ಸುಜ್ಞಾನನಿಧಿ ಶಿಷ್ಯವೇತನ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಭವಿಷ್ಯಕ್ಕೆ ಬಲ ತುಂಬಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಚಿಕ್ಕನಾಯಕನಹಳ್ಳಿ ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ನಡೆದ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಸಂಸ್ಥೆಯ ಕೊಡುಗೆ ಶ್ಲಾಘನೀಯ:
"ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣ, ಸಮುದಾಯ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳ ಜೊತೆಗೆ ಶಿಕ್ಷಣಕ್ಕೂ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ. ತಾಲೂಕಿನ 926 ವಿದ್ಯಾರ್ಥಿಗಳಿಗೆ ಒಂದು ಕೋಟಿಗೂ ಅಧಿಕ ಶಿಷ್ಯವೇತನ ನೀಡಿರುವುದು ಒಂದು ಅದ್ಭುತ ಸಾಧನೆ. ಈ ಕಾರಣಕ್ಕಾಗಿ, ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವ ಈ ಸಂಸ್ಥೆಗೆ ನಮ್ಮ ಶಿಕ್ಷಣ ಇಲಾಖೆ ಚಿರಋಣಿಯಾಗಿದೆ" ಎಂದು ಕಾಂತರಾಜು ತಿಳಿಸಿದರು.
ಸುಜ್ಞಾನನಿಧಿ: ಶಿಕ್ಷಣಕ್ಕೆ ಆರ್ಥಿಕ ಬಲ:
ಈ ಯೋಜನೆ ಕೇವಲ ಆರ್ಥಿಕ ನೆರವಲ್ಲ, ಇದು ವಿದ್ಯಾರ್ಥಿಗಳ ಮತ್ತು ಅವರ ಕುಟುಂಬಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆ. ಧರ್ಮಸ್ಥಳ ಸಂಸ್ಥೆ ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಅಲ್ಲದೆ, ಶ್ರೀ ಶಕ್ತಿ ಸಂಘಗಳು, ಮಹಿಳಾ ಸಂಘಗಳು ಮತ್ತು ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವುದರಿಂದ ಕಡಿಮೆ ಆದಾಯದ ಕುಟುಂಬಗಳೂ ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ ಎಂದು ಕಾಂತರಾಜು ತಿಳಿಸಿದರು.
ಉತ್ತಮ ನಾಗರಿಕರಾಗಿ, ಇತರರಿಗೆ ಪ್ರೇರಣೆಯಾಗಿ:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಿಷ್ಯವೇತನ ಪಡೆಯುತ್ತಿರುವ ನೀವೆಲ್ಲರೂ ಈ ದೇಶದ ಉತ್ತಮ ನಾಗರಿಕರಾಗಬೇಕು. ಇದು ನಿಮಗೆ ಪ್ರೇರಣೆಯಾಗಿರಬೇಕು" ಎಂದು ಹಾರೈಸಿದರು.
ವೇದಿಕೆಯ ಸದಸ್ಯೆ ಕವಿತಾ ಮಾತನಾಡಿ, "ಶಿಷ್ಯವೇತನ ಪಡೆಯುವುದು ಹೆಮ್ಮೆಯ ವಿಷಯ. ಇದರ ಜೊತೆಗೆ ನೀವು ಇತರರಿಗೂ ಪ್ರೇರಣೆಯಾಗಿರಿ" ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಉಮೇಶ್ ಮಾತನಾಡಿ, "ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ಕುಟುಂಬಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಪೂಜ್ಯ ಧರ್ಮಾಧಿಕಾರಿಗಳ ಉದ್ದೇಶವಾಗಿದೆ. ಈ ಉದ್ದೇಶದಿಂದಲೇ ಸುಜ್ಞಾನನಿಧಿ ಯೋಜನೆ ಪ್ರಾರಂಭಿಸಲಾಗಿದೆ. ಉನ್ನತ ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗಿ" ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಯೋಜನೆಯ ವಿಸ್ತೃತ ಮಾಹಿತಿ:
ತಾಲೂಕಿನ ಯೋಜನಾಧಿಕಾರಿ ಪ್ರೇಮಾನಂದ ಎಲ್.ಬಿ. ಅವರು ಮಾತನಾಡಿ, "ನಮ್ಮ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 1,710 ಸ್ವಸಹಾಯ ಸಂಘಗಳಿದ್ದು, ಅವುಗಳಲ್ಲಿ 14,416 ಸದಸ್ಯರಿದ್ದಾರೆ. ಪ್ರಸ್ತುತ ವರ್ಷದಲ್ಲಿ 160 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾಗಿದೆ. ಪ್ರತಿ ತಿಂಗಳು 286 ವಿದ್ಯಾರ್ಥಿಗಳಿಗೆ ತಲಾ ₹400 ರಿಂದ ₹1,000 ವರೆಗೆ ಶಿಷ್ಯವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಇದಲ್ಲದೆ, ಆಯ್ದ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಕಾಲ ಟ್ಯೂಷನ್ ಕ್ಲಾಸ್ ನಡೆಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ಕವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ