ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಬಿಎಂನ ನಿಸರ್ಗ ತಂಡದ ವಿದ್ಯಾರ್ಥಿಗಳು ಆಯೋಜಿಸಿದ್ದ ಸೊಷಿಯಲ್ ಡೇ ಸಮಾರಂಭದಲ್ಲಿ ಹಿರಿಯ ಉಪನ್ಯಾಸಕ ಆರ್.ಮೂಗೇಶಪ್ಪ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.ಪ್ರಾಚಾಯ್ರ ಎಂ.ಎನ್.ನಾಗರಾಜು ಹಾಗೂ ಇತರ ಉಪನ್ಯಾಸಕರಿದ್ದಾರೆ.
ಪಟ್ಟಣದ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಬಿಎಂ ವಿದ್ಯಾರ್ಥಿಗಳು 2011-12 ನೇ ಸಾಲಿನ ಸೊಷಿಯಲ್ ಡೇ ಸಂತೋಷಕೂಟ ಸಮಾರಂಭವನ್ನು ವಿಶಿಷ್ಟವಾಗಿ ಆಚರಿಸಿದರು. ಪ್ರಾಂಶುಪಾಲರಾದ ಎಂ.ಎಸ್.ನಾಗರಾಜು ಸಮಾರಂಭದ ಉದ್ಘಾಟನೆ ನೆರವೇರಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಉಪನ್ಯಾಸಕರಾದ ಪ್ರೋ.ಆರ್.ಮೂಗೇಶಪ್ಪ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಸಮಾರಂಭದಲ್ಲಿ ಎಂ.ಎನ್.ನಾಗರಾಜು ಹಾಗೂ ಮೂಗೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಉಪನ್ಯಾಸಕರು ಹಾಗೂ ಎನ್,ಎಸ್,ಎಸ್,ಅಧಿಕಾರಿ ಶಂಕರಲಿಂಗಯ್ಯ,ಇಬ್ರಾಹಿಂ,ಶ್ರೀನಿವಾಸ್ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರು.ಕುಮಾರಿ ಸುಷ್ಮಾ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ