ವಿಷಯಕ್ಕೆ ಹೋಗಿ

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ಇತ್ಯರ್ಥ : ರೈತರಿಗೆ ದಾಖಲೆ ಒದಗಿಸಲು ಸೂಚನೆ

ಬಗರ್ ಹುಕುಂ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ಇತ್ಯರ್ಥ: ರೈತರಿಗೆ ದಾಖಲೆ ಒದಗಿಸಲು ಸೂಚನೆ

ಚಿಕ್ಕನಾಯಕನಹಳ್ಳಿ: ಇಲ್ಲಿನ ತಾಲ್ಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಶಾಸಕ ಸಿ.ಬಿ. ಸುರೇಶ್‌ ಬಾಬು ಅವರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಮಿತಿ ಸಭೆ ನಡೆಯಿತು.ಈ ಸಭೆಯಲ್ಲಿ, ತಾಲ್ಲೂಕಿನಾದ್ಯಂತ ಬಗರ್‌ ಹುಕುಂ ತಂತ್ರಾಂಶದಲ್ಲಿ ದಾಖಲಾಗಿದ್ದ ನಮೂನೆ 50, 53, ಮತ್ತು 57ರ ಅರ್ಜಿಗಳನ್ನು ಪರಿಶೀಲಿಸಲಾಯಿತು.ವಿವಿಧ ಕಾರಣಗಳಿಂದ ಅನರ್ಹಗೊಂಡಿದ್ದ ಅರ್ಜಿಗಳನ್ನು ವಜಾ ಮಾಡಿದ ಸಮಿತಿಯು, ಅರ್ಹ ಅರ್ಜಿಗಳ ಪೈಕಿ 48 ಸರ್ಕಲ್‌ಗಳಿಂದ ಆನ್‌ಲೈನ್‌ ಮೂಲಕ ದೃಢೀಕರಿಸಲಾದ ಹಲವು ಅರ್ಜಿಗಳಿಗೆ ಸಾಗುವಳಿ ಚೀಟಿ ನೀಡಲು ಅನುಮೋದನೆ ನೀಡಿತು. ಅಲ್ಲದೆ, ಸಾಗುವಳಿಗೆ ಅರ್ಜಿ ಸಲ್ಲಿಸಿರುವ ರೈತರು ತಮ್ಮ ಸೂಕ್ತ ದಾಖಲೆಗಳನ್ನು ವಿಲೇಜ್ ಅಕೌಂಟೆಂಟ್‌ಗಳಿಗೆ ಒದಗಿಸಬೇಕು ಎಂದು ಶಾಸಕರು ಸೂಚಿಸಿದರು.ಮುಂದಿನ ಬಗರ್‌ ಹುಕುಂ ಸಮಿತಿ ಸಭೆಯನ್ನು ಸೆಪ್ಟೆಂಬರ್ 30, 2025ರಂದು ನಡೆಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ, 48 ಸರ್ಕಲ್‌ಗಳಿಗೆ ಹೊಸ ಗುರಿ (ಟಾರ್ಗೆಟ್) ನಿಗದಿಪಡಿಸಲಾಯಿತು.​ಸಭೆಯಲ್ಲಿ ತಹಶೀಲ್ದಾರ್ ಕೆ. ಪುರಂದರ, ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು