ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು:ಪ್ರಥಮ ದಿನದಂದು ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಹುಳಿಯಾರು: ಪಟ್ಟಣದ ಟಿ.ಆರ್.ಎಸ್.ಆರ್ ಪ್ರೌಢಶಾಲೆ , ಕನಕದಾಸ ಪ್ರೌಢಶಾಲೆ ಹಾಗೂ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸೇರಿದಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಆರಂಭವಾದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು ೬೨೮ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.ಪ್ರಾರಂಭಿಕ ಹಂತದ ಕೆಲವೊಂದು ಗೊಂದಲಗಳನ್ನು ಬಿಟ್ಟರೆ ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದಂತೆ ಸುಗಮವಾಗಿ ನಡೆಯಿತು. ಹುಳಿಯಾರಿನ ಟಿ.ಆರ್.ಎಸ್.ಆರ್ ಪ್ರೌಢಶಾಲೆಗೆ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು.           ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಪೋಷಕರುಗಳೊಂದಿಗೆ ಮುಂಚಿತವಾಗಿಯೇ ಆಗಮಿಸಿ ತಮ್ಮ ಕೊಠಡಿ ಸಂಖ್ಯೆಯನ್ನು ಗಮನ ಮಾಡುತ್ತಿದ್ದ ದೃಶ್ಯ ಎಲ್ಲಾ ಕೇಂದ್ರಗಳಲ್ಲೂ ಕಂಡುಬಂತು.           ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಬೆ.9.೦೦ರಿಂದ 9.30 ಸಮಯದೊಳಗೆ ಕೊಠಡಿಗೆ ಹಾಜರಾಗಬೇಕಾಗಿತ್ತು.ಆದರೆ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇದರ ಅರಿವಿಲ್ಲದೆ ಎಂಟುಗಂಟೆಯಿಂದಲೇ ವಿದ್ಯಾರ್ಥಿಗಳಿಗೆ ಕೊಠಡಿಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತು.ಈ ಬಗ್ಗೆ ಬಿಇಓ ಗಮನಕ್ಕೆ ತರುತ್ತಿದ್ದಂತೆ ಕೊಠಡಿಯನ್ನು ಬ

ಹುಳಿಯಾರು: ಯುಗಾದಿಗೆ ಸಿದ್ಧತೆ ಬಲು ಜೋರು

ಹುಳಿಯಾರು: ಬೆಲೆ ಏರಿಕೆ ನಡುವೆಯೂ ಪಟ್ಟಣದಲ್ಲಿ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆದಿದ್ದು ಹಬ್ಬದ ಗೌಜು, ಗದ್ದಲದ ಮಧ್ಯೆ ಮಂಗಳವಾರ ನಡೆದ ಹಬ್ಬದ ಸಂತೆಯಲ್ಲಿ ಅಗತ್ಯ ವಸ್ತುಗಳಖರೀದಿ ಭರಾಟೆ ಜೋರಾಗಿ ಸಾಗಿತ್ತು. ಹುಳಿಯಾರಿನಲ್ಲಿ ನಡೆದ ಹಬ್ಬದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಬೇಕಾದ ದಿನಸಿ ಕೊಳ್ಳಲು ಮುಗಿಬಿದ್ದ ಜನತೆ          ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಹಬ್ಬಕ್ಕೆ ಬೇಕಾದ ದಿನಸಿ,ತರಕಾರಿ,ಹೂವು,ಹಣ್ಣು ಮೊದಲಾದವುಗಳನ್ನು ಕೊಳ್ಳಲು ಸಾಕಷ್ಟು ಜನ ಜಮಾಯಿಸಿದ್ದು ಸಂತೆ ಜನರಿಂದ ಗಿಜಗುಡುತಿತ್ತು.         ಪಟ್ಟಣದ ಗಾಂಧಿಪೇಟೆ,  ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು. ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿದ್ದು ಕಡೇಪಕ್ಷ ಹಬ್ಬದ ದಿನ ಉಡುದಾರವನ್ನಾದರೂ ತೊಡಬೇಕೆನ್ನುವ ಆಚರಣಿಯಿಂದಾಗಿ ಉಡುದಾರ ಮಾರುವವರಿಗೂ ಬೇಡಿಕೆ ಹೆಚ್ಚಾಗಿತ್ತು. ಯುಗಾದಿ ಉಡುದಾರ : ಹಬ್ಬದ ಅಂಗವಾಗಿ ಉಡುದಾರದ ವ್ಯಾಪಾರ ತಕ್ಕಮಟ್ಟಿಗಿದ್ದು, ಕೆಂಪು ಹಾಗೂ ಕಪ್ಪು ಬಣ್ಣದ ಉಡುದಾರ ಮಾರಿಗೆ ೫ ರೂ ನಂತೆ ಮಾರ

ಹುಳಿಯಾರು:ಯುಗಾದಿ ಹಬ್ಬಕ್ಕೆ ಜೂಜಾಟ ನಿಷೇಧ

ಹುಳಿಯಾರು : ಯುಗಾದಿ ಹಬ್ಬದಂದು ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಅಕ್ರಮವಾಗಿ ಜೂಜಾಡುವವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದೆಂದು ಹುಳಿಯಾರು ಪಿಎಸ್‌ಐ ಪ್ರವೀಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      ಹುಳಿಯಾರು ಸೇರಿದಂತೆ ಹೊಯ್ಸಳಕಟ್ಟೆ,ದಸೂಡಿ,ಕೆಂಕೆರೆ,ಹೊಸಳ್ಳಿ,ನಂದಿಹಳ್ಳಿ, ಸೂರಗೊಂಡನಹಳ್ಳಿ. ದೊಡ್ಡಬಿದರೆ,ತಿಮ್ಲಾಪುರ ಸೇರಿದಂತೆ ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದಲ್ಲಿ ಜೂಜಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.         ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇಧಿಸಿದ್ದು ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು/ ಮಧ್ಯವರ್ತಿಗಳ ಮೇಲು ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಅಲ್ಲದೆ ಇದಕ್ಕೆ ಸಂಬಂಧಿಸಿದ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.         ಈಗಾಗಲೇ ಮುಂಜಾಗ್ರತೆ ಕ್ರಮವಾಗಿ ಠಾಣಾ ವ್ಯಾಪ್ತಿಯ ೧೨ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋ

ಕುರಿ, ಮೇಕೆಗೂ ಗೋಶಾಲೆಯಲ್ಲಿ ಮೇವು ಒದಗಿಸಲು ಮುಂದಾಗಿ:ಸಾಸಲು ಸತೀಶ್

ಹುಳಿಯಾರು: ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು ೩೦ ಜಿಲ್ಲೆಗಳ ೧೬೦ ತಾಲ್ಲೂಕುಗಳು ಬರಪೀಡೀತ ಪ್ರದೇಶವೆಂದು ಘೋಷಣೆಯಾಗಿದ್ದು ಈ ಹಿನ್ನಲೆಯಲ್ಲಿ ರಾಸುಗಳಿಗೆ ಕೊಟ್ಟಂತೆಯೇ ಕುರಿಮೇಕೆಗಳಿಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ನೀರು ಒದಗಿಸಲು ಅವಕಾಶವಿರುವುದರಿಂದ ಇದರ ಅನುಕೂಲವನ್ನು ಕುರಿಗಾಹಿಗಳಿಗೆ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಒತ್ತಾಯಿಸಿದ್ದಾರೆ.            ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಬಿಸಿಲ ತಾಪದಿಂದ ಜನ ತತ್ತರಿಸುತ್ತಿದ್ದು ತೀವ್ರ ಮಳೆ ಕೊರತೆ ಹಿನ್ನಲೆಯಲ್ಲಿ ದನಕರುಗಳು,ಕುರಿಮೇಕೆಗಳಿಗೆ ಮೇವಿಲ್ಲದಂತಾಗಿದೆ.ಜಿಲ್ಲಾಡಳಿತದವತಿಯಿಂದ ದನಗಳಿಗೆ ಈಗಾಗಲೇ ತಿಂಗಳ ಹಿಂದೆಯೇ ಗೋಶಾಲೆ ತೆರೆದು ಮೇವು ನೀರನ್ನು ಒದಗಿಸುತ್ತಿದೆ.ಅದೇ ಗೋಶಾಲೆಗಳಲ್ಲಿ ಇದೀಗ ಕುರಿ ಮೇಕೆಗಳಿಗೂ ಮೇವು ನೀಡುವ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.           ತಾಲ್ಲೂಕಿನಾದ್ಯಂತ ಮೇವು ಮತ್ತು ನೀರಿನ ಕೊರತೆಯಿಂದ ಕುರಿ ಮೇಕೆಗಳು ಸಾವನ್ನಪ್ಪಿರುವ ನಿದರ್ಶನಗಳಿವೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಮೇವು ,ನೀರು ಮತ್ತು ಪೌಷ್ಟಿಕ ಆಹಾರವಾದ ಹುರುಳಿ,ಹಿಂಡಿ ಇತ್ಯಾದಿಗಳನ್ನು ಪೂರೈಸಲು ದಿನವೊಂದಕ್ಕೆ ಪ್ರತಿ ಕುರಿಮೇಕೆಗೆ ೩೫ ರೂ ವೆಚ್ಚ ಭರಿಸಲು ಅವಕಾಶವಿದ್ದು ಈ ಬಗ್ಗೆ ಸರ್ಕಾರ ಜಿಲ್ಲಾಡಳಿತಕ

ಮಹಿಳೆಯರ ಆರ್ಥಿಕ ಸಬಲತೆಗೆ ಉದ್ಯೋಗ ಅನಿವಾರ್ಯ : ಮಂಜುನಾಥ ಗುಪ್ತಾ

(ಸುದ್ದಿ ಮಾಹಿತಿ:ಹೆಚ್.ಬಿ.ಕಿರಣ್ ಕುಮಾರ್,ಹುಳಿಯಾರು) ಹುಳಿಯಾರು : ಇಂದು ಗ್ರಾಮೀಣ ಜನರ ಅದರಲ್ಲೂ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಸ್ವಉದ್ಯೋಗ ಯೋಜನೆಗಳನ್ನು ರೂಪಿಸಲಾಗಿದ್ದು ಅವುಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ ಗುಪ್ತಾ ತಿಳಿಸಿದರು.          ಹುಳಿಯಾರು ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆ, ಸ್ಪೂರ್ತಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ದಿಶಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಸ್ವಉದ್ಯೋಗ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.        ದಿನಬಳಕೆ ವಸ್ತುಗಳು ಗಗನಕ್ಕೇರಿರುವ ಈ ದಿನಗಳಲ್ಲಿ ಮಳೆ, ಬೆಳೆಯೂ ಸಹ ಇಲ್ಲದಾಗಿ ಸಂಸಾರ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಸಂಕಷ್ಟದ ದಿನಗಳಲ್ಲಿ ಗಂಡಸರೊಬ್ಬರೇ ದುಡಿದರೆ ಸಂಸಾರ ನಿರ್ವಹಣೆ ಮಾಡಲಾಗುವುದಿಲ್ಲ. ಹಾಗಾಗಿ ಮಹಿಳೆಯರೂ ಸ್ವಉದ್ಯೋಗ ಮಾಡುವ ಮೂಲಕ ಸಂಸಾರ ಬಂಡಿ ಸಾಗಿಸಲು ನೆರವಾಗಬೇಕು ಎಂದರು.          ಸ್ವಉದ್ಯೋಗ ಎಂದರೆ ಬೀಡಿ ಕಟ್ಟುವುದು, ಊದುಬತ್ತಿ ಹೊಸೆಯುವುದು, ಬಟ್ಟೆ ಹೊಲೆಯುವುದು, ಹಸು ಸಾಕುವುದಷ್ಟೆ ಎನ್ನುವಂತಾಗಿದೆ. ಇವುಗಳನ್ನು ಬಿಟ್ಟು ಅನೇಕ ಸ್ವಉದ್ಯೋಗವಕಾಶಗಳಿದ್ದು ಇವುಗಳಿಂದಲೂ ಆರ್ಥಿಕ ಸಬಲತೆ ಸಾಧಿಸಬಹುದೆಂಬುದನ್ನು ತೋರಿಸಿಕೊಡಬೇಕಿದೆ. ಹಾಗಾಗಿ ಮೊಬೈಲ್ ರಿಪೇರಿ,

ಜೆಡಿಎಸ್ ಸಮಾವೇಶಕ್ಕೆ ತಾಲ್ಲೂಕಿನಿಂದ ೨ಸಾವಿರಮಂದಿ ಕಾರ್ಯಕರ್ತರು

ಹುಳಿಯಾರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.23ರಂದು ನಡೆಯಲಿರುವ ಜೆಡಿಎಸ್ ಪಕ್ಷದ ಸ್ವಾಭಿಮಾನಿ, ಸಮಾನತೆ ಸಮಾವೇಶಕ್ಕೆ ತಾಲ್ಲೂಕಿನಿಂದ ೨ ಸಾವಿರಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹುಳಿಯಾರು ಜೆಡಿಎಸ್‌ ಮುಖಂಡ ಹಾಗೂ ತಾಲ್ಲೂಕ್ ಪಂಚಾಯ್ತಿ ಸದಸ್ಯ ಹೆಚ್.ಎನ್.ಕುಮಾರ್ ತಿಳಿಸಿದರು.         ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಾದ ಜಯಪ್ರಕಾಶ ನಾರಾಯಣ ಭವನದ ಉದ್ಘಾಟನೆ ಹಾಗೂ ತದನಂತರ ಅರಮನೆ ಮೈದಾನದಲ್ಲಿ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಸಾರಥ್ಯದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಈ ಸಮಾವೇಶದಲ್ಲಿ ಪಕ್ಷದ ಸಂಘಟನೆಯ ಜೊತೆಗೆ, ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದಿದ್ದು ಇದಕ್ಕೆ ಕಾರ್ಯಕರ್ತರು ,ಶಾಸಕ ಸುರೇಶ್ ಬಾಬು ಅಭಿಮಾನಿಗಳು,ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.         ಈ ಸಂದರ್ಭದಲ್ಲಿ ಜೆ.ಡಿ.ಎಸ್ ನ ತಾಲ್ಲೂಕ್ ಯುವ ಅಧ್ಯಕ್ಷ ಹೆಚ್ ಎನ್ ಗವಿರಂಗನಾಥ್ (ಗೌಡಿ) ಇದ್ದರು.

ಹುಳಿಯಾರು: ಸಂತೆ,ಬಸ್ಸ್ ನಿಲ್ದಾಣ,ಪುಟ್ ಪಾತ್ ಅಂಗಡಿಗಳ ಸುಂಕದ ವಸೂಲಿ ೮.೨೪ ಲಕ್ಷ ರೂಗೆ ಹರಾಜು

ಹುಳಿಯಾರು: ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುವ ಸಂತೆ,ಬಸ್ಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳ ಸುಂಕ ಹಾಗೂ ಪುಟ್ ಪಾತ್ ನಲ್ಲಿರುವ ಅಂಗಡಿಗಳಿಂದ ೨೦೧೭-೧೮ನೇ ಸಾಲಿನ ಸುಂಕ ವಸೂಲಾತಿಗಾಗಿ ಪಂಚಾಯ್ತಿ ಆವರಣದಲ್ಲಿ ಬಹಿರಂಗ ಹರಾಜು ಗ್ರಾ.ಪಂ.ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.           ಹರಾಜಿನಲ್ಲಿ ಒಟ್ಟು ೧೭ ಜನ ಭಾಗವಹಿಸಿದ್ದು ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ಹಾಕುವ ಅಂಗಡಿಗಳಿಂದ ಸುಂಕ ವಸೂಲಾತಿ ಮಾಡಲು ಕುಮಾರ್ ನಾಯ್ಕ ಎಂಬುವವರಿಗೆ ೨,೯೪,೦೦೦ರೂಗೆ ಹರಾಜು ನಿಂತರೆ, ಹುಳಿಯಾರಿನ ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳಿಂದ ನಿತ್ಯ ಸುಂಕ ವಸೂಲಿ ಮಾಡಲು ೧,೬೮,೦೦೦ ರೂ. ಗೆ ಸೈಯದ್ ಮುನಾವರ್ ಹರಾಜು ಕೂಗಿದರು.ಪಂಚಾಯ್ತಿ ಜಾಗದಲ್ಲಿ, ಪುಟ್ ಪಾತ್ ನಲ್ಲಿ ಹಾಕಿಕೊಂಡಿರುವ ಅಂಗಡಿಗಳಿಂದ ನಿತ್ಯ ಸುಂಕ ವಸೂಲಾತಿ ಮಾಡಲು ನಡೆದ ಹರಾಜು ತೀವ್ರಏರಿಕೆ ಕಂಡು ಚನ್ನಕೇಶವ ಎಂಬಾತ ೩,೫೨,೦೦೦ ರೂಗೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು.          ಈ ಸುಂಕ ವಸೂಲಾತಿ ಒಂದು ವರ್ಷ ಅವಧಿಯದ್ದಾಗಿದ್ದು ಮಾರ್ಚ್ ೨೦೧೮ರ ವರೆಗೆ ಜಾರಿಯಲ್ಲಿರುತ್ತದೆ.          ಅಲ್ಲದೆ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿರುವ ಶಿಥಿಲಗೊಂಡಿರುವ ನೀರು ಸರಬರಾಜಿನ ನೀರಿನ ಟ್ಯಾಂಕನ್ನು ಡೆಮಾಲಿಶ್ ಮಾಡಲು ಗುಜರಿ ನಾಗಣ್ಣ ೧೦ಸಾವಿರಕ್ಕೆ ಹರಾಜು ಕೂಗಿದ್ದು ಒಟ್ಟಾರೆ ಹರಾಜು ಪ್ರಕ್ರಿಯೆಯಿಂದ ೮,೨೪,೦೦೦ ರೂ ಹಣ ಜಮಾವಣೆಗೊಂಡಿದೆ

ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನೌಕರರಿಗೆ ಪಗಾರವಿಲ್ಲದೆ ಕಂಗಾಲು

       ಜಿಲ್ಲೆಯಲ್ಲಿಯೇ ಅತಿದೊಡ್ದ ಪಂಚಾಯ್ತಿಯೆಂಬ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸಂಬಳ ಕೊಟ್ಟು ಮೂರು ತಿಂಗಳಾಗಿದ್ದು ವರ್ಷಾವಧಿ ಹಬ್ಬ ಯುಗಾದಿ ಕೆಲವೇದಿನ ಉಳಿದಿದ್ದು ಪಗಾರವಿಲ್ಲದೆ ಹಬ್ಬ ಆಚರಣೆ ಹೇಗೆಂಬ ಆತಂಕ ಅವರಲ್ಲಿ ಮನೆಮಾಡಿದೆ. ಹುಳಿಯಾರು ಗ್ರಾಮ ಪಂಚಾಯ್ತಿ        ೩೯ ಮಂದಿ ಸದಸ್ಯರನ್ನು ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಸರಿಸುಮಾರು ೪೩ ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.ಬಿಲ್ ಕಲೆಕ್ಟರ್,ವಾಟರ್ ಮೆನ್ ,ಎಲೆಕ್ಟ್ರೀಷಿಯನ್, ಜವಾನರು,ಕಂಪ್ಯೂಟರ್ ಆಪರೇಟರ್,ಪೌರ ಕಾರ್ಮಿಕರು ಹೀಗೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಪ್ರತಿತಿಂಗಳು ಸಂಬಳ ಅನ್ನುವುದು ಮರೀಚಿಕೆಯಾಗಿದ್ದು ಮೂರ್ನಾಲ್ಕು ತಿಗಳಿಗೊಮ್ಮೆ ಸಂಬಳ ಪಾವತಿಸುವುದು ರೂಢಿಯಲ್ಲಿದೆ.       ಅದುಕೂಡ ಯಾವುದಾದರೂ ಅನುದಾನದಲ್ಲಿ ಹಣ ಬಿಡುಗಡೆಯಾದಲ್ಲಿ ಮಾತ್ರ.ಇಲ್ಲದಿದ್ದಲ್ಲಿ ಇವರುಗಳು ಕರ ವಸೂಲಿ ಮಾಡಿಕೊಂಡೆ ಸಂಬಳ ಪಡೆಯಬೇಕಾಗಿದ್ದು ಸಂಗ್ರಹವಾಗುವ ವಸೂಲಾತಿಗೂ ಪಾವತಿಸಬೇಕಾದ ಸಂಬಳಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಕೆಲವರಿಗಷ್ಟೆ ಸಂಬಳ ಸಿಕ್ಕರೆ ಇನ್ನುಳಿದವರಿಗೆ ಮತ್ತೆ ಮುಂದಿನ ತಿಂಗಳೆ ಗಟ್ಟಿ ಎನ್ನುವ ಪರಿಸ್ಥಿತಿ ಇದೆ.          ಸದ್ಯ ಅಲ್ಪ ಸಂಬಳಕ್ಕೆ ಕೆಲಸ ಮಾಡುತ್ತಿರುವ ಇವರುಗಳಿಗೆ ನಿಗದಿತ ದಿನದಂದು ಹಣ ಪಾವತಿಯಾಗದೆ ಸಂಸಾರ ನಿರ್ವಹಿಸುವುದೇ ದುಸ್ತರ

ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕಾಂಕ್ರೀಟ್ ರಸ್ತೆ ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ

ಮುಂಚೆಯಿದ್ದ ಕಲ್ಲುಚಪ್ಪಡಿ ಮಾರಿ ಲಕ್ಷಾಂತರ ರೂಪಾಯಿ ಗುಳುಂ: ಮಾಜಿ  ಉಪಾಧ್ಯಕ್ಷ ಸೈಯದ್ ಜಹೀರ್ ಸಾಬ್  ಆರೋಪ ಹುಳಿಯಾರು: ಪಟ್ಟಣದ ಐದನೇ ಬ್ಲಾಕ್ ಸೇರಿದಂತೆ ಹಲವೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಲು ಪಿಚ್ಚಿಂಗ್ ಆಗಿದ್ದ ರಸ್ತೆಯಲ್ಲಿ ಮಾತ್ರವೇ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಅಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಲ್ಲುಚಪ್ಪಡಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಈ ಕೂಡಲೆ ಕಲ್ಲುಚಪ್ಪಡಿಗಳನ್ನು ಪಂಚಾಯ್ತಿ ಆವರಣಕ್ಕೆ ತಂದಿಡಿಸಬೇಕೆಂದು ಮಾಜಿ ಗ್ರಾಮಪಂಚಾಯ್ತಿ  ಉಪಾಧ್ಯಕ್ಷ ಸೈಯದ್ ಜಹೀರ್ ಸಾಬ್  ಒತ್ತಾಯಿಸಿದ್ದಾರೆ.            ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಹತ್ತುಹಲವಾರು ಕಾಮಗಾರಿಗಳು ನಡೆದಿರುವುದಾಗಿ ಕೇವಲ ದಾಖಲೆಯಲ್ಲಿ ಇದೆಯೇ ಹೊರತು ಕಾಮಗಾರಿ ನಡೆದಿರುವ ಕುರುಹುಗಳೇ ಇಲ್ಲಾ.ಸ್ಕೇರ್ಸಿಟಿಯಲ್ಲಿ ಲಕ್ಷಾಂತರ ರೂಪಾಯಿ ಪಂಚಾಯ್ತಿಗೆ ಬಂದಿದೆ.ಅಲ್ಲದೆ ೨೦೧೫-೧೬,೧೬-೧೭ ನೇ ಸಾಲಿನಲ್ಲಿ ೫೦ಲಕ್ಷ ರೂಗಳಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು ಹಣ ಮಾತ್ರ ಪೂರಾ ಬಳಕೆಯಾಗಿದೆಯೇ ಹೊರತು ಕಾಮಗಾರಿ ಮಾತ್ರ ಕಾಣುತ್ತಿಲ್ಲ.ಹಣದಲ್ಲಿ ಯಾವ ಕಾಮಗಾರಿಗಳು ನಡೆದಿವೆ,ಏನಕ್ಕೆ ಬಳಕೆ ಮಾಡಿದ್ದಾರೆ ಎಂದು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ.ಈಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು.                  4, 5 ನೇ ವಾರ್ಡಿಗೆ ಸಂಬಂಧಿಸಿದಂತೆ ದುರ್

ಶಕ್ತಿ ಪೀಠವಾಗಿ ಯಾತ್ರಾಸ್ಥಳವಾಗಲಿರುವ ಹುಳಿಯಾರು

ಹುಳಿಯಾರು: ಪಟ್ಟಣದ ಕೋಡಿಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಜಗನ್ಮಾತೆ ಕಂಕಾಳಿ ಹಾಗೂ ಏಳು ಶಕ್ತಿ ಪೀಠಗಳಲ್ಲಿ ಒಂದಾಗಿರುವ ತುಳುಜಾ ಭವಾನಿ ಮಾತೆಯರ ದೇವಸ್ಥಾನ ಮತ್ತು ೬೧ ಅಡಿಎತ್ತರದ ಭಾರತದಲ್ಲಿಯೇ ಪ್ರಥಮವಾದ ಅನಂತಪದ್ಮನಾಭನ ಮೂರ್ತಿಯು ಮುಕ್ತಾಯ ಹಂತದಲ್ಲಿದ್ದು ಇದರ ಲೋಕಾರ್ಪಣೆಗೆ ರಾಷ್ಟ್ರಪತಿಗಳು ಸೇರಿದಂತೆ ಪ್ರತಿಷ್ಟಿತ ಗಣ್ಯರು ಆಗಮಿಸಲಿದ್ದು ಈ ಸ್ಥಳ ಪವಿತ್ರಾ ಯಾತ್ರಾಸ್ಥಳವಾಗಿ ರೂಪುಗೊಳ್ಳಲಿದೆ ಎಂದು ದೇವಾಲಯದ ಪ್ರಧಾನ ಟ್ರಸ್ಟಿ ಗಂಗಾಧರ ಆಶಯ ವ್ಯಕ್ತಪಡಿಸಿದರು.         ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಗಮಿಸಿದ ವಿವಿಧ ದೇವರುಗಳ ಬೃಹತ್ ಶಿಲಾಮೂರ್ತಿಗಳ ಜಲಾಧಿವಾಸದ ನಿಮ್ಮಿತ್ತವಾಗಿ ನಡೆದ ಕಾರ್ಯಕ್ರಮದಲ್ಲ್ಲಿ ಮಾತನಾಡಿದ ಅವರು ಮೇ ೩ರಂದು ಪ್ರತಿಷ್ಟಾಪನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ಮನುಕುಲದ ಅಧಿದೇವತೆ ಕಂಕಾಳಿ ಹಾಗು ತುಳುಜಾ ಭವಾನಿ ಮಾತೆಯರನ್ನು ಒಂದೇ ಪೀಠದಲ್ಲಿ ಪ್ರತಿಷ್ಟಾಪಿಸಲಾಗುವುದರ ಜೊತೆಗೆ ಪಿರಮಿಡ್ ಧ್ಯಾನಮಂದಿರ, ಸೇವಾಲಾಲ್ ಸಾಂಸ್ಕೃತಿಕ ಸದನ,ಶ್ರೀ ಮಾತಾ ಯಾತ್ರಿ ನಿವಾಸ,ಬಲಮುರಿ ಗಣಪತಿ ದೇವಸ್ಥಾನ,ಮರಿಯಮ್ಮ ದೇವಿ ದೇವಸ್ಥಾನವನ್ನು ಸಹ ಅಂದು ಲೋಕಾರ್ಪಣೆ ಮಾಡಲಾಗುವುದು ಎಂದರು.       ಮುಂದುವರಿದು ಮಾತನಾಡಿದ ಅವರು ದೇವಾಲಯಗಳ ಶಿಲಾಮೂರ್ತಿಯನ್ನು ಶಿಲ್ಪಕಲಾಕೃತಿಗಳಿಗೆ ಹೆಸರಾದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಶಿಲ್ಪಿಗಳಿಂದಲೇ ಸುಂದರವಾಗಿ ಕೆತ್ತಿಸಲಾಗಿದೆ ಎಂದ

ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ ಬಜೆಟ್

ಹುಳಿಯಾರು ಜನತೆಗೆ ನಿರಾಸೆ ಮೂಡಿಸಿದ ಬಜೆಟ್ 49 ತಾಲ್ಲೂಕ್ ಕೇಂದ್ರದ ಪಟ್ಟಿಯಲ್ಲೂ ಹುಳಿಯಾರು ಹೆಸರಿಲ್ಲ ಕನ್ನಡಪ್ರಭ ವಾರ್ತೆ,ಹುಳಿಯಾರು: ಈ ಬಾರಿಯ ಬಜೆಟ್ ನಲ್ಲಾದರೂ ಹುಳಿಯಾರನ್ನು ತಾಲ್ಲೂಕ್ ಕೇಂದ್ರವನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಬಹುದೆಂದು ನಿರೀಕ್ಷಿಸಿದ್ದ ಹುಳಿಯಾರು ಜನತೆಗೆ ಬಜೆಟ್ ನಿರಾಸೆ ಮೂಡಿಸಿದೆ.              ರಾಜ್ಯದಲ್ಲಿ ಹೊಸದಾಗಿ 49 ತಾಲೂಕು ರಚನೆಗೆ ಸರ್ಕಾರ ಬದ್ಧವಾಗಿದ್ದು, ಹಣಕಾಸು ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 2017-18ನೇ ಸಾಲಿನ ಬಜೆಟ್ ಭಾಷಣದ ವೇಳೆ ಘೋಷಿಸಿದ್ದಾರೆ. 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳು ರಚನೆಯಾಗಲಿದ್ದು, ತುಮಕೂರು ಜಿಲ್ಲೆಯಲ್ಲಿ ತಾಲ್ಲೂಕಾಗಿ ಘೋಷಣೆಯಾಗಬೇಕಿದ್ದ ಹುಳಿಯಾರು ಹಾಗೂ ಹುಲಿಯೂರುದುರ್ಗದ ಬಗ್ಗೆ ಪ್ರಸ್ತಾಪನೆ ಇಲ್ಲದಿರುವುದು ಬಹುಕಾಲದ ಬೇಡಿಕೆಗೆ ಕೊನೆಗೂ ಮಾನ್ಯತೆ ಇಲ್ಲದಂತಾಗಿದೆ.            ತುಮಕೂರು ಜಿಲ್ಲೆಗೆ ಹೈಟೆಕ್ ಆಸ್ಪತ್ರೆ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ ಹೊರತು ಪಡಿಸಿದರೆ ಮತ್ಯಾವ ಪ್ರಸ್ತಾಪನೆ ಆಗಿಲ್ಲ.ವಿ.ಶ್ರೀನಿವಾಸ್ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದ ಕಾಲದಲ್ಲಿ ಹೊಸ ತಾಲೂಕು ರಚನೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದು ಆಗಿನ ಪಟ್ಟಿಯಲ್ಲಿ ಹುಳಿಯಾರು ಹಾಗೂ ಹುಲಿಯೂರುದುರ್ಗ ಸೇರ್ಪಡೆಗೊಂಡಿತ್ತು. ಸದನದಲ್ಲೂ ಇದಕ್ಕೆ

ಹುಳಿಯಾರಿನ ವಿದ್ಯಾವಾರಿಧಿ ಶಾಲೆ ಮುಂದೆ ಶವದ ಗಾಡಿಯೊಂದಿಗೆ ಪ್ರತಿಭಟನೆ.

ಸೆಕ್ಯೂರಿಟಿ ಗಾರ್ಡ್ ಸಾವಿನ ಹಿನ್ನಲೆ. ಹುಳಿಯಾರಿನ ವಿದ್ಯಾವಾರಿಧಿ ಶಾಲೆ ಮುಂದೆ ಶವದ ಗಾಡಿಯೊಂದಿಗೆ ಪ್ರತಿಭಟನೆ. ಹುಳಿಯಾರು: ಪಟ್ಟಣದ ವಿದ್ಯಾವಾರಿಧಿ ಶಾಲೆಯ ದುರ್ಘಟನೆಯಲ್ಲಿ ಐಸಿಯುನಲ್ಲಿದ್ದ ಚಿಕಿತ್ಸೆ ಪಡೆಯುತ್ತಿದ ಶಾಲೆಯ ಕಾವಲುಗಾರ ರಮೇಶ್ ಭಾನುವಾರ ಸಾವನ್ನಪ್ಪಿದ ಹಿನ್ನಲೆಯಲ್ಲಿ ಶಾಲೆಯ ನಿರ್ಲಕ್ಷ್ಯತೆಯಿಂದ ರಮೇಶ್ ಸಾವನ್ನಪ್ಪಿದ್ದು ಶಾಲಾ ಆಡಳಿತ ಮಂಡಳಿ ಪರಿಹಾರವನ್ನು ನೀಡಬೇಕು,ಇಲ್ಲದಿದ್ದಲ್ಲಿ ಹೆಣ ಸಾಗಿಸುವುದಿಲ್ಲವೆಂದು ಪಟ್ಟು ಹಿಡಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂದೆ ಪ್ರತಿಭಟನೆ  ನಡೆಸಿದರು.         ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಶಾಲೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹೊಸಳ್ಳಿ ವಾಸಿ ರಮೇಶ್ ಸಹ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥನಾಗಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಿಗ್ಗೆ ಹತ್ತು ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾನೆ.ತುಮಕೂರಿಗೆ ತೆರಳಿ ಮೃತದೇಹವನ್ನು ತರುತ್ತಿರುವ ವೇಳೆ ಸುದ್ದಿ ತಿಳಿದ ಗ್ರಾಮಸ್ಥರು ಶಾಲೆಯ ಬಳಿ ನೂರಾರು ಸಂಖ್ಯೆಯಲ್ಲಿ ಸಂಜೆ ಆರು ಗಂಟೆಯಿಂದಲೇ ಜಮಾಯಿಸಿ ಪರಿಹಾರಕ್ಕಾಗಿ  ಒತ್ತಾಯಿಸಿದರು.        ಅಲ್ಲದೆ ರಸ್ತೆ ತಡೆ ಕೂಡ ನಡೆಸಲು ಮುಂದಾದಾಗ .ಸ್ಥಳದಲ್ಲಿದ್ದ ಪಿಎಸೈ ಪ್ರವೀಣ್ ಅದನ್ನು ತಡೆದಿದ್ದರಿಂದ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.        ನಂತರ ನೂರಾರು ಸಂಖ್ಯೆಯಲ್ಲಿದ್ದ ಪೋಲಿಸರು ರಸ್ತೆತಡೆಗಾಗಿ ಇಟ್ಟಿದ್ದ ಕಲ್ಲನ್ನು ತೆರವುಗೊ

ಹುಳಿಯಾರಿನಲ್ಲಿ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

ಹುಳಿಯಾರು: ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೆಎಸ್ಸಾರ್ಟಿಸಿ ಬಸ್ ಹುಳಿಯಾರು ನಿಲ್ದಾಣದಿಂದ ಹೊರಡುತ್ತಿದ್ದರಿಂದ ಪರಊರಿನ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ,ಬಸ್ಸನ್ನು ಪೂರ್ವ ನಿಗದಿತ ಸಮಯಕ್ಕೆ ಸರಿಯಾಗಿ ಸಂಚರಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಗ್ರಾಮಪಂಚಾಯ್ತಿ ಸದಸ್ಯರಾದ ಎಲ್.ಆರ್.ಚಂದ್ರಶೇಖರ್ ಹಾಗೂ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಬಸ್ ತಡೆದು ಪ್ರತಿಭಟನೆ ನಡೆಸಿದರು.             ಹುಳಿಯಾರಿನಿಂದ ತಿಪಟೂರಿಗೆ ಕೆಎಸ್ಸಾರ್ಟಿಸಿ ಬಸ್ ಮುಂಜಾನೆ ೬.೩೦ ಹಾಗೂ ೭ ಗಂಟೆಗೆ ಹುಳಿಯಾರು ಬಸ್ ನಿಲ್ದಾಣದಿಂದ ಹೊರಡುತ್ತಿದ್ದು ಇದರಲ್ಲಿ ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮದ ನೂರಾರು ವಿದ್ಯಾರ್ಥಿಗಳು ತಿಪಟೂರಿನ ಶಾಲಾಕಾಲೇಜುಗಳಿಗೆ ತೆರಳುತ್ತಿದ್ದರು.ಕಳೆದೆರಡು ದಿನಗಳಿಂದ ಬಸ್ ಸಮಯದಲ್ಲಿ ಏಕಾಏಕಿ ಬದಲಾವಣೆಯಾಗಿದ್ದು ಎರಡು ಬಸ್ಸುಗಳು ಅರ್ಧಗಂಟೆ ಮುಂಚಿತವಾಗಿಯೇ ಹುಳಿಯಾರಿನಿಂದ ತೆರಳುತ್ತಿದ್ದರಿಂದ ಬಸ್ ಸಿಗದೆ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಸಮಸ್ಯೆಯುಂಟಾಗಿತ್ತು.ಈಗಾಗಲೇ ಪರೀಕ್ಷಾ ಸಮಯವಾಗಿದ್ದು ಬಸ್ ಸಿಗದಿದ್ದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಎರವಾಗುವುದರಿಂದ ಹಾಗೂ ಆ ಸಮಯದಲ್ಲಿ ಮತ್ತೊಂದು ಬಸ್ಸಿನ ಪರ್ಯಾಯ ವ್ಯವಸ್ಥೆಯಿಲ್ಲದೆರುವುದರಿಂದ ತೀವ್ರ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ನೋಟ್ ಬ್ಯಾನ್ ನಿಂದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಿದ ಮೋದಿ :ಸಾಸಲು ಸತೀಶ್

ನೋಟು ಅಮಾನ್ಯೀಕರಣದಿಂದ ನಿಯಂತ್ರಣವಾಗದ ಕಪ್ಪುಹಣ ಹುಳಿಯಾರು: ನೋಟು ಅಮಾನ್ಯೀಕರಣದಿಂದ ಕಪ್ಪುಹಣ ಇನ್ನಿಲ್ಲದಂತಾಗಿ ಜನಸಾಮಾನ್ಯರ ಬದುಕು ಬದಲಾಗುತ್ತದೆಂದು ದೇಶದ ಜನ ತಿಳಿದು ಇದರ ಸಮಸ್ಯೆಯನ್ನು ಸಹಿಸಿಕೊಂಡಿದ್ದರು. ಆದರೆ ಇದರಿಂದ ಯಾವುದೇ ಅನುಕೂಲ ಸಾಮಾನ್ಯ ಜನರಿಗಾಗದೆ, ರೈತರ,ಮಧ್ಯಮ ವರ್ಗದವರ,ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು ಇನ್ನಷ್ಟು ದುಸ್ತರವಾಗಿದೆ ಎಂದು ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ದೂರಿದರು.        ಹುಳಿಯಾರಿನಲ್ಲಿ ಮಂಗಳವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನವೇದನ ಸಭೆಯಲ್ಲಿ ಮಾತನಾಡಿದ ಅವರು ನೋಟು ಅಮಾನ್ಯೀಕರಣದಿಂದ ಆರ್ಥಿಕ ಸುಧಾರಣೆ ಆಗುವ ಬದಲು ಬಡವರ ಹೊಟ್ಟೆಗೆ ಭಾರಿ ಹೊಡೆತ ಬಿದಿದ್ದು ಕಾರ್ಪೊರೇಟ್ ವಲಯದ ಹಿತ ಕಾಪಾಡಿದಂತಾಗಿದೆ ಎಂದರು.ಚುನಾವಣೆಗೂ ಮುಂಚೆ ಘೋಷಣೆ ಮಾಡಿದ್ದ ಕಪ್ಪುಹಣ ನಿಯಂತ್ರಣ,ಅಚ್ಚೆದಿನ್,ಉದ್ಯೋಗ ಸೃಷ್ಠಿ ಎಂಬ ಮಾತುಗಳು ಸುಳ್ಳಾಗಿದೆ ಎಂದರು.         ಅಮಾನ್ಯೀಕರಣದಿಂದ ಬಾರಿ ಬದಲಾವಣೆಯಾಗಲಿದೆ, ಕಪ್ಪು ಹಣ ನಿಯಂತ್ರಣ, ಭಯೋತ್ಪಾದನೆ ನಿರ್ಮೂಲನೆ ಆಗಲಿದೆ ಎಂದು ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಆದರೆ ನೋಟು ಅಮಾನ್ಯೀಕರಣದಿಂದ ಆದ ಅನುಕೂಲವೇನು ಹಾಗೂ ಕ್ಯಾಶ್ ಲೆಸ್ ವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಯೇನೆಂದು ಈಗ ಪ್ರತಿಯೊಬ್ಬರಿಗೂ ಮನವರಿಕೆಯಾಗಿದ್ದು ಮೋದಿಯವರ ಸರ್ವಾಧಿಕಾರಿ ಧೋರಣೆ ಬಗ್ಗೆ ಜನ ಕಿಡಿಕಾರುತ್ತಿದ್ದು

ವಾಸವಿ ವಿದ್ಯಾಸಂಸ್ಥೆಯಿಂದ ಶೀಘ್ರ ಐಟಿಐ ಹಾಗೂ ನರ್ಸಿಂಗ್ ತರಬೇತಿ ಶಾಲೆ

ಹುಳಿಯಾರು: ಗ್ರಾಮೀಣ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವಾಸವಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿದ್ದು ಮುಂದಿನ ದಿನಗಳಲ್ಲಿ ಐಟಿಐ ಹಾಗೂ ನರ್ಸಿಂಗ್ ತರಬೇತಿ ಶಾಲೆಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ತಿಳಿಸಿದರು.           ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ೪೮ ವರ್ಷಗಳ ಹಿಂದೇ ಜಿಲ್ಲೆಯಲ್ಲಿ ಎರಡನೆಯದಾಗಿ ಚಿಕ್ಕದಾಗಿ ಪ್ರಾರಂಭವಾಗಿದ್ದ ವಾಸವಿ ವಿದ್ಯಾಸಂಸ್ಥೆ ಇಂದು ಬೃಹತ್ತಾಗಿ ಬೆಳೆದಿದ್ದು ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧೆಡೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಶಾಲೆಯ ಕೀರ್ತಿ ಪತಾಕೆ ಹರಿಸಿದ್ದಾರೆ ಎಂದರು.         ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಆರ್.ಎಲ್.ರಮೇಶ್ ಬಾಬು ಮಾತನಾಡಿ ಇಂದು ಪ್ರಪಂಚ ಅಂಗೈಯಷ್ಟು ಕಿರಿದಾಗಿದ್ದು ಎಲ್ಲಡೆ ವಿದ್ಯೆ ಹಾಗೂ ಬುದ್ದಿಗೆ ಮನ್ನಣೆಯಿದೆ.ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಗಮನಹರಿಸಿ ಅವರನ್ನು ಓದು ಸೇರಿದಂತೆ ಕ್ರೀಡೆ,ಕಲೆ,ರಾಜಕೀಯ ಹೀಗೆ ಅನೇಕ ರಂಗಗಳಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹಿಸಿ ಮುಂದೆ ತರುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದರು. ಟಿ.ಆರ್.ಲಕ್ಷ್ಮೀಕಾಂತ್ ಅಧ್ಯಕ್ಷತೆ

ಕಟ್ಟಡ ಕಾರ್ಮಿಕರ ಸಭೆ ಇಂದು

ಹುಳಿಯಾರು: ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ಸೋಮಜ್ಜನಪಾಳ್ಯ ಇವರಿಂದ ಹುಳಿಯಾರಿನ ಆಂಬೇಡ್ಕರ್ ಭವನದಲ್ಲಿ ಮಾ.೩ ರಂದು ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸುವ ಸಲುವಾಗಿ ಸಭೆ ಕರೆಯಲಾಗಿದೆ.         ತಾಲ್ಲೂಕಿನಲ್ಲಿ ಸತತ ಬರಗಾಲ ಕಾಡುತ್ತಿರುವುದರಿಂದ ಹಾಗೂ ಸರ್ಕಾರದ ನೋಟು ಬದಲಾವಣೆ ನೀತಿಯಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿ ಕಟ್ಟಡ ಕಾರ್ಮಿಕರ ಮೇಲೂ ತನ್ನ ಛಾಯೆಯನ್ನು ಹರಡಿದೆ. ಇದರಿಂದ ಕಾರ್ಮಿಕರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ತಲುಪಿದ್ದು ಈ ಬಜೆಟ್ ನಲ್ಲಿ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೋರಲು ಎಐಟಿಯುಸಿ ರಾಜ್ಯಪ್ರಧಾನ ಕಾರ್ಯದರ್ಶಿ ಗಿರೀಶ್ ಅಧ್ಯಕ್ಷತೆಯಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿದೆ.          ಅಶ್ವಥ್ ನಾರಾಯಣ್,ಶಿವಣ್ಣ,ನಾಗಣ್ಣ,ಸತ್ಯನಾರಾಯಣ್,ನಾಗರಾಜು,ಜಿಪಂ ಸದಸ್ಯ ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್,ಉಪಾಧ್ಯಕ್ಷ ಗಣೇಶ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಕಟ್ಟಡ ನಿರ್ಮಾಣದಲ್ಲಿನ ಗಾರೆ ಕೆಲಸದವರು,ಬಾರ್ ಬೆಂಡರ್,ವೆಲ್ಡಿಂಗ್,ಸೆಂಟ್ರಿಂಗ್,ಪ್ಲಂಬರ್ ,ಇಟ್ಟಿಗೆ ತಯಾರಿಕ ಘಟಕದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ

ಸಗಣಿ ಹರಾಜು

ಹುಳಿಯಾರು: ಹೋಬಳಿ ಕಾರೇಹಳ್ಳಿಯಲ್ಲಿ ದನಗಳ ಜಾತ್ರಾ ಮಹೋತ್ಸವದ ಸಮಯದ ಸಗಣಿ ಹಾಗೂ ಗೋ ಶಾಲೆ ನಡೆಯುತ್ತಿರುವ ಸ್ಥಳದ ಸಗಣಿ ಹರಾಜು ನಡೆಯಿತು. ಮಾರ್ಚ್ ೭ ರಿಂದ ೧೭ ರವರೆಗಿನ ಹತ್ತು ದಿನಗಳ ಕಾಲದ ಜಾತ್ರ ಸಮಯದಲ್ಲಿ ಶೇಖರಣೆಯಾಗುವ ಸಗಣಿ ೯೦೦೦ರೂಗಳಿಗೆ ಹರಾಜಾದರೆ ಫೆ.೧೮ರಿಂದ ಮಾರ್ಚ್ ೩೧ರವರೆಗಿನ ಗೋಶಾಲೆಯ ಸಗಣಿ ೨೩೫೦೦ ರೂಗಳಿಗೆ ಹರಾಜು ಮಾಡಲಾಯಿತು.ಉಪತಹಸಿಲ್ದಾರ್ ಸತ್ಯನಾರಾಯಣ್ ಇದ್ದರು.

ಗೋಶಾಲೆಯ ಹಸು ಸಾವು:ಪರಿಹಾರಕ್ಕಾಗಿ ರೈತರ ಪ್ರತಿಭಟನೆ

ಹುಳಿಯಾರು: ಹೋಬಳಿ ಕಾರೇಹಳ್ಳಿಯ ಗೋ ಶಾಲೆಯಲ್ಲಿ ಹಸುವೊಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಸರ್ಕಾರ ರೈತನಿಗೆ ಪರಿಹಾರ ಕೊಡ ಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಕಾರೇಹಳ್ಳಿಯಲ್ಲಿ ಜರುಗಿದೆ.           ಸಾವನ್ನಪ್ಪಿದ ಹಸು ಹೋಬಳಿಯ ದಬ್ಬಗುಂಟೆ ಗ್ರಾಮದ ನಾಗರಾಜು ಎಂಬುವವರಿಗೆ ಸೇರಿದಾಗಿದ್ದು ಈ ಹಸು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ನರಳುತಿತ್ತು ಎನ್ನಲಾಗಿದೆ.       ಹುಳಿಯಾರು ಪಶು ವೈದ್ಯ ರಂಗನಾಥ್ ಚಿಕಿತ್ಸೆ ನೀಡಿದ್ದರು ಸಹ ಚಿಕಿತ್ಸೆ ಫಲಕಾರಿಯಾಗದೆ ಗೋಶಾಲೆಯಲ್ಲೇ ಹಸು ಕೊನೆ ಉಸಿರೆಳೆದಿದೆ. ಹಸು ಮಾಲೀಕ ನಾಗರಾಜು ಸೇರಿದಂತೆ ಕೆಲವರು ಹಸು ಸಾವನ್ನಪ್ಪಿದ್ದು ಸರ್ಕಾರ ಪರಿಹಾರ ಕೊಡಬೇಕೆಂದು ಪ್ರತಿಭಟನೆ ನಡೆಸಿದರು.          ಗೋ ಶಾಲೆಯಲ್ಲಿನ ಕಳಪೆ ಗುಣಮಟ್ಟದ ಮೇವು ತಿಂದು ಹಸು ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದು ಪರಿಹಾರ ಕೊಡಬೇಕು ಎಂದು ಪಟ್ಟು ಹಿಡಿದರು.         ಕಂದಾಯ ತನಿಖಾಧಿಕಾರಿ ಹನುಮಂತನಾಯ್ಕ ಮಾತನಾಡಿ ಗೋಶಾಲೆಯಲ್ಲಿ ಗುಣಮಟ್ಟದ ಮೇವು ನೀಡುತ್ತಿದ್ದು ಗೋಶಾಲೆಯ ಮೇವು ತಿಂದ ಯಾವುದೇ ರಾಸುಗಳಿಗೆ ಆರೋಗ್ಯದಲ್ಲಿ ಏರುಪೇರಾಗಿರುವ ನಿದರ್ಶನವಿಲ್ಲ. ಮೊದಲೆ ಅನಾರೋಗ್ಯಕ್ಕೆ ತುತ್ತಾಗಿದ್ದ ಹಸು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಪ್ರಕೃತಿ ವಿಕೋಪದಿಂದ ಹಸು ಮರಣ ಹೂಂದಿದ್ದರೆ ಮಾತ್ರ ಪರಿಹಾರ ನೀಡಬಹುದೆ ವಿನಹ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂದು ತಿಳ

ಯಳನಾಡು ಗ್ರಾಮಪಂಚಾಯ್ತಿಯಲ್ಲಿ ನಿಯಮ ಗಾಳಿಗೆ ತೂರಿ ಗ್ರಾಮ ಸಭೆ

ಗ್ರಾಮ ಸಭೆ ರದ್ದು ಮಾಡಿ ಮತ್ತೊಂದು ಸಭೆ ಕರೆಯಲು ನೋಡಲ್ ಅಧಿಕಾರಿ ಸೂಚನೆ -------------------------------- ಹುಳಿಯಾರು : ಗ್ರಾಮಸಭೆಯ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದ ಗ್ರಾಮ ಸಭೆಗೆ ಲಂಚಮುಕ್ತ ವೇದಿಕೆಯ ಕಾರ್ಯಕರ್ತರ ಪ್ರವೇಶಿಸಿ ಪ್ರಶ್ನೆಮಾಡಿದ್ದರಿಂದ ತಬ್ಬಿಬ್ಬಾದ ಅಧಿಕಾರಿಗಳು ಸಭೆಯನ್ನೆ ರದ್ದು ಮಾಡಿ ಮತ್ತೊಂದು ದಿನಕ್ಕೆ ಮುಂದೂಡಿದ ಘಟನೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂನಲ್ಲಿ ಜರುಗಿದೆ. ಹುಳಿಯಾರು ಹೋಬಳಿಯ ಯಳನಾಡುವಿನಲ್ಲಿ ನಿಯಮ ಪಾಲಿಸದೆ ನಡೆಯುತ್ತಿದ್ದ ಗ್ರಾಮಸಭೆ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರು ಪ್ರಶ್ನಿಸಿದ್ದರಿಂದ ಗ್ರಾಮಸಭೆಯನ್ನು ಅರ್ಧಕ್ಕೆ ರದ್ದುಪಡಿಸಿ ಮುಂದೂಡಲಾಯಿತು.            ಯಳನಾಡು ಗ್ರಾಮ ಪಂಚಾಯ್ತಿಯಿಂದ ಉದ್ಯೋಗಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯನ್ನು ಕಛೇರಿ ಆವರಣದಲ್ಲಿ ಕರೆಯಲಾಗಿತ್ತು. ಆದರೆ ಗ್ರಾಮ ಸಭೆಯ ಕನಿಷ್ಠ ನಿಯಮಗಳನ್ನು ಪಾಲಿಸಲು ಮುಂದಾಗದೆ ಕೇವಲ ದಾಖಲೆಗಷ್ಟೆ ಎನ್ನುವಂತೆ ಸಭೆ ನಡೆಸುತ್ತಿದ್ದರು. ನೆರೆದಿದ್ದ ಸಾರ್ವಜನಿಕರೂ ಸಹ ಮರುಪ್ರಶ್ನೆ ಕೇಳದೆ ಅಧಿಕಾರಿಗಳು ಹೇಳಿದ್ದನ್ನೇ ಕೇಳುತ್ತ ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಇದಕ್ಕೂ ಮೀರಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮುಂಚೆಯೇ ಅನುಮೋದನೆ ಪುಸ್ತಕಕ್ಕೆ ಸಾರ್ವಜನಿಕರ ಸಹಿ ಸಂಗ್ರಹಿಸುತ್ತಿದ್ದರು.           ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಅ