ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಆರ್ಯವೈಶ್ಯ ಮಂಡಳಿ,ಮಹಿಳಾ ಮಂಡಳಿ ಹಾಗೂ ಶ್ರೀಲಕ್ಷ್ಮೀಶ್ರೀನಿವಾಸ ಭಜನಾ ಮಂಡಳಿಯ ಸಹಯೋಗದಲ್ಲಿ ವಾಸವಿ ದೀಕ್ಷಾ ಸಂಘದವರು ಸತತ 10ನೇ ವರ್ಷದ ದೀಕ್ಷಾ ಹಾಗೂ ಇರುಮುಡಿ ಕಾರ್ಯಕ್ರಮವನ್ನು ಇಂದು (ತಾ.25) ಬುಧವಾರ ಹಮ್ಮಿಕೊಂಡಿದ್ದಾರೆ.
ತಾ.22ರ ಭಾನುವಾರ ಕಳಸ ಸ್ಥಾಪನೆ,ಕುಂಕುಮಾರ್ಚನೆಯೊಂದಿಗೆ ಪ್ರಾರಂಭಗೊಂಡಿರುವ ದೀಕ್ಷಾ ಕಾರ್ಯಕ್ರಮದಲ್ಲಿ ಇಂದು ಬೆಳಿಗ್ಗೆ 7ಕ್ಕೆ ಇರುಮುಡಿ ಕಾರ್ಯ, 10ಕ್ಕೆ ಹಿರಿಯೂರಿನ ಪುರೋಹಿತರಾದ ಶ್ರೀನಿವಾಸಮೂರ್ತಿಗಳ ಸಮ್ಮುಖದಲ್ಲಿ ವಾಸವಿ ಹೋಮ,ಮಹಾಮಂಗಳಾರತಿ ನಡೆಯಲಿದ್ದು, ಆಗಮಿಸಿದ್ದ ಭಕ್ತಾಧಿಗಳಿಗೆ ಮಧ್ಯಾಹ್ನ ಅನ್ನಸಂರ್ಪಣೆಯು ನಡೆಯಲಿದೆ. ಸಂಜೆ ವಾಸವಿ ಅಮ್ಮನವರ ಮೆರವಣಿಗೆ ಕಾರ್ಯದ ನಂತರ ಅಗ್ನಿಂಕುಂಡ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ವಾಸವಿ ದೀಕ್ಷಾ ಸಂಘದವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ