ಇದೇ ತಿಂಗಳ 29ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಅವರು ಚುನಾವಣ ಪ್ರಚಾರಕ್ಕಾಗಿ ಕರ್ನಾಟದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು,ಈ ಹಿನ್ನಲೆಯಲ್ಲಿ ಗುರುವಾರ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನ ಬಸವಮುರ್ತಿಯವರ ಮನೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮೇಲ್ಕಂಡಂತೆ ನುಡಿದರು.
ಅವರು ಹೇಳಿದಿಷ್ಟು:- ಕನ್ನಡ ನಾಡು ನುಡಿ ಕಟ್ಟುವ ಕಾರ್ಯ ಆಗಬೆಕಿದ್ದು,ಅದಕ್ಕಾಗಿ ಎಲ್ಲರ ಶ್ರಮ ಅತ್ಯಗತ್ಯವಾಗಿದೆ.ವಾಸ್ತವವಾಗಿ ನೋಡಿದರೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕನ್ನಡ ಸಾಹಿತ್ಯ ಪರಿಷತ್ ಗೆ ಯಾವುದೇ ರೀತಿಯ ಅನುದಾನಗಳನ್ನು ಕಡಿಮೆ ಮಾಡಿಲ್ಲ,ಆದರೆ ಅದನ್ನು ಕೇಳಿ ಪಡೆಯಬೇಕಿದೆ.ಅಂತಹ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಗಬೇಕಿದೆ.ಅಲ್ಲದೆ ಸಮಕಾಲೀನ ಸಾಹಿತ್ಯದ ಎಲ್ಲಾ ಧಾರೆಗಳಿಗೆ ಅವಕಾಶ ನೀಡಿ,ಯುವ ಬರಹಗಾರರಿಗೆ ವೈವಿದ್ಯಮಯ ಕಾರ್ಯಕ್ರಮ ರೂಪಿಸಬೇಕು .ಸಾರ್ವಜನಿಕವಾಗಿ ಕನ್ನಡ ಬದುಕಿನ ಪ್ರಮುಖ ಹಿತಾಸಕ್ತಿಗಳ ಪ್ರತಿಪಾದನೆಯನ್ನು ಹಾಗೂ ಅವುಗಳ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಪರಿಷತ್ತನ್ನು ಒಂದು ಬಲಾಡ್ಯ ಪ್ರಜಾಸತ್ತಾತ್ಮಕ ವೇದಿಕೆಯನ್ನಾಗಿ ರೂಪಗೊಳ್ಳಬೇಕು,ಕೇಂದ್ರ ಕ.ಸಾಪ ಆವರಣಾದಲ್ಲಿ ಪುಸ್ತಕ ಸಂತೆಗೆ ಮರು ಚಾಲನೆ ನೀಡೂವುದಲ್ಲದೆ ಇದನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಬೇಕು.ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಾದೇಶಿಕ ಸಾಮಾಜಿಕ ಪ್ರಾತಿನಿಧ್ಯ ನೀಡಬೇಕಿದ್ದು, ಎಲ್ಲಾಸ್ಥರಗಳಲ್ಲಿ ಮಹಿಳೆಯರಿಗೆ ಸಮಾನ ಪಾಲುದಾರಿಕೆ ನೀಡಬೆಕು ಎಂದು ಪ್ರತಿಪಾದಿಸಿದರು.ಚುನಾವಣೆಯಲ್ಲಿ ಯಾರೊಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದರೆ ನಾನು ಅವರಿಗೆ ಸ್ಥಾನವನ್ನು ಬಿಟ್ಟುಕೊಡಲು ಸಿದ್ದನಿದ್ದೇನೆಂದು ಈ ಸಂದರ್ಭದಲ್ಲಿ ನುಡಿದರು..
ಈ ಸಂಧರ್ಭದಲ್ಲಿ 150ಕ್ಕೂ ಹೆಚ್ಚು ಅಜೀವ ಸದಸ್ಯರನ್ನೊಳಗೊಂಡಿರುವ ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದಲ್ಲಿನ ಚುನಾವಣಾ ಮತಕೇಂದ್ರವನ್ನು ರದ್ದು ಮಾಡಿರುವ ವಿಷಯವನ್ನು ತ.ಶಿ.ಬಸವಮೂರ್ತಿಗಳು ಚಂಪಾಅವರ ಗಮನಕ್ಕೆ ತಂದರು.ಕಳೆದ ಬಾರಿ ಮತದಾನಕ್ಕೆ ಅವಕಾಶ ನೀಡಿ ಇದೀಗ 150ಕ್ಕೂ ಹೆಚ್ಚು ಅಜೀವ ಸದಸ್ಯರನ್ನೊಳಗೊಂಡಿದ್ದರೂ ಸಹ ಮತಕೇಂದ್ರವನ್ನು ರದ್ದು ಮಾಡಿರುದು ಖಂಡಿನೀಯ. ಈ ಬಗ್ಗೆ ಚುನಾವಣಾಧಿಕಾರಿಗಳಲ್ಲಿ ವಿಚಾರಿಸಿ ಅವಕಾಶ ನೀಡುವುದಾಗಿ ತಿಳಿಸಿದರು.ಅಲ್ಲದೆ ಹೋಬಳಿಯ ಎಲ್ಲಾ ಸದಸ್ಯರಿಂದ ಸಹಿಯನ್ನು ಸಂಗ್ರಹಿ ಚುನಾವಣಾ ಸಮಿತಿಗೆ ಸಲ್ಲಿಸುವಂತೆ ತಿಳಿಸಿದ ಅವರು ಸದಾ ತಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು..
ಪುಸ್ತಕ ಮನೆಯ ಹರಿಹರ ಪ್ರಿಯ ಹಾಗೂ ಮಧುಬಿಲ್ಲಿನ ಕೋಟೆ ಅವರು ಚಂಪಾರವರು ನಡೆದು ಬಂದ ಹಾದಿ ಹಾಗೂ ಅವರ ಹೋರಾಟಗಳ ಬಗ್ಗೆ ತಿಳಿಸಿದರು.ಹೋಬಳಿ ಸಾಹಿತ್ಯ ಪರಿಷತ್ ನ ರಾಮಯ್ಯ,ತ.ಶಿ.ಬಸವಮೂರ್ತಿ,ಏಜೆಂಟ್ ಗಂಗಣ್ಣ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ