ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ತಾ.25ರ ಬುಧವಾರ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಂಗವಾಗಿ ಹೋಬಳಿಯ ಪರಿವೀಕ್ಷಣ ಮಂದಿರದಲ್ಲಿ ನಡೆದ ಪತ್ರಿಕಾ ಬೇಟಿಯಲ್ಲಿ ಹಾಜರಿದ್ದ ರೈತಸಂಘ ಹಾಗೂ ಹಸಿರು ಸೇನೆಯವರು.
ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ಭೀಕರ ಬರಗಾಲ ಉಂಟಾಗಿದ್ದು,ಜನ,ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ,ಆಹಾರ,ಮೇವಿನ ಕೊರತೆಯುಂಟಾಗಿರುವುದ ಜೊತೆಗೆ ಕೃಷಿ ಮಾಡಲು ನೀರಿನ ಸೌಲಭ್ಯವಿಲ್ಲದೆ ಕಂಗಾಲಾಗಿರುವ ರೈತರು ದನಕರುಗಳನ್ನು ಖಸಾಯಿಖಾನೆಗೆ ಕೊಟ್ಟು, ತಮ್ಮ ಪ್ರದೇಶಗಳನ್ನು ತೊರೆದು ಗುಳೆ ಹೋಗುತ್ತಿದ್ದರೂ ಸಹ ಸರ್ಕಾರ ಇದರ ಕಡೆ ಗಮನ ಹರಿಸಿಲ್ಲ,ನಮ್ಮ ರೈತರ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆಗೆ ಹಾಕುವುದಾಗಿ ಜಿಲ್ಲಾ ಹಸಿರು ಸೇನೆಯ ಕೆಂಕೆರೆ ಸತೀಶ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯಿಂದ ತಾ.25ರ ಬುಧವಾರ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನಲೆಯಲ್ಲಿ ಹೋಬಳಿಯ ಪರಿವೀಕ್ಷಣ ಮಂದಿರದಲ್ಲಿ ನಡೆದ ಪತ್ರಿಕಾ ಬೇಟಿಯಲ್ಲಿ ಅವರು ತಿಳಿಸಿದರು.
ರೈತರ ಸಂಕಷ್ಟವನ್ನು ತಿಳಿಯದ ಮುಖ್ಯಮಂತ್ರಿಗಳು ತಮ್ಮ ಖುರ್ಚಿಯನ್ನು ಬಲಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ,ಅಲ್ಲದೆ ಕೃಷಿಗೆ ಸಂಬಂಧಿಸಿದ ನೀರಾವರಿ,ತೋಟಗಾರಿಕೆ,ವಿದ್ಯುತ್ ಚ್ಚಕ್ತಿ ವಿಭಾಗದ ಮಂತ್ರಿಗಳು ಉತ್ತಮ ಕಾರ್ಯ ಮಾಡುವಲ್ಲಿ ವಿಫಲಾವಾಗಿದ್ದು, ಆಡಳಿತ ಯಂತ್ರ ತನ್ನ ದಿಕ್ಕನೇ ಬದಲಿಸಿದ್ದು, ತನ್ನ ಪ್ರಗತಿಯನ್ನು ಕಾಣದೇ ಹೋಗಿದೆ. ಬರಗಾಲದ ಸ್ಥಳಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೆಕೆಂಬ ಪ್ರಜ್ಞೆಯೂ ಸಹ ಅವರಿಗಿಲ್ಲವೆಂದು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ನೆರವಾದ ನೀತಿಗಳನ್ನು ಅನುಸರಿಸುತ್ತಿದ್ದು,ಜಾಗತಿಕ ಕೃಷಿ ಬಂಡವಾಳ ಹೂಡಿಕೆ ಸಮಾವೇಶ ಮಾಡುವ ನಿಟ್ಟಿನಲ್ಲಿ ನಮ್ಮ ಕೃಷಿಕರನ್ನು ಹಾಗೂ ಕೃಷಿ ಪರಂಪರೆಯನ್ನು ಕಿತ್ತೊಗೆಯುವ ಕ್ರೌರ್ಯ ಕೆಲಸಮಾಡಿದಲ್ಲದೆ,ಕರ್ನಾಟಕವನ್ನೇ ಖಾಸಗಿ ಕಂಪನಿಗಳಿಗೆ ಮಾರಲು ಮುಂದಾಗಿರುವ ಸರ್ಕಾರಕ್ಕೆ ನಮ್ಮ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಿಳಿಸುವ ಸಲುವಾಗಿ ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಏರ್ಪಡಿಸಿರುವುದಾಗಿ ತಿಳಿಸಿದರು.
ಸರ್ಕಾರದ ಮುಂದಿರುವ ಕೆಲವು ರೈತರ ಬೇಡಿಕೆಗಳು: ಬರಗಾಲ ಪ್ರದೇಶದ ರೈತರ ಟ್ಯ್ರಾಕ್ಟರ್ ಹಾಗೂ ಇತರ ಸಾಲಮನ್ನ ಹಾಗೂ ಮರುಸಾಲ,ಪ್ರತಿ ಜಿಲ್ಲೆಗೆ 5ಕೋಟಿ ಹಣ ಬಿಡುಗಡೆ ಮತ್ತು ಜನಗಳಿಗೆ ಉದ್ಯೋಗ,ಜಾನುವಾರುಗಳಿಗೆ ಗೋಶಾಲೆ,ಮೇವು,ನೀರಿನ ಸೌಲಭ್ಯ ಒದಗಿಸುವುದು.ಶುಲ್ಕವಿಲ್ಲದೆ ರೈತರ ಪಂಪ್ ಸೆಟ್ ಸಕ್ರಮಗೋಲಳಿಸುವುದು,ಮುಂಗಾರಿಗೆ ಬೇಕಾದ ಗೊಬ್ಬರದ ದಾಸ್ತಾನು,ಬಿತ್ತನೆ ಬೀಜಗಳು ನೇರವಾಗಿ ರೈತರಿಗೆ ದೊರೆಯುವಂತೆ ಮಾಡುವುದು,ರೇಷ್ಮೆ ಬೆಳೆಗೆ 350ರೂ ದರ ನಿಗಧಿ,ಡಾ.ಪರಮಶೀವಯ್ಯ ಅವರ ವರದಿಯಂತೆ1,2,3ನೇ ಯೋಜನೆಗಳ ಜಾರಿ,ತರಕಾರಿ ಬೆಳೆಗಳಿಗೆ ಬೆಂಬಲ ಬೆಲೆ ಕಲ್ಪಿಸುವುದು,ಅಧಿಕಾರಿಗಳಿಂದ ಆಗುತ್ತಿರುವ ಮರಳು ಲೂಟಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು,ಪ್ರತಿ ಲೀ.ಹಾಲಿಗೆ ರೂ.30 ದರ ಕೊಡಬೇಕು ಅಲ್ಲದೆ ರೈತರ ಸಂಕಷ್ಟವನ್ನು ಗಮನಿಸಿ ಅವರಿಗೆ ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಂದು ತಮ್ಮ ಬೇಡಿಕೆಗಳನ್ನೊಳಗೊಂಡಂತೆ ತಾ.25ರ ಬುಧವಾರ ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದಾರೆ.ಅಲ್ಲದೆ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆಯನ್ನು ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಗೌರವಾಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ,ತಾಲ್ಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್,ಉಪಾಧ್ಯಕ್ಷ ಗಂಗಣ್ಣ,ಕಾರ್ಯದರ್ಶಿ ಮರುಳಪ್ಪ,ಟ್ರಾಕ್ಟರ್ ಮಾಲೀಕ ಸಂಘದ ನಾಗರಾಜು,ಶಾಂತಣ್ಣ,ಹೋಬಳಿ ಸಂಘದ ಅಧ್ಯಕ್ಷ ಟಿ.ಎಸ್.ಮಲ್ಲಿಕಾರ್ಜುನಯ್ಯ ಸೇರಿದಂತೆ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ