ಸಮೀಪದ ಚಿಕ್ಕನಾಯಕನಹಳ್ಳಿ ಗಡಿ ಭಾಗವಾದ ಹೋಸದುರ್ಗ ತಾಲ್ಲೂಕು ಮತ್ತೋಡು ಹೋಬಳಿಯ ದೊಡ್ಡಬ್ಯಾಲದಕೆರೆ ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯದ ಕಳಸ ಸ್ಥಾಪನೆ ಹಾಗೂ ಪ್ರಾರಂಭೋತ್ಸವದ ಅಂಗವಾಗಿ ಇಂದು (ತಾ.29) ಭಾನುವಾರ ಬೆಳಿಗ್ಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಲಿರುವ ಧಾರ್ಮಿಕ ಸಭೆಯಲ್ಲಿ ಭೂದಿಹಾಲ್ ವಿರಕ್ತಮಠದ ಶ್ರೀ ರಾಜಶೇಖರ ಸ್ವಾಮಿಯವರು ಅಧ್ಯಕ್ಷತೆವಹಿಸಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ವಿಪುಲ್ ಬನ್ಸಾರ್,ಜಿಲ್ಲಾ ಅಧೀಕ್ಷಕ ಲಾಭುರಾಂ,ತಹಶೀಲ್ದಾರ್ ಬಾಲಕೃಷ್ಣ,ಸಿ.ಪಿ.ಐ.ರವಿಪ್ರಸಾದ್, ಪಿಎಸೈ ರಮೇಶ್ ಕುಲಕರ್ಣಿ,ಮಾಜಿ ಶಾಸಕರಾದ ಮಾಧುಸ್ವಾಮಿ,ಕೆ.ಎಸ್.ಕಿರಣ್ ಕುಮಾರ್,ಇಲ್ಕಲ್ ವಿಜಯ್ ಕುಮಾರ್,ಲೋಕಸಭಾ ಸದಸ್ಯ ಜನಾರ್ಧನಸ್ವಾಮಿ,ಎಂ.ಎಲ್,ಸಿ ನಾರಾಯಣಸ್ವಾಮಿ,ತಿಪ್ಪಾರೆಡ್ಡಿ,ಜಿಲ್ಲಾ ಪಂಚಾಯ್ತ ಸದಸ್ಯ ಪರುಶುರಾಮಪ್ಪ,ಮಾಜಿ ಸದಸ್ಯ ಜಯಣ್ಣ,ಹೊಸದುರ್ಗ ಬೆಸ್ಕಾಂನ ಎಇಓ ಡಿ.ಜಯಣ್ಣ, ರವಿ ಮಿನರಲ್ಸ್ ನ ಪುಟ್ಟಸ್ವಾಮಿ ಗೌಡ ಹಾಗೂ ಸುಶೀಲಮ್ಮನವರು,ಬಳ್ಳಾರಿ ಮೈನ್ಸ್ ನ ಶ್ರೀನಿವಾಸಲು,ರಾಜ್ ಮಿನರಲ್ಸ್ ನ ಆಶ್ವಕ್ ಅಹ್ಮದ್ಖಾನ್, ಮಾರೀಸ್ ಮೈನ್ಸ್ ನ ಪಳನಿಸ್ವಾಮಿ,ಕೌಶಿಕ್ ಬಾಬು ಸೇರಿದಂತೆ ಇತರರು ಆಗಮಿಸಲಿದ್ದಾರೆ. ಇದೇ ದಿನ ಬೆಳಿಗ್ಗೆ ಭಗೀರಥ ಪೀಠದ ಯುಗಧರ್ಮ ರಾಮಣ್ಣ ಮತ್ತು ಸಂಘಡಿಗರಿಂದ ಜಾನಪದ ತತ್ವ ಪ್ರಚಾರ ಕಾರ್ಯಕ್ರಮ ಹಾಗೂ ಸಂಜೆ ಕಂಚಿವರದರಾಜ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ವೀರಗಾಸೆ ಕಾರ್ಯಕ್ರಮ ನಡೆಯಲಿದ್ದು,ಹಿಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಬೇಂದು ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ