ರಾಜ್ಯಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ,ಅವರಿಗೆ ಉಚಿತ ವಿದ್ಯಾಭ್ಯಾಸ ನೀಡುವ ಧ್ಯೇಯಹೊಂದಿರುವ ರಾಷ್ಟ್ರೋತ್ತಾನ ಪರಿಷತ್ ಉಚಿತ ಪಿಯು ವಿಧ್ಯಾಭ್ಯಾಸಕ್ಕಾಗಿ 10ನೇ ತರಗತಿ ಮಕ್ಕಳಿಗೆ ನಡೆಸಿದ ಪ್ರತಿಭಾನೇಶ್ವಷಣಾ ಪರೀಕ್ಷೆಯಲ್ಲಿ ಹೋಬಳಿಯ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ದೊಡ್ಡಬಿದರೆಯ ಡಿ.ಆರ್.ಚಂದ್ರಶೇಖರ್ ಕಳೆದ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಉಚಿತ ಪಿಯು ಶಿಕ್ಷಣಕ್ಕೆ ಆಯ್ಕೆಯಾಗಿದ್ದಾನೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು,ಈತ ಮಾತ್ರ ತೇರ್ಗಡೆಯಾಗಿದ್ದಾನೆ.ಅಲ್ಲದೆ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಉಚಿತ ವಿಧ್ಯಾಭ್ಯಾಸದ ಜೊತೆಗೆ ಊಟ,ವಸತಿ ಸೌಲಭ್ಯವನ್ನು ರಾಷ್ಟ್ರೋತ್ತಾನ ಪರಿಷತ್ ನವರೆ ಒದಗಿಸಿಕೊಡುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರು,ಪೋಷಕರು ಅಬಭಿನಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ