ಹುಳಿಯಾರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆಯಲ್ಲಿ ಶೇ ೬೬ ಮತದಾನ ನಡೆದಿದ್ದು ಶಾಂತಿಯುತವಾಗಿತ್ತು.
ಹುಳಿಯಾರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ನಡೆದ ಜಿಲ್ಲಾ ಹಾಗೂ ತಾಲ್ಲೂಕ್ ಪಂಚಾಯ್ತಿ ಚುನಾವಣೆಯಲ್ಲಿ ಎಂಪಿಎಸ್ ಶಾಲೆಯ ಬೂತ್ ಮುಂದೆ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ಮತದಾರರು |
ಬೆಳಗ್ಗೆ ೭ ರಿಂದ ಪ್ರಾರಂಭವಾದ ಮತದಾನ ಸಂಜೆ ೫ ರವರೆಗೂ ನಡೆಯಿತು. ಯಾವುದೇ ಅಹಿತಕರಘಟನೆ ನಡೆಯದಂತೆ ಪ್ರತಿ ಬೂತ್ ಹಾಗೂ ಮತಕೇಂದ್ರದ ಸುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಮುಂಜಾನೆ ೭ ಗಂಟೆಗೆ ಪ್ರಾರಂಭವಾಗಿದ್ದ ಮತದಾನ ೧೦ ಗಂಟೆಯವರೆಗೂ ಮಂದಗತಿಯಲ್ಲಿ ಸಾಗಿ 1 ಗಂಟೆಯ ನಂತರ ಚುರುಕಾಗಿತ್ತು.ಒಟ್ಟು ೧೨೧೧೮ ಮತದಾರರಿದ್ದು ೧೩ ವಾರ್ಡುಗಳ ೧೪ ಬೂತಿನಿಂದ ೮೦೧೧ ಮತಚಲಾವಣೆಯಾಗಿದೆ. ಪಟ್ಟಣದ ಎಂಪಿಎಸ್ ಶಾಲೆ,ಸರ್ಕಾರಿ ಬಾಲಕಿಯರ ಶಾಲೆ,ಉರ್ದು ಶಾಲೆ,ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸೋಮಜ್ಜನಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಕೇಂದ್ರದ ಹೊರಭಾಗದಲ್ಲಿ ಅಭ್ಯಥಿ೯ಗಳ ಪರ ಅವರ ಪಕ್ಷದ ಮುಖಂಡರುಗಳು ,ಕಾರ್ಯಕರ್ತರುಗಳು ,ಬೆಂಬಲಿಗರು,ಕುಟುಂಬ ವರ್ಗದವರು ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮದ್ಯಾಹ್ನನದ ನಂತರ ಮತದಾನ ಮಾಡದೆ ಮನೆಯಲಿಳುದಿದ್ದ ಮತದಾರರನ್ನು ಓಲೈಸಿ ವಾಹನಗಳಲ್ಲಿ ಮತಘಟ್ಟೆಗೆ ಕರೆತಂದು ಮತಹಾಕಿಸುವ ಪ್ರಯತ್ನ ನಡೆಸುತ್ತಿದ್ದರು.ನಾಲ್ಕು ಗಂಟೆಯ ನಂತರ ಮತದಾನ ಬಿರುಸಿನಿಂದ ಕೂಡಿದ್ದು ಸಮಯ ಮುಗಿಯುವ ಆತಂಕದಲ್ಲಿ ಮತದಾರರನ್ನು ತರಾತುರಿಯಲ್ಲಿ ಕರೆದುಕೊಂಡೂ ಹೋಗಿ ಮತಹಾಕಿಸಿದರು.
ಕೆಲವೊಂದು ಬ್ಲಾಕಿನಲ್ಲಿ ಮತದಾರರ ಪಟ್ಟಿಯಲ್ಲಿನ ಮತದಾರರ ಹೆಸರುಗಳ ಕಾಣೆಯಾಗಿದ್ದು ಪಟ್ಟಿಯಲ್ಲಿ ಹೆಸರಿಲ್ಲದಕ್ಕೆ ಮಾತಿನ ಸಂಘರ್ಷಕ್ಕೆ ಕಾರಣವಾಯಿತು.ಇತ್ತೀಚೆಗಷ್ಟೆ ನಡೆದಿದ್ದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಹೆಸರಿದ್ದು ಇದೀಗ ಜಿಲ್ಲಾಪಂಚಾಯ್ತಿ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕಾಣದಿದ್ದು ಗೊಂದಲಕ್ಕೆ ಕಾರಣವಾಯಿತು.ಬೇರೆ ಪಟ್ಟಿಯಲ್ಲಾದರೂ ಕಾಣಬಹುದೆಂದು ಸಾಕಷ್ಟು ಹುಡುಕಾಡಿ ಪ್ರಯೋಜನವಾಗದೆ ಕೆಲವರು ಚುನಾವಣಾ ಅಧಿಕಾರಿಗಳನ್ನು ಬೈಯುತ್ತಾ ವಾಪಸ್ಸು ಹೋದ ಪ್ರಕರಣ ಕೂಡ ನಡೆಯಿತು.
ಮತಚಲಾಯಿಸಿದವರಲ್ಲಿ ಈ ಬಾರಿ ಯುವಕರ ಸಂಖ್ಯೆ ಹೆಚ್ಚಾಗಿದ್ದು ಉತ್ಸಾಹದಿಂದ ಮತಚಲಾಯಿಸಿದ್ದು ಕಂಡುಬಂತು.ಎಲ್ಲಡೆ ಬಿಗಿ ಪೋಲಿಸ್ ಬಂದೋಬಸ್ತ್ ನಿಂದಾಗಿ ಶಾಂತಿಯುತ ಮತದಾನ ಸಾಗಿತ್ತು.ಪಿಎಸೈ ಬಿ.ಪ್ರವೀಣ್ ಕುಮಾರ್ ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಯಲ್ಲಿನ ಮತಕೇಂದ್ರಗಳಲ್ಲಿಗೆ ಗಸ್ತು ತಿರುಗುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದರು.
ಒಟ್ಟಾರೆ ಇಂದು ನಡೆದ ಚುನಾವಣೆಯಲ್ಲಿ ಹುಳಿಯಾರು ಕ್ಷೇತ್ರದ ಜಿಲ್ಲಾಪಂಚಾಯ್ತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ೬ ಅಭ್ಯರ್ಥಿಗಳ ಹಾಗೂ ತಾಲ್ಲೂಕ್ ಪಂಚಾಯ್ತಿಗೆ ಸ್ಪರ್ಧಿಸಿದ ೩ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದು ಯಾರು ಆಯ್ಕೆಯಾಗುತ್ತಾರೋ ಎಂದು ತಿಳಿಯಲು ಇದೇ ತಿಂಗಳ ೨೩ ನೇ ತಾರೀಖಿನವರೆಗೆ ಕಾದುನೋಡಬೇಕಿದೆ.
-------------------------
ಹುಳಿಯಾರಿನ ೧೦ ನೇ ಮತಗಟ್ಟೆಯಲ್ಲಿ ಮುಂಜಾನೆ ಎಂಟು ಗಂಟೆಯವರೆಗೂ ಮತದಾರರು ಮತಚಲಾಯಿಸುವ ವೇಳೆ ಬಲಗೈ ಹೆಬ್ಬೆಟ್ಟಿಗೆ ಶಾಹಿ ಹಾಕುವ ಬದಲು ಎಡಗೈ ತೋರುಬೆರಳಿಗೆ ಶಾಹಿ ಗುರುತು ಹಾಕಿದ್ದಾರೆ.ಹೆಬ್ಬೆಟ್ಟು ಕೊಟ್ಟರು ಸಹ ಈ ಬೆರಳಲ್ಲವೆಂದು ಹೇಳಿ ಎಡಗೈ ತೋರುಬೆರಳಿಗೆ ಹಾಕಬೇಕೆಂದು ಹೇಳಿದ್ದು ವಿಪರ್ಯಾಸಕ್ಕೆ ಕಾರಣವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ