ಹೋಬಳಿಯ ಹುಳಿಯಾರು-ಕೆಂಕರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್,ರಾಜ್ಯ ಏಡ್ಸ್ ಪ್ರಿವೆನ್ಸ್ ನ್ ಸಂಸ್ಥೆ,ಕಾಲೇಜಿನ ಎನ್.ಎಸ್.ಎಸ್. ಘಟಕವರು ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಆತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು.
ಏಡ್ಸ್ ರೋಗ ಹೆಚ್.ಐ.ವಿ ಎಂಬ ವೈರಸ್ ನಿಂದ ಹರಡುವಂತ ರೋಗವಾಗಿದ್ದು,ಇದು ಮೂಲತಃ ಅಮೇರಿಕಾದ ಚಿಕಾಗೋದಿಂದ ಭಾರತವನ್ನು ಪ್ರವೇಶಿಸಿತು.ಜೊತೆಗೆ ಈಡಿ ಜಗತ್ತಿನಾದ್ಯಂತ ಹರಡುವ ಮೂಲಕ ಮಹಾಮಾರಿ ರೋಗವೆಂದು ಗುರ್ತಿಸಿಕೊಂಡಿದೆ. ಇದಕ್ಕೆ ಹೆಚ್ಚಿನದಾಗಿ ಯುವಜನತೆ ಏಕೆ ಬಲಿಯಾಗುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿದರು.ಅದಕ್ಕಾಗಿ ಇಂದಿನ ಯುವಜನತೆ ಏಡ್ಸ್ ಹರಡುವ ರೀತಿಯನ್ನು ತಿಳಿದು,ಅದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಡಾಜಯಶೀಲಾ ಮಾತನಾಡಿ ಹೆಚ್.ಐ.ವಿ ರೋಗ ಹರಡುವ ಬಗೆ,ಅದರ ಗುಣ ಲಕ್ಷಣಗಳು,ಅದು ತಮ್ಮನ್ನು ಅವರಿಸದಂತೆ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳನ್ನು ತಿಳಿಸಿದರು.ಅಲ್ಲದೆ ಏಡ್ಸ್ ರೋಗವಿರುವವರನ್ನು ದೂರವಿಡದೆ,ಅವರಿಂದ ಮತ್ತೊಬ್ಬರಿಗೆ ರೋಗ ಹರಡದಂತೆ ನೋಡಿಕೊಳ್ಳಬೇಕಿದೆ.ಇಂದಿನ ವಿದ್ಯಾರ್ಥಿಗಳು ಏಡ್ಸ್ ರೋಗದ ಬಗ್ಗೆ ತಿಳಿದು ತಮ್ಮ ಸುತ್ತಲಿನ ಮನೆಯವರಿಗೆ, ಸ್ನೇಹಿತರಿಗೆ ಇದರ ಬಗ್ಗೆ ತಿಳಿಸುವ ಕಾರ್ಯ ನಡೆಯಬೇಕಿದೆ ಎಂದರು.
ಡಾರಜನೀಶ್ ಬಾಬು ಮಾತನಾಡಿ ಹೆಚ್.ಐ.ವಿ ಹರಡುವ ಪ್ರಮುಖ 4ಹಂತಗಳು,ಅದನ್ನು ತಡೆಯುವ ವಿಧಾನಗಳನ್ನು ಸೂಕ್ಷ್ಮವಾಗಿ ತಿಳಿಸಿದರು.ಅಲ್ಲದೆ ಈ ರೋಗ ತನಗೆ ತಾನೇ ಬರುವುದಿಲ್ಲ, ಅದಕ್ಕಾಗಿ ಸುರಕ್ಷಿತ ಲೈಂಗಿಕತೆ, ವಿವಾಹ ಪೂರ್ವ ಲೈಂಗಿಕತೆ ಹೊಂದದಂತೆ ಎಚ್ಚರ ವಹಿಸಬೇಕಿದೆ ಎಂದರು.
ಪ್ರಾಂಶುಪಾಲ ಎಂ.ಎನ್.ನಾಗರಾಜು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕದ ಅಧಿಕಾರಿಗಳಾದ ಶಂಕರಲಿಂಗಯ್ಯ,ಉಪನ್ಯಾಸಕ ಇಬ್ರಾಹಿಂ,ಆಂಗ್ಲ ಉಪನ್ಯಾಸಕ ಶ್ರೀನಿವಾಸ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಕಾವ್ಯ ಪ್ರಾರ್ಥಿಸಿ,ನಯನ ಸ್ವಾಗತಿಸಿ,ಶಿವಗಂಗಾ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ