ಪ್ರಭುತ್ವಕ್ಕೆ ಬೇಡ ಭಾಷೆ-ಸಂಸ್ಕೃತಿ ಹೊಣೆ: ಕಣವಿ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆ(ಗದಗ) 19- ಭಾಷೆ-ಸಂಸ್ಕೃತಿ ರೂಪಿಸುವ ಇಲ್ಲವೇ ನಿರ್ವಹಿಸುವ ಅಥವಾ ನಿರ್ಧರಿಸುವ ಕಾರ್ಯವನ್ನು ನಾವೆಂದಿಗೂ ಪ್ರಭುತ್ವಕ್ಕೆ ಒಪ್ಪಿಸಬಾರದು. ಅದು ಪ್ರಜಾಸತ್ತಾತ್ಮಕವಾದ ಚೌಕಟ್ಟಿನಲ್ಲಿಯೇ ನಡೆಯಬೇಕು ಎಂದು ಚೆಂಬೆಳಕಿನ ಕವಿ ನಾಡೋಜ ಡಾ. ಚನ್ನವೀರ ಕಣವಿ ಹೇಳಿದರು. ಶುಕ್ರವಾರ ಇಲ್ಲಿ ಆರಂಭವಾದ 76ನೇ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಇಂದು ರಾಜಕೀಯ ಭ್ರಷ್ಟತೆ, ಭಂಡತನ ಅತಿಯಾಗಿದೆ. ಸಂಸ್ಕೃತಿ ಬಗೆಗಿನ ರಾಜಕಾರಣಿಗಳ ಅಜ್ಞಾನ ಹೆಚ್ಚಿದೆ. ಅಲ್ಲದೇ ಸಂಸ್ಕೃತಿ ಮೇಲೆ ನಾಗರಿಕತೆಯ ದಾಳಿ ನಡೆದಿದೆ. ಕನ್ನಡನಾಡು ಇಂದು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕೆಲವೊಂದು ತಾನೇ ತನ್ನ ಮೈಮೇಲೆ ಎಳೆದುಕೊಂಡ ಬಿಕ್ಕಟ್ಟುಗಳು. ರಾಜಕೀಯ ಎಲ್ಲರನ್ನೂ ಹೆಡೆಮುರಿಗೆ ಕಟ್ಟಿ ಉಸಿರುಗಟ್ಟಿಸುವಂತ ಸ್ಥಿತಿಗೆ ತಲುಪಿಸಿದೆ. ಶಾಂತಿ, ಸಹಿಷ್ಣುತೆ, ಸಹಬಾಳ್ವೆಗೆ ಹೆಸರಾಗಿದ್ದ ನಮ್ಮ ನಾಡಿನಲ್ಲಿ ಇಂದು ಸೇಡು, ಹಿಂಸೆ, ದ್ವೇಷ, ಕ್ರೌರ್ಯ ತಾಂಡವವಾಡುತ್ತಿರುವುದು ದೊಡ್ಡ ವಿರೋಧಾಭಾಸ ಎಂದು ವಿಷಾದಿಸಿದರು. ಪರವಿಚಾರ, ಪರಧರ್ಮವನ್ನು ಸೈರಿಸುವುದೇ ಬದುಕಿನ ಬಂಗಾರ ಎಂದು ಹೇಳಿದ ಕವಿರಾಜ ಮಾರ್ಗದ ಚಕ್ರವರ್ತಿ ನೃಪತಂಗನ ಮುತ್ತಿನಂಥ ಮಾತನ್ನು ನಾವು ಮರೆತಿದ್ದೇವೆ ಎಂದ ಕಣವಿಯವ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070