ಹೋಬಳಿ ಜೋಡಿತಿರುಮಾಲಾಫುರದ ಗ್ರಾಮದೇವತೆ ಶ್ರೀ ಕೋಲ್ಲಾಪುರಿ ಮಹಾಲಕ್ಷ್ಮಿಯ ಜಾತ್ರಾಮಹೋತ್ಸವ ಏ.28ರ ಶನಿವಾರ ಆಂಜನೇಯಸ್ವಾಮಿಗೆ ರುದ್ರಾಭಿಷೇಕ,ನೂರೊಂದೆಡೆ ಸೇವೆಯೊಂದಿಗೆ ಪ್ರಾರಂಭಗೊಂಡಿದ್ದು, ಮೇ.6ರಭಾನುವಾರದವರೆಗೆ ಒಂದು ವಾರಗಳ ಕಾಲ ನಡೆಯಲಿದೆ.
ಏ.29, 30 ರಂದು ಅಮ್ಮನವರಿಗೆ ಹಾಗೂ ಸ್ವಾಮಿಗೆ ವಿವಿಧ ಪೂಜೆ ಕಾರ್ಯಗಳು ನಡೆಯಲಿದ್ದು,ಮೇ.1ರ ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ ಕಾರ್ಯ,ಸಂಜೆ ಹನುಮಂತಯ್ಯನವರ ಮನೆಯಲ್ಲಿ ಅಮ್ಮನವರು ಮದುವಣಗಿತ್ತಿಯಾಗಿ ಆರತಿಬಾನದೊಂದಿಗೆ ಮೂಲಸ್ಥಾನಕ್ಕೆ ಬರುವ ಕಾರ್ಯ.ಮೇ.2ರ ಬುಧವಾರ ಹೊಸಳ್ಳಿ ಕೊಲ್ಲಾಪುರದಮ್ಮ,ಪಾಳ್ಯದ ಅಂತರಘಟ್ಟೆಯಮ್ಮ,ಹುಳಿಯಾರು ದುರ್ಗಮ್ಮನವರ ಆಗಮನದೊಂದಿಗೆ ಕೂಡು ಬೇಟಿ ನಡೆದು,ಚಂದ್ರಮೌಳೀಶ್ವರ ದೇವಾಲಯದಲ್ಲಿ ಆಗಮಿಸಿದ್ದ ದೇವರುಗಳಾನ್ನು ಬಿಜಯಂಗೈಯುವುದು.ಮೇ.3ರ ಗುರುವಾರ ಬೆಳಿಗ್ಗೆ ಕಳಸ ಸ್ಥಾಪನೆ ಹಾಗೂ ಅಮ್ಮನವರಿಗೆ ಗಂಗಾಸ್ನಾನ ನಡೆದು,ನೆಡಮುಡಿಯೊಂದಿಗೆ ಊರ ಹೊರಗಿನ ದೇವಸ್ಥಾನಕ್ಕೆ ದಯಮಾಡಿಸಿ,ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮೇ.4ರ ಶುಕ್ರವಾರ ಬೆಳಿಗ್ಗೆ 11.30ಕ್ಕೆಅಮ್ಮನವರ ಬ್ರಹ್ಮರಥೋತ್ಸವ ಜರುಗಿ,ಪಾನಕ ಪನಿವಾರ ವಿತರಣೆ ನಡೆಯಲಿದೆ.ಇದೇ ದಿನ ಸಂಜೆ ತುಮಕೂರಿನ ಜ್ಯೋತಿ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಮೇ.5ರ ಶನಿವಾರ ಬೆಳಿಗ್ಗೆ ಸಿಡಿ ಉತ್ಸವ ನಡೆದು,ನಂತರ ಓಕಳಿಭಂಡಾರ ಸೇವೆ ನಡೆಯಲಿದೆ.ಮೇ.6ರ ಭಾನುವಾರ ಗ್ರಾಮದಲ್ಲಿ ಮಡಲಕ್ಕಿ ಸೇವೆ ನಡೆದು,ಆಗಮಿಸಿದ್ದ ದೇವರುಗಳ ಬಿಳ್ಕೊಡುಗೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ