ಹುಳಿಯಾರು ಸೇರಿದಂತೆ ಸುತ್ತಮುತ್ತ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಬಾರಿ ಮಳೆ ಸುರಿದ್ದಿದ್ದು, ಇದರ ಪರಿಣಾಮವಾಗಿ ಉಂಟಾದ ಸಿಡಿಲು ಬಡಿದು 4 ಜನ ಸಾವನ್ನಪ್ಪಿ,ಮೂವರಿಗೆ ಗಾಯಗಳಗಿರುವ ಘಟನೆ ಸಮೀಪದ ಬೋರನಕಣಿವೆಯ ಹಿನ್ನೀರು ಪ್ರದೇಶದ ಬೆಳವಾಡಿ ಕೋವೆಯಲ್ಲಿ ಸಂಭವಿಸಿದೆ.
ಜಯಚಂದ್ರ ನಗರದ ಗಂಗಜ್ಜ (60),ಗಂಗಯ್ಯ(35),ಮಂಜಣ್ಣ(35),ಖಾಸಿಂಸಾಬ್ ಪಾಳ್ಯದ ಜಬೀವುಲ್ಲಾ(25) ಸಾವನ್ನಪ್ಪಿದ್ದು,ಹರೀಶ್,ಮಾರೇಶ್,ರಾಮಾಂಜನೇಯ್ಯ ಎಂಬುವರಿಗೆ ತೀವ್ರ ಗಾಯಗಳಾಗಿವೆ.
ಘಟನೆ ವಿವರ: ಗುರುವಾರದಂದು ಬೋರನಕಣಿವೆ ಜಲಾಶಯದಲ್ಲಿ ಮೀನು ಹಿಡಿಯುವ ಸಲುವಾಗಿ ಬೆಳವಾಡಿ ಕೋವೆಯ ಬಳಿಯಿಂದ ಬಲೆ ಹಾಕಲು ಒಟ್ಟು ಏಳು ಜನ ತೆರಳಿದ್ದರು, ಮಧ್ಯಾಹ್ನ 3ರ ನೀರಿನಲ್ಲಿ ಬಲೆ ಬಿಟ್ಟು ವಾಪಸ್ ದಡ ಸೇರಿದ ಸಮಯದಲ್ಲಿ ಮಳೆ ಪ್ರಾರಂಭಗೊಂಡಿದ್ದರಿಂದ ಇವರುಗಳು ಮಳೆಯಿಂದ ತಪ್ಪಿಸಿಕೊಳ್ಳಲು ತಾವು ತೆರಳಿದ್ದ ತೆಪ್ಪಗಳನ್ನೇ ಹುಟ್ಟಿಗೆ ಒಂದಕ್ಕೋಂದು ಬೋರಲು ಹಾಕಿ ಒರಗಿಸಿ ಅದರಡಿಯಲ್ಲಿ ಎಲ್ಲರೂ ಆಶ್ರಯ ಪಡೆದಿದ್ದಾರೆ. ಮಳೆಯ ಆರ್ಭಟಕ್ಕೆ ಆ ಸಮಯದಲ್ಲಿ ಆಗಸದಲ್ಲಿ ಕಂಡ ಬಾರಿ ಸಿಡಿಲು ಇವರಿಗೆ ಬಡಿದ ಪರಿಣಾಮ ಮುಂಭಾಗದಲ್ಲಿ ಕುಳಿತಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತಪಟರೇ, ಮತ್ತೊಬ್ಬ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ.ಹಿಂಭಾಗದಲ್ಲಿದ್ದ ಮೂವರಿಗೆ ಸಿಡಿಲು ಬಡಿತದಿಂದ ಪಾರಾಗಿದ್ದೂ ಅಲ್ಪ ಸ್ವಲ್ಪ ಗಾಯಗಳಾಗಿವೆ. ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾದ ಇವರುಗಳನ್ನು ಹುಳಿಯಾರು ಆಸ್ಪತ್ರೆಗೆ ಕರೆತಂದು,ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಸುದ್ದಿ ತಿಳಿದು ತಹಶೀಲ್ದಾರ್ ಉಮೇಶ್ವಂದ್ರ ಸ್ಥಳಾಕ್ಕೆ ಬೇಟಿ ನೀಡಿದಲ್ಲದೆ,ಹುಳಿಯಾರು ಆಸ್ಪತ್ರೆಗೂ ಸಹ ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ