
ಹಿನ್ನಲೆ: ಮಾ.28 ಬುಧವಾರ ಮಧ್ಯರಾತ್ರಿ ಶಂಕರಪುರ ಬಡಾವಣೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದ ಸುಮಾರು 11 ಗುಡಿಸಲುಗಳು ಸಂಪೂರ್ಣ ಭಸ್ಮವಾಗಿದ್ದು,ಅದರಲ್ಲಿ ವಾಸಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ವಾಸಿಸಲು ಸೂರಿಲ್ಲದೆ ಬೀದಿಗೆ ಬಿದಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ತುರ್ತು ಪರಿಹಾರ ಬಂದಿರುವುದಿಲ್ಲ ಹಾಗೂ ಇವರ ಗೋಳಿಗೆ ಸ್ಥಳಿಯ ಅಧಿಕಾರಿಗಳು ಸ್ಪಂದಿಸದೇ ಹೋಗಿದ್ದಾರೆ.ಈ ಪ್ರದೇಶ ಹುಳಿಯಾರಿನ ಅಮಾನಿಕೆರೆ ಅಂಚಿನಲ್ಲಿದ್ದು,ಇಲ್ಲಿರುವ ಸುಮಾರು ಗುಡಿಸಲುಗಳಲ್ಲಿನ ಜನ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಇಲ್ಲಿರುವಂತ ಜನರಿಗೆ ತಮ್ಮದೇ ಆದ ಒಂದು ಸ್ವಂತ ಜಾಗವಾಗಲಿ, ಮನೆಯಾಗಲಿ ಇಲ್ಲ, ಸುಮಾರು ವರ್ಷಗಳಿಂದ ಇಲ್ಲಯೇ ವಾಸಿಸುತ್ತಿರುವ ನಮ್ಮನ್ನು ಕೇವಲ ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ನಾವು ಜನಪ್ರತಿನಿಧಿಗಳಿಗೆ ಕಾಣುತ್ತೇವೆ ಇತರೇ ಸಮಯದಲ್ಲಿ ನಮಗಾದ ನೋವನ್ನು ಕೇಳುವರೇ ಇಲ್ಲ ಎಂದು ಪ್ರತಿಭಟಿಸಿರು.
ಎಬಿವಿಪಿಯ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರ ಬಾಬು ಮಾತನಾಡಿ ಕೇವಲ ಚನುವಾಣೆಗಳಲ್ಲಿ ಮನೆ ಮನೆ ಬಾಗಿಲಿಗೆ ಬಂದು ಮತ ಕೇಳುವವರು ಇಂದು ಎಸಿ ರೂಂ ಗಳಲ್ಲಿ ಕುಳಿತಿದ್ದಾರೆ.ಮತ ಹಾಕಿದ ಮತದಾರನ ನೋವು,ತೊಂದರೆಗಳ ಬಗ್ಗೆ ಗಮನಿಸುವುದಿಲ್ಲ. ಬಜೆಟ್ ನಲ್ಲಿ ಅನೇಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಾರೆ.ಅದರಲ್ಲಿ ಇಂತಹ ಬುಡಕಟ್ಟು ಜನಾಂಗದವರ ಯಶೋಭಿವೃದ್ದಿಗೆ ಸ್ವಲ್ಪ ಹಣ ಮೀಸಲಿಡಲಿ ಎಂದರು. ಅಲ್ಲದೆ ಇಂದು ಬೆಂಕಿ ಆನಾಹುತದಿಂದ ಗುಡಿಸಲು ಕಳೆದುಕೊಂಡವರಿಗೆ ಹಾಗೂ ಕೆರೆ ಅಂಚಿನಲ್ಲಿ ವಾಸಿಸುವಂತವರಿಗೆ ಸೂರಿನ ವ್ಯವಸ್ಥೆಯನ್ನು ಶೀಘ್ರವೇ ಸರ್ಕಾರ ಮಾಡಬೇಕಿದೆ ಎಂದರು.
ಶಂಕರಪುರ ಬಡಾವಣೆಯಲ್ಲಿನ ಕೆರೆಯಂಚಿನಲ್ಲಿ ವಾಸಿಸುತ್ತಿರುವ ಜನಗಳ ಬದುಕು ನೀರಿನ ಮೇಲಿನ ಗುಳ್ಳೆಯಂತಾಗಿದ್ದ್ದು,ಯಾವಾಗಬೇಕಾದರೂ ತೊಂದರೆಗಳು ಸಂಭವಿಸಿ,ಇಲ್ಲಿನ ಜನ ಬೀದೀ ಪಾಲಾಗಬಹುದಿದೆ. ಅಲ್ಲದೆ ಈಗಾಗಿರುವ ಬೆಂಕಿ ಅನಾಹುತಕ್ಕೆ ಯಾವುದೇ ಸ್ಥಳೀಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗೂ ನಮ್ಮ ನೆರೆವಿಗೆ ಬಂದಿರುವುದಿಲ್ಲ.ಆ ನಿಟ್ಟಿನಲ್ಲಿ ಈ ಹೋರಾಟವನ್ನು ನಡೆಸುತ್ತಿದ್ದು, ಇದನ್ನು ಮನಗಂಡ ಅಧಿಕಾರಿಗಳು ಇಲ್ಲಿ ವಾಸಿಸುವ ಜನರಿಗೆ ಸೂಕ್ತ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು ಗ್ರಾ.ಪಂ.ಸದಸ್ಯ ರಾಘವೇಂದ್ರ ಪ್ರತಿಭಟನಾ ನಿರತರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉರಿಬಿಸಿಲನ್ನು ಲೆಕ್ಕಿಸದೇ ಬೆಳಗ್ಗಿನಿಂದಲೇ ನಾಡಕಛೇರಿ ಆವರಣದಲ್ಲಿ ಮಹಿಳೆಯರು ಸೇರಿದಂತೆ ಹಲವು ಜನ ನಿರಾಶ್ರಿತರು ಹಾಗೂ ಕೆರೆಯಂಚಿನಲ್ಲಿ ವಾಸಿಸುವ ಜನರು ನಮಗೆ ಸೂರು ಕೊಡಿ ಎಂದು ಕೂಗುತ್ತಾ,ತಮ್ಮ ಪ್ರತಿಭಟನೆಯನ್ನು ನಡೆಸಿದರು.ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಪ್ರತಿಭಟನಾ ನಿರತ ಆಳಲನ್ನು ಆಲಿಸಿ,ಇದಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಂಡು,ನೀವೇಶದ ವ್ಯಸಸ್ಥೆಯನ್ನು ಮಾಡುವುದಾಗಿ ತಿಳಿಸುವ ಮೂಲಕ ಪ್ರತಿಭಟನಾನಿರತರ ಮನವೋಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದರು.
ಪ್ರತಿಭಟನೆಯಲ್ಲಿ ತಾ.ಪಂ.ಸದಸ್ಯ ನವೀನ್,ಎಬಿವಿಪಿ ಹೋಬಳಿ ಘಟಕದ ಪದಾಧಿಕಾರಿಗಳು,ಸಂಚಯನ ಸ್ವಯಂಸೇವಾ ಸಂಸ್ಥೆಯ ಹರ್ಷ ಹಾಗೂ ಅಲೆಮಾರಿ ಬುಡಕಟ್ಟು ಜನಾಂಗದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ