ಹುಳಿಯಾರು ಸಮೀಪದ ಬೋರನಕಣಿವೆಯಲ್ಲಿ ಸಿಡಿಲು ಬಡಿದು ಸಾವನಪ್ಪಿದ ಜಯಚಂದ್ರ ನಗರ4 ಕುಟುಂಬದವರಿಗೆ ತಲಾಒಂದೂವರೆಲಕ್ಷ ಪರಿಹಾರ ಹಣದ ಚೆಕನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು.
ಸಮೀಪದ ಬೋರನಕಣಿವೆಯಲ್ಲಿ ಸಿಡಿಲು ಬಡಿದು ಸಾವನಪ್ಪಿದ ಜಯಚಂದ್ರ ನಗರ 4 ಕುಟುಂಬದವರಿಗೆ ತಲಾಒಂದೂವರೆಲಕ್ಷ ಪರಿಹಾರವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು.
ಹಿನ್ನಲೆ: ಸಮೀಪದ ಬೋರನಕಣಿವೆಯ ಹಿನ್ನೀರು ಪ್ರದೇಶದ ಬೆಳವಾಡಿ ಕೋವೆಯಲ್ಲಿ ಏ.26ರ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಬಾರಿ ಮಳೆಯ ಪರಿಣಾಮವಾಗಿ ಉಂಟಾದ ಸಿಡಿಲಿನ ಅಘಾತಕ್ಕೆ 4 ಜನ ಸಾವನ್ನಪ್ಪಿದ್ದರು.ಘಟನೆ ಸಂಭವಿಸಿದಾಗ ಶಾಸಕರು ಬೆಂಗಳೂರಿನಲ್ಲಿದ್ದ ಕಾರಣ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ,ಅದರೂ ವಿಷಯ ತಿಳಿದ ತಕ್ಷಣ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತಕುಟುಂಬದವರಿಗೆ ತಲಾ ಒಂದೂವರೆಲಕ್ಷ ಪರಿಹಾರ ಕೊಡುವಂತೆ ಮನವೊಲಿಸಿದ್ದರು. ಇಂದು ಶುಕ್ರವಾರ ಜಯಚಂದ್ರ ನಗರದ ಹಾಗೂ ಖಾಸಿಂಸಾಬ್ ಪಾಳ್ಯದ ಮೃತ ಕುಟುಂಬದವರ ಮನೆಗೆ ಭೇಟಿ ನೀಡಿ,ಮೃತರ ದರ್ಶನ ಪಡೆದು, ಮೃತ ಕುಟುಂಬದವರಿಗೆ ಸಾಂತ್ವಾನ ಹೇಳಿದರು.ಇದೊಂದು ಆಕಸ್ಮಿಕ ದುರ್ಘಟನೆಯಾಗಿದ್ದು,ಪಕೃತಿಯ ವಿಕೋಪಗಳನ್ನು ಯಾರೂ ತಡೆದು ನಿಲ್ಲಿಸಲಾಗುವುದಿಲ್ಲ ಎಂದರು. ಸಾವನ್ನಪ್ಪಿದ್ದ ಗಂಗಜ್ಜ ,ಗಂಗಯ್ಯ,ಮಂಜಣ್ಣ,ಖಾಸಿಂಸಾಬ್ ಪಾಳ್ಯದ ಜಬೀವುಲ್ಲಾ ಅವರ ಕುಟುಂಬಗಳಿಗೆ ಸರ್ಕಾರದವತಿಯಿಂದ ತಲಾ ಒಂದೂವರೆಲಕ್ಷ ಪರಿಹಾರ ಹಾಗೂ ವೈಯಕ್ತಿಕವಾಗಿ ತಲಾ 10ಸಾವಿರರೂ ಪರಿಹಾರವನ್ನು ನೀಡಿದಲ್ಲದೆ ಘಟನೆಯಲ್ಲಿ ಗಾಯಗೊಂಡಿದ್ದ ಮೂವರಿಗೆ ತಲಾ 3100 ರೂಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು.ಮೀನುಗಾರಿಕೆ ಇಲಾಖೆಯಿಂದ ತಲಾ ಒಂದು ಲಕ್ಷದ ಪರಿಹಾರವನ್ನು ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಮೀನುಗಾರರ ಕುಟುಂಬದವರಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡುವುದಾಗಿ ಹಾಗೂ ಮೀನುಗಾರಿಕೆ ಇಲಾಖಾವತಿಯಿಂದ ಅವಶ್ಯ ನೆರವು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಮೀನುಗಾರಿಕೆ ಸಹಾಯಕ ಹಿರಿಯ ನಿರ್ದೇಶಕ ಕುಬೇಂದ್ರ ನಾಯಕ್, ತಹಶೀಲ್ದಾರ್ ಉಮೇಶ್ಚಂದ್ರ,ಇ.ಓ,ದಯಾನಂದ್,ಮೀನುಗಾರಿಕೆ ಸಹಾಯಕ ನಿರ್ದೇಶಕ ಸಚಿನ್, ತಾ.ಪಂ.ಉಪಾಧ್ಯಕ್ಷೆ ಬೀಬೀ ಫಾತೀಮಾ,ತಾ.ಪಂ.ಸದಸ್ಯೆ ಕವಿತಾಪ್ರಕಾಶ್,ಗ್ರಾ.ಪಂ. ಉಪಾಧ್ಯಕ್ಷೆ ವೆಂಕಟಮ್ಮ,ಸದಸ್ಯರಾದ ಆಶೋಕ್ ಬಾಬು,ಅಹಮದ್ ಖಾನ್,ಮುಖಂಡರಾದ ಪ್ರಸನ್ನ,ಕಲ್ಪತರು ಕೋ ಅಪರೇಟೀವ್ ಬ್ಯಾಂಕ್ ನ ಅಧ್ಯಕ್ಷ ನಟರಾಜು,ತಾ.ಪಂ.ಮಾಜಿಸದಸ್ಯ ರುದ್ರೇಶ್,ಜಿ.ಪಂ.ಮಾಜಿಸದಸ್ಯ ಈರಣ್ಣ ಸೆರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ