ವಿಡಿಯೋ ಸಿ.ಡಿ ಬಿಡುಗಡೆ ಮಾಡಿ ಮಾತನಾಡಿದ ಅವರು,ಈ ಸಿಡಿಯು ಎನ್.ಎಸ್.ಎಸ್ ಶಿಬಿರದಲ್ಲಿ ಶಿಬಿರಾರ್ಥಿಗಳ, ಶಿಬಿರಾಧಿಕಾರಿಗಳ ಹಾಗೂ ಶಿಬಿರಕ್ಕೆ ಆಗಮಿಸಿದ್ದ ಅತಿಥಿಗಳ ಅನುಭವಗಳಾನ್ನು ಶಾಶ್ವತವಾಗಿರಿಸುವುದರ ಜೊತೆಗೆ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರ್ಗದರ್ಶಕವಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಕನ್ನಡ ಉಪನ್ಯಾಸಕ ಎಸ್.ಶಂಕರಲಿಂಗಯ್ಯ ಮಾತನಾಡಿ, ಹಿಂದಿನ ಭವ್ಯ ಸ್ಮಾರಕಗಳಿಂದ ಇಂದು ನಾವು ಅಂದಿನ ಇತಿಹಾಸ,ಸಂಸ್ಕೃತಿಯನ್ನು ಹಾಗೂ ನಾಗರೀಕತೆಯ ವಾಸ್ತವ ಚಿತ್ರಣವನ್ನು ತಿಳಿಯುತ್ತಿದ್ದೇವೆ.ಅದರಂತೇ ಹಿಂದೆ ನಡೆದು ಹೋದ ವಿಷಯಗಳ ಬಗ್ಗೆ ಮುಂದಿನವರಿಗೆ ತಿಳಿಸಬೇಕಾದರೆ ಇಂತಹ ಕುರುಹುಗಳು ಅತ್ಯಗತ್ಯ.ಈ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರದ ವಿಡಿಯೋ ಸಿ.ಡಿ. ಎನ್.ಎಸ್.ಎಸ್ ಶಿಬಿರದಲ್ಲಿನ ವಿವಿಧ ಕಾರ್ಯ ಚಟುವಟಿಕೆಗಳನ್ನು,ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ತಿಳಿಯುವಂತೆ ಮಾಡಿ,ವಿದ್ಯಾರ್ಥಿಗಳಲ್ಲಿ ನಿರಂತರ ರಾಷ್ಟ್ರೀಯ ಸೇವಾ ಮನೋಭಾವ ಮೂಡಲು ಪ್ರೇರಣೆಯಾಗಿದೆ ಎಂದು ತಿಳಿಸುತ್ತಾ,ಈ ಶಿಬಿರದ ಯಶಸ್ವಿಗೆ ಸಹಕಾರಿಯಾದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಎನ್.ಎಸ್.ಎಸ್ ಶಿಬಿರಾಧಿಕಾರಿಗಳಾದ ಸಯ್ಯದ್ ಇಬ್ರಾಹಿಂ,ಜಯಪ್ರಕಾಶ್,ಉಪನ್ಯಾಸಕ ಹನುಮಂತಯ್ಯ ಹಾಜರಿದ್ದ ಸಮಾರಂಭದಲ್ಲಿ ,ವಿದ್ಯಾರ್ಥಿನಿ ಕಾವ್ಯ ಪ್ರಾರ್ಥಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ