ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗದ ಹೋಸದುರ್ಗ ತಾಲ್ಲೂಕು ಡಿ.ಬಿ.ಕೆರೆ ಶ್ರೀಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾರ್ಗಮಧ್ಯೆ ಕೆಂಕೆರೆಯ ತಾ.ಪಂ.ಸದಸ್ಯ ನವೀನ್ ಅವರ ನಿವಾಸಕ್ಕೆ ತೆರಳಿ,ಅವರ ಆತಿಥ್ಯ ಸ್ವೀಕರಿಸಿದರು.
ಇಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದಲ್ಲಿ ಉತ್ತಮ ಮಕ್ಕಳ,ಪ್ರಜೆಗಳ ಅವಶ್ಯಕತೆಯಿದ್ದು,ಪೋಷಕರು ತಮ್ಮ ಮಕ್ಕಳಿಗೆ ಇಂದಿನಿಂದಲೇ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರನ್ನು ಸುಸಂಸ್ಕೃತ ಪ್ರಜೆಗಳಾನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯ ಉದ್ಘಾಟನೆ ನೆರವೇರಿಸಿದ ಅವರು ಮಾತನಾಡಿದರು.
ನಮ್ಮ ಕರ್ನಾಟಾಕ ರಾಜ್ಯ ಪುಣ್ಯಭೂಮಿ,ಧರ್ಮಭೂಮಿ,ಇಲ್ಲಿ ರಾಮನ ಪರಮ ಭಂಟ ಹನುಮಂತ ಜನಿಸಿದ್ದಾನೆ,ಇಲ್ಲಿ ಹುಟಿದ್ದ ನಾವೆಲ್ಲರೂ ಪುಣ್ಯವಂತರು ಎಂದರು.ದೇಶದ,ರಾಜ್ಯದ ಓಟ್ಟು ಭವಿಷ್ಯ ಅಲ್ಲಿನ ಮತದಾರರ ಮತದಾನದಲ್ಲಿದ್ದು, ಗಾಳಿಪಟದಂತೆ ಜನಪ್ರತಿನಿಧಿಗಳನ್ನು ಹಾರಿಸದೇ,ರಾಜ್ಯದ ಹಿತಕಾಯುವವರನ್ನು ಗುರ್ತಿಸಿ,ಸೊಕ್ಕಿನಿಂದ ಮೆರೆಯುವವರನ್ನು ನೆಲಕ್ಕಪ್ಪಳಿಸುವಂತೆ ಮಾಡುವ ಶಕ್ತಿ ಮತದಾರರಲ್ಲಿದೆ ಎಂದು ತಿಳಿಸಿದರು.
ಸಾಧು ಸಂತರಿಗೆ ಜನ್ಮವೆತ್ತ ನಮ್ಮನಾಡಲ್ಲಿ ,ದಾರ್ಶನಿಕರ ಮಾರ್ಗಗಳನ್ನು ಅನುಸರಿಸಬೇಕು.ಇಂದು ಗಮನಿಸಿದಂತೆ ಅನೇಕ ಸಭೆ ಸಮಾರಂಭಾಗಳಿಗೆ ಇಂದಿನ ಯುವಪೀಳಿಗೆ ಹೋಗಲು ಹಿಂದೇಟಕುತ್ತಿದ್ದಾರೆ,ಇದರಿಂದ ರಾಜ್ಯದ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ಸಭೆ ಸಮಾರಂಭಾಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅನೇಕ ವಿದ್ಯಮಾನಗಳ ಬಗ್ಗೆ ಅರಿವು ಸಿಗುತ್ತದೆ,ಅಲ್ಲದೆ ರಾಜ್ಯದ ಹಿತ ಹಾಗೂ ರಾಜ್ಯ ಕಟ್ಟುವ ಸುಗಮವಾಗುತ್ತದೆ ಎಂದರು.ಹಿಂದೆ ದೇಶಕ್ಕಾಗಿ ಜನರಿದ್ದೇ,ಇಂದು ನಮಗಾಗಿಯೇ ಈ ದೇಶವೆಂದು ದೇಶವನ್ನೇ ಕೊಳ್ಳೇ ಹೊಡೆಯುಲೊರಟಿದ್ದಾರೆ.
ಈ ಬಾರಿ ತಾನು ರಾಜ್ಯದ ಬಜೆಟ್ ಮಂಡಿಸಿದ್ದರೇ ಮಕ್ಕಳಿಗೆ ಅವರ ವಿದ್ಯಾಭ್ಯಾಸಕ್ಕೆ,ಏಳ್ಗೆಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವ ಕನಸ್ಸೊತ್ತಿದೆ,ಅದರೆ ವಿಧಿಯಾಟ ಬೇರೆಯಿತ್ತು
ನಾವು ಪ್ರತಿನಿತ್ಯ ರೈತರನ್ನು ನೆನೆಯಬೇಕು,ನಮಗೆ ಅನ್ನ ನೀಡುವ ಅನ್ನದಾತ ರೈತ,ಶ್ರಮಪಟ್ಟು ವ್ಯವಸಾಯಮಾಡುವುದರಿಂದ ಕೋಟ್ಯಾಂತರ ಮಂದಿಗೆ ಅಹಾರವನ್ನು ಒದಗಿಸಿ ಕೊಡುತ್ತಿರುವ ರೈತನ ಕಾರ್ಯಕ್ಕೆ ಮತ್ತ್ಯಾರು ಸಾಟಿ ಎಂದು ಹೇಳುವಲ್ಲಿ ಅವರ ಮಾತುಗಳು ಕಣ್ಣ್ ತುಂಬಿಬಂದವು.ತಾನು ಪ್ರತಿನಿತ್ಯ ಆದೇವರಲ್ಲಿ ನಾನು ಕಷ್ಟ ಕೋಡಬೇಡವೆಂದು ಕೇಳುವುದಿಲ್ಲ, ನನಗೆ ಕಷ್ಟ ಕೋಡು,ಅದ ಜೊತೆಗೆ ಅದನ್ನು ಬಗೆಹರಿಸುವ ಶಕ್ತಿಯನ್ನು ಕಲ್ಪಿಸೆಂದು ಕೋರುವೆ. ನನ್ನಮೇಲಿರುವ ಇಲ್ಲ ಸಲ್ಲದ ಆರೋಪಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗುತ್ತದೆ,ನಾನು ಯಾವುದೇ ರೀತಿಯ ತಪ್ಪುಗಳನ್ನು ಮಾಡಿಲ್ಲವೆಂಬುದನ್ನು ರಕ್ತದಲ್ಲಿ ಬರೆದು ಕೊಡಲು ಸಿದ್ದ ಎಂದು ಘಂಟಾಘೋಷವಾಗಿ ನುಡಿದರು.
ಮಾಜಿ ಶಾಸಕ ಮಾಧುಸ್ವಾಮಿ ಮಾತನಾಡಿ,ಯಾರು ತಮ್ಮ ಕಾಯಕವನ್ನು ಮನಸಿಟ್ಟು,ಶ್ರದ್ದಾ ಭಕ್ತಿಯಿಂದ ಮಾಡುಬೇಕು,ಸ್ವಾಮಿ ನಿಷ್ಠೆ ಎಂಬುದು ತಮ್ಮ ಬದುಕನ್ನೇ ಎರವಲಾಗಿಟ್ಟಿಕೊಂಡಂತೆ ಎಂದರು.ಪ್ರತಿಯೊಬ್ಬರಲ್ಲೂ ಆಂತರಿಕ ಹಾಗೂ ಬಾಹ್ಯ ಮನಸ್ಸಿರುತ್ತದೆ,ಆದರೆ ಈ ಎರಡೂ ಮನಸಲ್ಲಿ ಯಾವುದಕ್ಕೆ ಅನುಗುಣವಾಗಿ ನಡೆಯಬೇಕು ಎಂಬುದನ್ನು ಚಿಂತಿಸಬೇಕು.ಬಾಹ್ಯ ಮನಸ್ಸು ನಮ್ಮನ್ನು ನಾಗಲೋಟದಲ್ಲಿ ಓಡುವಂತೆ ಮಾಡುವುದಲ್ಲದೆ,ಮಾನವನ ಹಿಡಿತದಿಂದ ದೂರವಾಗಿರುತ್ತದೆ.ಆದರೆ ಆಂತರಿಕ ಮನಸ್ಸು ನಮ್ಮ ಆಜ್ಞೆಗಳನ್ನು ಚಾಚು ತಪ್ಪದೇ ಪಾಲಿಸುತ್ತದೆ ಎಂದರು.
ಇಂದು ಹೆಚ್ಚಿನದಾನ ಮಾತಿನ ರೈತರಿದ್ದಾರೆ,ಕಾಯಕಕ್ಕೆ ಬಿಟ್ಟಾಗ ಮಾತ್ರ ಅವರ ನಿಜವಾದ ಬಣ್ಣ ತಿಳಿಯುತ್ತದೆ.ಯಡೆಯೂರಪ್ಪನವರು ಹೆಸರಿಗೆ ಮಾತ್ರ ಮಾಜಿ ಆಗಿರಬಹುದು ಆದರೆ ಅವರೇ ನಮ್ಮ ಮುಖ್ಯಮಂತ್ರಿಗಳು,ಇವರು ಒಂದು ಇತಿಹಾಸವನ್ನೇ ಸೃಷ್ಠಿಸುತ್ತಾರೆ ಎಂದರು.
ಭೂದಿಹಾಲ್ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಯವರು ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ವಿಗ್ರಹ ದಾನಿಗಳಾದ ಶಿವನಂಜಪ್ಪ, ಮಾಜಿ ಶಾಸಕರಾದ ಮಾಧುಸ್ವಾಮಿ,ಕೆ.ಎಸ್.ಕಿರಣ್ ಕುಮಾರ್,ಇಲ್ಕಲ್ ವಿಜಯ್ ಕುಮಾರ್.ಜಿಲ್ಲಾ ಪಂಚಾಯ್ತ ಸದಸ್ಯ ಪರುಶುರಾಮಪ್ಪ,ಮಾಜಿ ಸದಸ್ಯ ಜಯಣ್ಣ,ಚಿ.ನಾ.ಹಳ್ಳಿ ತಾ.ಪಂ.ಅಧ್ಯಕ್ಷ ಸೀತಾರಾಂ,ಗ್ರಾ.ಪಂ.ಸದಸ್ಯರುಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ