-------------------------
ಹುಳಿಯಾರು : ಬ್ಯಾಂಕುಗಳಲ್ಲಿರುವ ಉಳಿತಾಯ ಖಾತೆಗಳನ್ನು ಸಕ್ರಿಯವಾಗಿ ಇರಿಸಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ಜೋಡಿಸಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಯಳನಾಡು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರಾದ ಭರತ್ ಕುಮಾರ್ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಮತ್ತು ಯಳನಾಡು ಗ್ರಾಮ ಪಂಚಾಯಿತಿ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟವು ಜಂಟಿಯಾಗಿ ಹಮ್ಮಿಕೊಂಡಿದ್ದ ಜನ ಸುರಕ್ಷಾ ಶಿಬಿರದಲ್ಲಿ ಅವರು ಮಾತನಾಡಿದರು.
ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ. ಕುಮಾರಸ್ವಾಮಿ ಮಾತನಾಡಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನ್ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಜನಧನ ಖಾತೆಗಳಂತಹ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಪ್ರಯೋಜನಗಳನ್ನು ಬ್ಯಾಂಕ್ ಮೂಲಕ ನೋಂದಾಯಿಸಿಕೊಂಡು ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿಸರ್ಗ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಚ್.ಎನ್. ಚೇತನಾ, ಕಾರ್ಯದರ್ಶಿ ನಾಗರತ್ನ, ಎಂ.ಬಿ.ಕೆ. ಶ್ರೀಮತಿ ಪರಿಮಳ, ಮತ್ತು ಇತರ ಸದಸ್ಯರಾದ ಪಲ್ಲವಿ, ಶ್ವೇತಾ, ಭಾಗ್ಯ, ಪವಿತ್ರ, ರತ್ನಮ್ಮ, ಜ್ಯೋತಿ, ಸುಮಂಗಳ, ಇಂದ್ರಮ್ಮ, ಸುಜಾತ ಮುಂತಾದವರು ಭಾಗವಹಿಸಿದ್ದರು. ಪಶುಸಖಿ ಮಹಾಲಕ್ಷ್ಮಿ, ಕೃಷಿಸಖಿ ವಿನುತಾ, ಹಾಗೂ ಬಿ.ಸಿ. ಸಖಿ ಭಾಗ್ಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ