ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗದ ಹೋಸದುರ್ಗ ತಾಲ್ಲೂಕು ಡಿ.ಬಿ.ಕೆರೆ ಶ್ರೀಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾರ್ಗಮಧ್ಯೆ ಕೆಂಕೆರೆಯ ತಾ.ಪಂ.ಸದಸ್ಯ ನವೀನ್ ಅವರ ನಿವಾಸಕ್ಕೆ ತೆರಳಿ,ಅವರ ಆತಿಥ್ಯ ಸ್ವೀಕರಿಸಿದರು. ಇಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಉತ್ತಮ ಮಕ್ಕಳ,ಪ್ರಜೆಗಳ ಅವಶ್ಯಕತೆಯಿದ್ದು,ಪೋಷಕರು ತಮ್ಮ ಮಕ್ಕಳಿಗೆ ಇಂದಿನಿಂದಲೇ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರನ್ನು ಸುಸಂಸ್ಕೃತ ಪ್ರಜೆಗಳಾನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು. ನಮ್ಮ ಕರ್ನಾಟಾಕ ರಾಜ್ಯ ಪುಣ್ಯಭೂಮಿ,ಧರ್ಮಭೂಮಿ,ಇಲ್ಲಿ ರಾಮನ ಪರಮ ಭಂಟ ಹನುಮಂತ ಜನಿಸಿದ್ದಾನೆ,ಇಲ್ಲಿ ಹುಟಿದ್ದ ನಾವೆಲ್ಲರೂ ಪುಣ್ಯವಂತರು ಎಂದರು.ದೇಶದ,ರಾಜ್ಯದ ಓಟ್ಟು ಭವಿಷ್ಯ ಅಲ್ಲಿನ ಮತದಾರರ ಮತದಾನದಲ್ಲಿದ್ದು, ಗಾಳಿಪಟದಂತೆ ಜನಪ್ರತಿನಿಧಿಗಳನ್ನು ಹಾರಿಸದೇ,ರಾಜ್ಯದ ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070