ಹುಳಿಯಾರು ಹೋಬಳಿಯ ಬಳ್ಳೆಕಟ್ಟೆಯ ಸುವರ್ಣಮುಖಿ ಕ್ಯಾಂಪಸ್ ನ ಬಸಪ್ಪ,ಮರುಳಪ್ಪ ಸೇವಾ ಟ್ರಸ್ಟ್ ನ ವಿದ್ಯಾವಾರಿಧಿ ಇಂಟರ್ ನ್ಯಾಷಶನಲ್ ಸ್ಕೂಲ್ ನಲ್ಲಿ 5ನೇ ವರ್ಷದ ವಾಷರ್ಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬ ಜ.27ರ ಶುಕ್ರವಾರ ಮತ್ತು ಜ.28ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.
ಎಸ್.ಬಿ.ಎಮ್.ಎಸ್.ಟಿ ಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸುವರು.ಶಾಲೆಯ ಕಾರ್ಯದಶರ್ಿ ಕವಿತಾ ಕಿರಣ್ ಕಿರಣ್ ಕುಮಾರ್,ಬೆಂಗಳೂರು ವಾಗ್ದೇವಿ ವಿಲಾಸ್ ಸಂಸ್ಥೆಯ ಛೇರ್ ಮನ್ ಕೆ.ಹರೀಶ್, ಚಿ.ನಾ.ಹಳ್ಳಿ ಸ.ಪ್ರ.ದ.ಕಾಲೇಜಿನ ಪ್ರಾಚಾರ್ಯ ಎ.ಎನ್,ವಿಶ್ವೇಶ್ವರಯ್ಯ ಅವರು ಅತಿಥಿಗಳಾಗಿ ಆಗಮಿಸುವರು. ಮಕ್ಕಳಿಂದ ಜಿಮ್ನಾಸ್ಟಿಕ್,ವೀರಗಾಸೆ,ಶ್ರೀಕೃಷ್ಣಸಂದಾನ,ಜಾನಪದ ನೃತ್ಯ,ಜೋದಾ ಅಕ್ಬರ್ ಅಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ