-----------------------------------------------------------------------------
ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿರುವ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ.
ಹೈದರಾಬಾದ್ ನ ಬಾಲನಗರದ ಎಚ್.ಎ.ಎಲ್ ಗ್ರೌಂಡ್ ನಲ್ಲಿ ಕಳೆದ ಜನವರಿ 10 ರಿಂದ 17ರವರೆಗೆ ನಡೆದ 57ನೇ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯದ ಪುರುಷರ ಸೀನಿಯರ್ಸ್ ತಂಡ ಆತೀಥೆಯ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು 3ನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಜನವರಿ 10ರಿಂದ 13ರವರೆಗೆ ಪುರುಷ ಹಾಗೂ ಮಹಿಳೆಯರ ಸೀನಿಯರ್ಸ್ ವಿಭಾಗ ಹಾಗೂ ಜ.14 ರಿಂದ 17ರವರೆಗೆ ಜೂನಿಯರ್ಸ್ ವಿಭಾಗಕ್ಕೆ ನಡೆದ ಟೂರ್ನಿಯಲ್ಲಿ 26 ರಾಜ್ಯದ 800 ಜನ ಕ್ರೀಡಾಪಟುಗಳು ಭಾಗವಹಿಸಿದ್ದರು.ಪ್ರಾರಂಭದಿಂದಲೂ ಕರ್ನಾಟಕ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು,ಲೀಗ್ ಪಂದ್ಯದಲ್ಲಿ ಚತ್ತೀಸ್ ಘಡ್,ಚಂಡೀಘಡ್,ಬಿಹಾರ ಹಾಗೂ ಮಹಾರಾಷ್ಟ್ರ ತಂಡಗಳನ್ನು ಮಣಿಸಿ,ಕ್ವಾಟರ್ ಫೈನಲ್ ನಲ್ಲಿ ಕೇರಳ ತಂಡದ ವಿರುದ್ದ ಜಯಿಸಿತು.ಜ.12ರಂದು ನಡೆದ ಸೆಮಿಫೈನಲ್ ನಲ್ಲಿ ತಮಿಳಿನಾಡು ತಂಡವನ್ನು 29-28,29-19ರ ನೇರ ಸೆಟ್ ನಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತು.ಜ.13ರಂದು ನಡೆದ ಹೊನಲು ಬೆಳಕಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡದ ಎದುರು 29-24,29-06ರ ನೇರ ಸೆಟ್ ಗಳಲ್ಲಿ ಜಯಿಸಿ ವಿಜಯಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಟೂರ್ನಿಯಲ್ಲಿ ಕರ್ನಾಟಕದ ಪುರುಷರ ತಂಡಕ್ಕೆ ಶ್ರೀರಂಗಪಟ್ಟಣದ ಎಸ್.ಜಿ.ವೆಂಕಟರಾಮನ್ ನಾಯಕತ್ವವಹಿಸಿದ್ದು, ಹುಳಿಯಾರು ಕೆನರಾಬ್ಯಾಂಕ್ ನ ಎಚ್.ಎಲ್.ಸತೀಶ್,ಭದ್ರಾವತಿಯ ಜಗನ್ನಾಥ್,ದೊಡ್ಡಬಳ್ಳಾಪುರದ ಕಿರಣ್ ಕುಮಾರ್,ಬೆಂಗಳೂರು ಕೆನರಾಬ್ಯಾಂಕಿನ ಮಹದೇವ್, ಸುದರ್ಶನ್.ಬಿ, ಹಾಗೂ ಗಿರಿ ಪ್ರಸಾದ್ ,ತುಮಕೂರಿನ ಎಸ್.ದಿವಾಕರ್,ದಾವಣಗೆರೆಯ ಕುಮಾರ್ ಸ್ವಾಮಿ, ಬೆಂಗಳೂರಿನ ವಿಜಯ್ ಕುಮಾರ್ ಭಾಗವಹಿಸಿದ್ದ ತಂಡದಲ್ಲಿ ಎಸ್.ನರೇಂದ್ರ್ರ ಕೋಚ್ ಹಾಗೂ ಆರ್.ಶಿವಣ್ಣ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕದ ಪುರುಷರ ತಂಡವು ಈ ಮೊದಲು 2006-2007 ಪ್ರಥಮವಾಗಿ ಹಾಗೂ 2007-2008ರಲ್ಲಿ ದ್ವಿತೀಯ ಬಾರಿಗೆ ಪ್ರಶಸಿಯನ್ನು ಪಡೆದಿದ್ದು,ನಂತರ ಮೂರುವರ್ಷಗಳ ತರುವಾಯ ಮತ್ತೊಮ್ಮೆ ಕಠಿಣ ಪರಿಶ್ರಮದಿಂದಾಗಿ 3ನೇ ಬಾರಿ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನ ಛೇರ್ಮನ್ ರಾಜಶೇಖರ್,ಪ್ರಖ್ಯಾತ ಚಿತ್ರನಟ ಪವರ್ ಸ್ಟಾರ್ ಪವನ್ ಕಲ್ಯಾಣ್,ನಟ ಶಿವಾಜಿ ಅವರ ಉಪಸ್ಥಿತಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೂನರ್ಿಯಲ್ಲಿ ಉತ್ತಮ ಕ್ರೀಡಾಪಟುಗೆ ನೀಡುವ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಕರ್ನಾಟಕ ಪುರುಷರ ತಂಡದ ಶ್ರೀರಂಗಪಟ್ಟಣದ ಎಸ್.ಜಿ.ವೆಂಕಟರಾಮನ್ ಹಾಗೂ ತುಮಕೂರಿನ ದಿವಾಕರ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಪಡೆದ ಕರ್ನಾಟಕ ತಂಡದ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ನ ಕ್ರೀಡಾಪಟು ಎಚ್.ಎಲ್.ಸತೀಶ್ ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡು,ಹುಳಿಯಾರಿನಲ್ಲಿ ನಡೆದ ಫಿಟ್ ನೆಸ್ ಕ್ಯಾಂಪ್ ಆಟಗಾರರ ಸದೃಡತೆಗೆ ನೆರವಾಯಿತು. ಹುಳಿಯಾರಿನಲ್ಲಿ ಒಂದುವಾರಗಳ ಕಾಲ ನಡೆದ ಆಯ್ಕೆ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆಟಗಾರರಲ್ಲಿನ ಪ್ರತಿಭೆಯನ್ನು ಗುರ್ತಿಸಲು ಶಿಬಿರ ನಡೆಸಲು ನೆರವಾದ ಸುಶೀಲಮ್ಮ ಮೈನ್ಸ್ ಹಾಗೂ ಕ್ರಿಯಾಶೀಲಾ ಕ್ರೀಡಾ ಸಂಸ್ಥೆಯ ನರೇಂದ್ರಬಾಬು,ಸೀತಾರಾಮ ಪ್ರತಿಷ್ಠಾನದ ವಿಶ್ವನಾಥ್ ಮತ್ತು ರಂಗನಾಥ ಪ್ರಸಾದ್,ವಾಸವಿ ಸಂಸ್ಥೆಯ ಲಕ್ಷ್ಮಿಕಾಂತ್,ಚಂದ್ರಶೇಖರ್ ಹಾಗೂ ರೋಟರಿ ಸಂಸ್ಥೆಯ ಮಂಜುನಾಥ ಗುಪ್ತ ಅವರ ಸಹಕಾರಕ್ಕೆ ನಾವೆಲ್ಲರೂ ಆಬಾರಿಯಾಗಿದ್ದೇವೆ ಎಂದರು. ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಕಲಾತ್ಮಕ ಕ್ರೀಡೆಯಾಗಿದ್ದರೂ ಸಹ ಕೇವಲ ದಕ್ಷಿಣ ಭಾರತದ ಕ್ರೀಡೆ ಎಂಬ ನೆಪದಿಂದ ಪ್ರಚಾರದಿಂದ ಹೊರಗುಳಿದಿದೆ. ಈ ಕ್ರೀಡೆ ದಕ್ಷಿಣಭಾರತಕ್ಕೆ ಸೀಮಿತವಾಗಿರದೇ ಇಡೀ ದೇಶದ ಕ್ರೀಡೆಯಾಗುವಂತೆ ಮಾಡುವ ಗುರಿ ನಮ್ಮದಾಗಿದೆ ಎಂದರು. ಮಾದ್ಯಮಗಳಲ್ಲಿ ಇತರೆ ಕ್ರೀಡೆಗಳಿಗೆ ದೊರೆಯುವಷ್ಟು ಪ್ರಚಾರ ಈ ಕ್ರೀಡೆಗೆ ಸಿಗದಿರುವುದಕ್ಕೆ ಬೇಸಕ ವ್ಯಕ್ತಪಡಿಸಿದ ಅವರು ಇನ್ನಾದರೂ ಸಹ ಮಾದ್ಯಮಗಳು ಸಾಕಷ್ಟು ಪ್ರಚಾರ ನೀಡಿದಲ್ಲಿ ಹೆಚ್ಚನ ಕ್ರೀಡಾಪಟುಗಳು ಆಸಕ್ತಿವಹಿಸುವ ಮೂಲಕ ಇನ್ನಷ್ಟೂ ಸಾಧನೆಗೈಯಬಹುದೆಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಟೂರ್ನಿಯಲ್ಲಿ ಕರ್ನಾಟಕದ ಸೀನಿಯರ್ಸ್ ಪುರುಷರ ತಂಡ ಮೊದಲ ಸ್ಥಾನ ಪಡೆದರೆ,ಫೈನಲ್ ಪ್ರವೇಶಿಸಿದ್ದ ಸೀನಿಯರ್ಸ್ ಮಹಿಳೆಯರ ತಂಡ ಕೂಡ ಫೈನಲ್ ಪ್ರವೇಶಿಸಿದ್ದರೂ ತಮಿಳುನಾಡು ತಂಡದ ವಿರುದ್ದ 29-24,29-26ರ ನೇರ ಸೆಟ್ ನ ಸಮೀಪದಲ್ಲಿ ಪರಾಭವಗೊಂಡು ದ್ವಿತೀಯ ಸ್ಥಾನಪಡೆದುಕೊಂಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ