ಹೋಬಳಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶನಿವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ 121ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಈ ಸಂಧರ್ಭದಲ್ಲಿ ಎಬಿವಿಪಿ ಹೋಬಳಿ ಘಟಕದ ಅಧ್ಯಕ್ಷ ನರೇಂದ್ರಬಾಬು ಮಾತನಾಡಿ, ಸಮಾಜದಲ್ಲಿ ಸಮಾನತೆನ್ನು ತಂದು ಜಾತ್ಯಾತೀತತೆಯನ್ನು ಹೋಗಲಾಡಿಸಿ,ಅಸಮಾನತೆಯನ್ನು ತೊಲಗಿಸಲು ಅಂಬೇಡ್ಕರ್ ಹಾಕಿದ ಶ್ರಮದ ಪ್ರತಿಫಲವೇ ನಮ್ಮ ಸಂವಿಧಾನವಾಗಿದೆ. ಸಂವಿಧಾನ ರಚನೆ ಕಾರ್ಯದಲ್ಲಿ ಅನೇಕ ಎಡರು ತೊಡರುಗಳನ್ನು ಅನುಭವಿಸಿ,ಹಲವು ದೇಶಗಳ ಸಂವಿಧಾನಗಳನ್ನು ಅಭ್ಯಾಸಿಸಿ,ಭಾರದ ಬೃಹತ್ ಸಂವಿಧಾನವನ್ನು ರಚಿಸುವ ಮೂಲಕ ಸಂವಿಧಾನದ ಶಿಲ್ಪಿ ,ನೇತಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅವರೇ ಡಾ
ಬಿ.ಆರ್.ಅಂಬೇಡ್ಕರ್.ಇವರು ಹಾಕಿ ಕೊಟ್ಟಿರುವ ಸಂವಿಧಾನದ ಮಾರ್ಗವನ್ನು ಸರಿಯಾಗಿ ಉತ್ತಮ ರೀತಿಯಲ್ಲಿ ಅನುಸರಿಸಿಕೊಂಡು ಹೋಗಬೇಕಾದ್ದು ಭಾರತೀಯರಾದ ನಮ್ಮೆಲರ ಹೊಣೆಯಾಗಿದೆ ಎಂದರು.
ಟಿಪ್ಪುಸಂಘದ ಉಪಾಧ್ಯಕ್ಷ ಅಪ್ಸರ್ ಅಲಿ ಮಾತನಾಡಿ ರಾಷ್ಟ್ರದಲ್ಲಿ ಸಮಾನತೆಯನ್ನು ತರುವ ದೃಷ್ಠಿಯಿಂದ ಹಾಗೂ ಜನರಲ್ಲಿ ತಾವೆಲ್ಲ ಒಂದೇ, ನಮ್ಮಲ್ಲಿ ಯಾವುದೇ ಭೇದ ಭಾವವಿಲ್ಲ ಎಂಬ ಮನೋಭಾವವನ್ನು ಮೂಡಿಸುವ ನಿಟ್ಟಿನಲ್ಲಿ , ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಸಮಾಜದಿಂದ ಕಿತ್ತೆಸೆಯಲು ಮುಂದಾದ ಅಂಬೇಡ್ಕರ್ ಪ್ರಪಂಚದಲ್ಲೇ ಉತ್ತಮವಾದ ಲಿಖಿತ ಸಂವಿಧಾನವನ್ನು ಜಾರಿಗೆತಂದಿದ್ದಾರೆ.ಅಂಬೇಡ್ಕರ್ ಜಯಂತಿಯನ್ನು ಎಬಿವಿಪಿಯವರು ಅಚರಿಸಿ, ಅಂಬೇಡ್ಕರಂತೆ ತಾವು ದೇಶದಲ್ಲಿ ಅಸಮಾನತೆಯನ್ನು ನಿವಾರಿಸಲು ಸಿದ್ದವೆಂಬುದನ್ನು ವ್ಯಕ್ತಪಡಿಸಿದ್ದಾರೆ.
ಎಬಿವಿಪಿ ಪದಾದಿಕಾರಿಗಳಾದ ಹೊನ್ನಪ್ಪ,ಕಿರಣ್,ಇಮ್ರಾನ್,ಅರುಣ್,ದೇವರಾಜು,ಪ್ರಭಾಕರ್,ಶಾಹಿದ್,ರವಿರಾಜು,ಜಾಫರ್ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ