ಮಡಲಕ್ಕಿ ಸೇವೆಯೊಂದಿಗೆ ದುರ್ಗಮ್ಮನ ಜಾತ್ರೆಗೆ ತೆರೆ
ಇಲ್ಲಿನ ಗ್ರಾಮದೇವತೆ ದುರ್ಗಾಪರಮೇಶ್ವರಿದೇವಿಯ 42ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಭಾನುವಾರ ಗ್ರಾಮಸ್ಥರಿಂದ ಮಡಲಕ್ಕಿ ಸೇವೆ ಕಾರ್ಯ ನಡೆಯುವ ಮೂಲಕ ತಾ.7ರ ಶನಿವಾರ ರಿಂದ ತಾ.14ರ ಶನಿವಾರವರೆಗೆ ನಡೆದ ಎಂಟು ದಿನಗಳ ಕಾಲದ ಜಾತ್ರೆಗೆ ತೆರೆ ಎಳೆಯಲಾಗಿದೆ.
ಜಾತ್ರೆಯುದ್ದಕ್ಕೂ ಪ್ರತಿನಿತ್ಯ ವಿವಿಧ ಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ಕೈಗೊಂಡಿದ್ದು, ನೂರಾರು ಭಕ್ತರು ಆಗಮಿಸಿದ್ದರು. ತಾ.8ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದಲ್ಲಿ ಮಡಲಕ್ಕಿ ಸೇವೆ ನಡೆದು,ತಾ.9ರ ಸೋಮವಾರ ಅಮ್ಮನವರಿಗೆ ಎಡೆಸೇವೆ,ಧ್ವಜಾರೋಹಣ ಮತ್ತು ಅಂಕುರಾಪಣೆ ಕಾರ್ಯಗಳು ಹಾಗೂ ತಾ.10ರ ಮಂಗಳವಾರ ಆರತಿಬಾನ,ಎಡೆಸೇವೆ,ತಾ.11ರ ಬುಧವಾರ ರಾತ್ರಿ ಹುಳಿಯಾರಮ್ಮ,ಕೆಂಚಮ್ಮ,ಹೊಸಳ್ಳಿ ಕೊಲ್ಲಾಪುರದಮ್ಮ,ಗೌಡಗೆರೆ ದುರ್ಗಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಕೂಡು ಭೇಟಿ ಕಾರ್ಯ , ತಾ.12ರ ಗುರುವಾರ ಬೆಳಗಿನ ಜಾವ ಕಳಸ ಸ್ಥಾಪನೆ ಹಾಗೂ ಕಳಸೋತ್ಸವ ಹಾಗೂ ರಾತ್ರಿ ಅಮ್ಮನವರ ಉಯ್ಯಾಲೆ ಉತ್ಸವ ನಡೆದು, ತಾ.13ರ ಶುಕ್ರವಾರ ಬೆಳಿಗ್ಗೆಯಿಂದ ನಾಗರಾಜು ಅರ್ಚಕರ ನೇತೃತ್ವದಲ್ಲಿ ದುರ್ಗಾಹೋಮ,108 ತೆಂಗಿನಕಾಯಿ ಗಣಹೋಮ, ಕಲಾವೃದ್ದಿ ಹೋಮದೊಂದಿಗೆ ಪುರ್ಣಾಹುತಿ ಕಾರ್ಯ ಹಾಗೂ ಮಧ್ಯಾಹ್ನ ಅಮ್ಮನವರ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.ಅಲ್ಲದೆ ದೇವಿಮಹಾತ್ಮೆ ಸಂಘದವರು ದೇವಿಮಹಾತ್ಮೆ, ಯಕ್ಷಗಾನ ಪೌರಾಣಿಕ ನಾಟಕವನ್ನು ಅಭಿನಯಿಸಿದರು. ತಾ.14ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ ನಡೆದು,ಕಂಕಣ ವಿಸರ್ಜನೆ ಕಾರ್ಯ , ತಾ,15ರ ಭಾನುವಾರ ಗ್ರಾಮಸ್ಥರಿಂದ ಆಗಮಿಸಿದ್ದ ದೇವರುಗಳಿಗೆ ಮಡಲಕ್ಕಿ ಸೇವೆ ನಡೆಯುವುದರೊಂದಿಗೆ ಜಾತ್ರೆಗೆ ತೆರೆಎಳೆಯಲಾಯಿತು.
ಜಾತ್ರಾಮಹೋತ್ಸವದಲ್ಲಿ ಬೆಂಗಳೂರಿನ ಕಾಡಿಗಾನಹಳ್ಳಿಯ ಸುಬ್ರಹ್ಮಣಿಯವರಿಂದ ಅನ್ನಸಂತರ್ಪಣೆ,ಗೋಲ್ಡನ ಫ್ರೆಂಡ್ಸ್ ಗ್ರೋಪ್ ಅವರಿಂದ ಮಜ್ಜಿಗೆ,ಪನಿವಾರ ವಿತರಣೆ ನಡೆಯಿತು.ಒಟ್ಟಾರೆ ಸುಡುಬಿಸಿಲನ್ನು ಲೆಕ್ಕಿಸದೇ ದೂರದೂರುಗಳಿಂದ ಭಕ್ತಾಧಿಗಳು ಆಗಮಿಸಿ,ದುರ್ಗಮ್ಮನ ಕೃಪಾಶೀರ್ವಾದಕ್ಕೆ ಬಾಜನರಾದರು.
ಸೀಗೇಬಾಗಿ ವರದರಾಜಸ್ವಾಮಿ ಜಾತ್ರೆಗೆ ಚಾಲನೆ
ಹೋಬಳಿ ಸೀಗೆಬಾಗಿಯ ಶ್ರೀ ವರದರಾಜ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಿಯ 19 ನೇ ವರ್ಷದ ಜಾತ್ರಾಮಹೋತ್ಸವಕ್ಕೆ ಸೋಮವಾರ ಮೂಲದೇವರಿಗೆ ಪುಣ್ಯಾಹ,ಪಂಚಾಮೃತ ಅಭಿಷೇಕ,ಮಹಾಮಂಗಳಾರತಿ ಹಾಗೂ ಮದುವಣಗಿತ್ತಿಕಾರ್ಯ ನಡೆಸುವುದರೊಂದಿಗೆ ಚಾಲನೆಗೊಂಡಿದೆ.
ತಾ.17ರ ಮಂಗಳವಾರ ಆರತಿಬಾನ,ಘಟೆಪೂಜೆ ನಡೆದು,ಕಲಸ ಹೊತ್ತ ಸುಹಾಸನಿಯರನ್ನು ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮೂಲಸ್ಥಾನಕ್ಕೆ ಕರೆದೊಯ್ಯುವುದು,ತಾ.18ರ ಬುಧವಾರ ಗೋಪಾಲಪುರದ ಆಂಜನೇಯಸ್ವಾಮಿ,ಕರಿಯಮ್ಮ,ಲಕ್ಷ್ಮಿಪುರದ ಲಕ್ಷ್ಮಮ್ಮ,ನಿರುಗಲ್ ಆಂಜನೇಯ,ದುರ್ಗಮ್ಮ,ತೊರೆಮನೆ ಕರಿಯಮ್ಮ,ಹೊಸಳ್ಳಿ ಪಾಳ್ಯದ ಅಂತರಘಟ್ಟೆ ಅಮ್ಮ,ನವರ ಆಗಮನದೊಂದಿಗೆ ಕೂಡು ಭೇಟಿ,ನಂತರ ಸಹಸ್ರನಾಮ ಪೂಜೆ,ಗಂಗಾಸ್ನಾನ,ಕಲಶ ಪೂಜೆ ನಡೆದು ಹೊಳೆಯಿಂದ ಮಡಿ ಹಾಸಿನ ಮೇಲೆ ನಡೆಮುಡಿಯಲ್ಲಿ ಕೊಂಬು,ಕಹಳೆ ಹರೆವಾದ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ.
ತಾ.19ರ ಗುರುವಾರ ಬೆಳಿಗ್ಗೆ ಓಕಳಿ ಸೇವೆ,ಮಹಾಮಂಗಳಾರತಿ,ಪ್ರಸಾದ ವಿನಿಯೋಗ ನಡೆದು,ಆಗಮಿಸಿದ್ದ ದೇವರುಗಳ ಬಿಳ್ಕೊಡುಗೆ ಕಾರ್ಯ ನಡೆಯಲಿದೆ,ಅಲ್ಲದೆ ಪ್ರತಿನಿತ್ಯ ಸೋಬಾನೆ ಪದ,ಆರತಿ ಪದ,ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದ್ದು,ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ