಎಲ್.ಸಿ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದ್ದು ಈ ಚುನಾವಣೆಯಲ್ಲೂ ಸಹ ಇದು ಮರುಕಳಿಸಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.
ಶಾಸಕ ಸಿ.ಬಿ.ಸುರೇಶ್ ಬಾಬು ಹುಳಿಯಾರು ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳ ಪರ ಗುರುವಾರದಂದು ಪ್ರಚಾರ ಕೈಗೊಂಡರು.ಅಭ್ಯರ್ಥಿಗಳಾದ ಸೈಯದ್ ಏಜಾಸ್ ಹಾಗೂ ಹೆಚ್.ಎನ್.ಕುಮಾರ್,ಗೌಡಿ,ಜಹೀರ್ ಸಾಬ್ ಇದ್ದಾರೆ. |
ಜೆಡಿಎಸ್ ಪಕ್ಷವೂ ಈ ಚುನಾವಣೆಯಲ್ಲಿ ಎಲ್ಲಾ ವರ್ಗದವರಿಗೂ ಅದ್ಯತೆ ನೀಡಿ ಸಮರ್ಥರಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಎಲ್ಲೂ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲು ಸಾಧ್ಯವಾಗಿಲ್ಲ.ಆದರೆ ಜೆಡಿಎಸ್ ಪಕ್ಷ ಹುಳಿಯಾರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೂ ಅವಕಾಶ ನೀಡಿದ್ದು ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು.
ಅಲ್ಲದೆ ತಾ.ಪಂ. ಅಭ್ಯರ್ಥಿ ಸ್ಥಾನಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಾದ ಹೆಚ್.ಎನ್.ಕುಮಾರ್ ಅವರಿಗೆ ಅವಕಾಶ ಕಲ್ಪಿಸಿದ್ದು ಇವರಿಬ್ಬರೂ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳಾದ ಸೈಯದ್ ಏಜಾಸ್ ಹಾಗೂ ಹೆಚ್.ಎನ್.ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಗೀತಾ, ಯುವ ಜೆ.ಡಿ.ಎಸ್ ತಾಲ್ಲೂಕ್ ಅಧ್ಯಕ್ಷ ಗೌಡಿ, ಗ್ರಾ.ಪಂ.ಸದಸ್ಯ ಶಂಕರ್, ಜಹೀರ್ ಸಾಬ್,ಇಮ್ರಾಜ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ